ಯಾರಿಗೂ ಕೇಳದ ಶ್ರಮಜೀವಿಗಳ ಕೂಗು

blank

ದಾವಣಗೆರೆ: ಪ್ರತಿದಿನವೂ ಬೆಳಕು ಹರಿಯುತ್ತಿದ್ದಂತೆ ಮಳೆ, ಚಳಿ, ಗಾಳಿ ಯಾವುದನ್ನೂ ಲೆಕ್ಕಿಸದೆ ಮನೆ ಮನೆಗೆ ದಿನಪತ್ರಿಕೆ ತಲುಪಿಸುವ ಕೆಲಸ ಸುಲಭದ ಮಾತಲ್ಲ. ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಪತ್ರಿಕಾ ವಿತರಕರು ದುಡಿಯುತ್ತಿದ್ದು, ಹಲವು ವರ್ಷಗಳಿಂದ ಬೇಡಿಕೆಗಳ ಈಡೇರಿಕೆಗೆ ಶ್ರಮಜೀವಿಗಳು ಪ್ರಯತ್ನ ನಡೆಸುತ್ತಲೇ ಬಂದಿದ್ದಾರೆ. ಸೋಮವಾರ ಬೆಳಗ್ಗೆ 10.30ಕ್ಕೆ ನಗರದ ಕುವೆಂಪು ಕನ್ನಡ ಭವನದಲ್ಲಿ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಮತ್ತು ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಹಲವು ಪತ್ರಿಕಾ ವಿತರಕರು ತಮ್ಮ ಸಂಕಷ್ಟ ತೋಡಿಕೊಂಡು ಸರ್ಕಾರದ ಗಮನ ಸೆಳೆದಿದ್ದಾರೆ.

ಮಾಸಾಶನ ಒದಗಿಸಲಿ: ಪತ್ರಿಕಾ ವಿತರಕರು ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ. ಅಪಘಾತಕ್ಕೆ ಒಳಗಾದರೆ ಕೆಲಸವಿಲ್ಲದೆ ಕೂರಬೇಕು. ಹೀಗಾಗಿ, ಸರ್ಕಾರ ವಿತರಕರಿಗೆ ಅಪಘಾತ ವಿಮೆ ಹಾಗೂ ಆರೋಗ್ಯ ಸೌಲಭ್ಯ ಕಲ್ಪಿಸಬೇಕು. ಕನಿಷ್ಟ 25 ವರ್ಷದಿಂದ ಕೆಲಸ ಮಾಡುವವರಿಗೆ ನಿವೇಶನ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಮಾಸಾಶನ ನೀಡುವ ವ್ಯವಸ್ಥೆ ಆಗಬೇಕು ಎನ್ನುತ್ತಾರೆ ದಾವಣಗೆರೆ ಹಿರಿಯ ವಿತರಕ ನಿತ್ಯಾನಂದ ಕಾಮತ್.

ಯಾರಿಗೂ ಕೇಳದ ಶ್ರಮಜೀವಿಗಳ ಕೂಗು

ಸೂರು ಯೋಜನೆ ಜಾರಿಗೊಳಿಸಲಿ: ಪ್ರತಿದಿನ ಬೆಳ್ಳಂಬೆಳಗ್ಗೆ ಚಳಿ,ಮಳೆ, ಗಾಳಿ ಯಾವುದಕ್ಕೂ ಅಂಜದೆ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸುತ್ತೇವೆ, ತಾಜಾ ಸುದ್ದಿಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತೇವೆ. ಆದರೆ, ಪತ್ರಿಕಾ ವಿತರಕರ ಜೀವ ಮತ್ತು ಜೀವನಕ್ಕೆ ಭದ್ರತೆ ಇಲ್ಲ. ರಾಜ್ಯ ಸರ್ಕಾರ ವಿಮೆ ಮಾಡಿಸಬೇಕು. ಬೈಕ್ ತೆಗೆದುಕೊಳ್ಳಲು ರಿಯಾಯಿತಿ ಸಾಲ ಸೌಲಭ್ಯ ಕಲ್ಪಿಸಬೇಕು. ಸೂರು ನೀಡುವ ಯೋಜನೆ ಜಾರಿಗೆ ತರಬೇಕು ಎಂದರು ಹೊನ್ನಾಳಿ ಚಂದ್ರಪ್ಪ.

ಜೀವ, ಜೀವನಕ್ಕಿಲ್ಲ ಬೆಲೆ, ಭದ್ರತೆ: ಪತ್ರಿಕೆಗಳನ್ನು ಹಂಚಿಕೆ ಮಾಡಿ ಬಂದ ಕಮಿಷನ್‌ನಲ್ಲಿ ವಿತರಕರು ಜೀವನ ನಡೆಸುತ್ತೇವೆ. ಆದರೆ, ಜೀವಕ್ಕೆ ಯಾವುದೇ ಭದ್ರತೆ ಇಲ್ಲ. ಶಕ್ತಿ ಇರುವವರೆಗೆ ಕೆಲಸ ಮಾಡುತ್ತೇವೆ. ಆದರೆ ಗುರುತಿಸುವವರು ಇಲ್ಲ. ಸರ್ಕಾರ ಆಡಳಿತಕ್ಕೆ ಬರುವ ಮೊದಲು ನೀಡಿದ ಭರವಸೆಗಳನ್ನು ಅಧಿಕಾರಕ್ಕೆ ಬರುತ್ತಿದ್ದಂತೆ ಮರೆಯುತ್ತದೆ. ಕತ್ತಲಲ್ಲಿ ಪತ್ರಿಕೆ ಹಂಚುವಾಗ ಆಗುವ ಅನಾಹುತಗಳಿಗೆ ಯಾರೂ ಹೊಣೆಯಾಗುವುದಿಲ್ಲ. ಪತ್ರಿಕೆ ವಿತರಕರನ್ನು ಸರ್ಕಾರ ಗುರುತಿಸಬೇಕು ಎಂದು ಚನ್ನಗಿರಿ ಕೆ.ಎಂ.ಬಸವರಾಜ್ ಹೇಳಿದರು.

ವಿಮಾ ಸೌಲಭ್ಯ ಕಲ್ಪಿಸಲಿ: ಓದುಗರು ಮತ್ತು ಪತ್ರಿಕೆಯ ಕೊಂಡಿಯಾಗಿ ವಿತರಕರು ಕೆಲಸ ಮಾಡುತ್ತಿದ್ದು ನಮಗೆ ಕನಿಷ್ಟ ಸೌಲಭ್ಯವೂ ಇಲ್ಲ. ಕೊನೆಯ ಪಕ್ಷ ಗುರುತಿನ ಚೀಟಿಯೂ ಇಲ್ಲದಿರುವುದು ಬೇಸರ. ಹಲವು ವರ್ಷಗಳಿಂದ ಪ್ರತಿದಿನ ಯಾವುದೇ ಕಷ್ಟಗಳಿದ್ದರೂ ಪತ್ರಿಕೆ ವಿತರಿಸುವ ಕೆಲಸ ಮಾಡುತ್ತಿದ್ದು ಕಮಿಷನ್ ಹೊರತುಪಡಿಸಿದರೆ ಸರ್ಕಾರದಿಂದ ಯಾವುದೇ ಸೌಲಭ್ಯ ಇಲ್ಲ. ಪತ್ರಿಕಾ ವಿತರಕರಿಗೆ ಸೈಕಲ್, ಆರೋಗ್ಯ, ಇನ್ಸೂರೆನ್ಸ್ ಮೊದಲಾದ ಸೌಲಭ್ಯ ಒದಗಿಸಬೇಕು ಹಾಗೂ ವಿತರಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎನ್ನುತ್ತಾರೆ ಕೆಂಚಿಕೊಪ್ಪ ಡಿ.ಬಿ.ನಾಗರಾಜ್.

ಗೌರವ ಸಂಭಾವನೆ ನೀಡಲಿ: ಪತ್ರಿಕಾ ವಿತರಕರು ಪತ್ರಿಕಾ ವಿತರಣೆಯನ್ನು ತಮ್ಮ ವೃತ್ತಿ ಹಾಗೂ ಪ್ರವೃತ್ತಿಯಾಗಿ ಕಾರ್ಯ ನಿರ್ವಹಿಸುತ್ತಾ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇದುವರೆಗೂ ಪತ್ರಿಕಾ ವಿತರಕರನ್ನು ಸರ್ಕಾರ ಗುರುತಿಸಿಲ್ಲ ಎಂಬುದು ನಗ್ನ ಸತ್ಯ. ಇಂದಿನ ದಿನಮಾನಗಳಲ್ಲಿ ವಿತರಕರಿಗೆ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಸರ್ಕಾರ ವಿತರಕರಿಗೆ ತಿಂಗಳಿಗೆ ಇಂತಿಷ್ಟು ಗೌರವ ಸಂಭಾವನೆ ಹಾಗೂ ವಿಮಾ ಸೌಲಭ್ಯ ಕಲ್ಪಿಸಲು ಗಮನ ಹರಿಸಬೇಕು ಎಂದರು ಹರಿಹರ ಶಿವಕುಮಾರ್.

ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಲಿ: ಪ್ರತಿ ಮನೆಗಳಿಗೂ ಪತ್ರಿಕೆ ತಲುಪಲು ಮೂಲ ಕಾರಣ ಪ್ರತಿಕಾ ವಿತರಕರು. ಆದರೆ, ಸರ್ಕಾರ ಎಲ್ಲ ಕ್ಷೇತ್ರಗಳಿಗೂ ಅನೇಕ ಕಾರ್ಯಕ್ರಮ ಕೊಟ್ಟಿದೆ. ಮೂಲಸೌಕರ್ಯ ಕಲ್ಪಿಸಿದೆ, ನಮ್ಮಂತ ಸಾವಿರಾರು ಕುಟುಂಬಗಳು ಸಂಕಷ್ಟದಲ್ಲಿದ್ದರೂ ಯಾವ ಸರ್ಕಾರಗಳೂ ಗಮನಿಸುತ್ತಿಲ್ಲ. ಪತ್ರಿಕಾ ವಿತರಕರಿಗೆ ಪ್ರತ್ಯೇಕ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು, ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವಾ ಸೌಲಭ್ಯ ಒದಗಿಸಬೇಕು, 60 ವರ್ಷ ಮೇಲ್ಪಟ್ಟ ವಿತರಕರಿಗೆ ಪಿಂಚಣಿ, ಅಪಘಾತ ವಿಮೆ ಸೌಲಭ್ಯ ಕಲ್ಪಿಸಬೇಕು ಎನ್ನುತ್ತಾರೆ ಜಗಳೂರು ಸಿದ್ದೇಶ್.

Share This Article

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…

Health Tips: ನೆಲದ ಮೇಲೆ ಕುಳಿತುಕೊಂಡು ತಿನ್ನಲು ಸಾಧ್ಯವಿಲ್ಲವೇ? ಆದ್ರೆ ಈ ಅದ್ಭುತ ಪ್ರಯೋಜನಗಳೇನು ಗೊತ್ತಾ?

Health Tips: ನಮ್ಮ ಹಿರಿಯರು ಊಟ ಮಾಡುವಾಗ ನೆಲದ ಮೇಲೆ ಕಾಲು ಮಡಚಿ ಕೂರುತ್ತಿದ್ದರು. ಆಧುನಿಕ ಕಾಲದಲ್ಲಿ…

Alcohol In Winter: ಚಳಿಯಲ್ಲಿ ಮದ್ಯ ಸೇವನೆ ಎಷ್ಟು ಅಪಾಯಕಾರಿ ಗೊತ್ತಾ?

Alcohol In Winter: ಚಳಿಗಾಲ ಆರಂಭವಾಗಿದೆ ಮತ್ತು ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಲ್ಲದೆ, ಜ್ವರ…