23.9 C
Bangalore
Friday, December 6, 2019

ನೈಜ ವರದಿಗೆ ಪ್ರಾಧಾನ್ಯತೆ ನೀಡಿ

Latest News

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ರಾಜವೀರ ಮದಕರಿ ನಾಯಕ ಸಿನಿಮಾಕ್ಕೆ ಮುಹೂರ್ತ

ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ಐತಿಹಾಸಿಕ ಸಿನಿಮಾ ರಾಜವೀರ ಮದಕರಿ ನಾಯಕ ಸಿನಿಮಾದ ಮುಹೂರ್ತ ಕೆಂಪೇಗೌಡ ನಗರ (ಗವಿಪುರಂ ಗುಟ್ಟಹಳ್ಳಿ)ಯಲ್ಲಿ ಶುಕ್ರವಾರ...

 ಕೆಎಸ್ಒಯುನಿಂದ ಐಬಿಪಿಎಸ್ ಪರೀಕ್ಷೆಗೆ ತರಬೇತಿ: ಹೆಸರು ನೋಂದಾಯಿಸಲು ಡಿ.10 ಕೊನೇ ದಿನ

ಬೆಂಗಳೂರು: ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ನಡೆಸುವ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ಮತ್ತು ಗುಮಾಸ್ತರ ನೇಮಕಾತಿ ಪರೀಕ್ಷೆಗೆ ಕರ್ನಾಟಕ ರಾಜ್ಯ ಮುಕ್ತ...

ವಿದರ್ಭ ನೀರಾವರಿ ಹಗರಣದಲ್ಲಿ ಅಜಿತ್ ಪವಾರ್​ಗೆ ಕ್ಲೀನ್ ಚಿಟ್​​ ನೀಡಿದ ಮಹಾರಾಷ್ಟ್ರ ಎಸಿಬಿ

ನಾಗಪುರ: ವಿದರ್ಭ ನೀರಾವರಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರೀಯವಾದಿ ಕಾಂಗ್ರೆಸ್​ ಪಕ್ಷ(ಎನ್​ಸಿಪಿ) ನಾಯಕ ಅಜಿತ್ ಪವಾರ್​​ಗೆ ಮಹಾರಾಷ್ಟ್ರ...

ಸಾಲ ಮರುಪಾವತಿ ಅವಧಿ ವಿಸ್ತರಣೆ : ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಿಗೆ ಸೌಲಭ್ಯ

ಬೆಂಗಳೂರು: ಸಿಂಡಿಕೇಟ್ ಬ್ಯಾಂಕ್ ತನ್ನ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್​ಎಂಇ) ಸಾಲದ ವಿನ್ಯಾಸವನ್ನು ಪರಿಷ್ಕರಿಸಿದ್ದು, ಎಂಎಸ್​ಎಂಇ ಗ್ರಾಹಕರ ಸಾಲ ಮರುಪಾವತಿ...

ಗ್ವಾಟೆಮಾಲಾ ನಗರದಲ್ಲಿ ಟಿವಿಎಸ್ ಫ್ಲ್ಯಾಗ್​ಶಿಪ್ ಶೋರೂಂ: ಕ್ಯಾಡಿಸಾ ಸಂಸ್ಥೆ ಸಹಯೋಗದೊಂದಿಗೆ ನೂತನ ಮಳಿಗೆ

ಬೆಂಗಳೂರು: ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ತಯಾರಿಕೆಯಲ್ಲಿ ವಿಶ್ವದ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾದ ಟಿವಿಎಸ್ ಮೋಟಾರ್ ಕಂಪನಿ, ಕ್ಯಾಡಿಸಾ ಸಹಭಾಗಿತ್ವದಲ್ಲಿ ಮಧ್ಯ ಅಮೇರಿಕಾದ ಗ್ವಾಟೆಮಾಲಾ...

ರಬಕವಿ/ಬನಹಟ್ಟಿ: ಪತ್ರಕರ್ತರು ನೈಜ ವರದಿಗೆ ಪ್ರಾಧಾನ್ಯತೆ ನೀಡುವ ಮೂಲಕ ಆಸೆ-ಆಮಿಷಗಳಿಂದ ದೂರ ಉಳಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಬನಹಟ್ಟಿ ನಗರದ ಸ.ಜ. ನಾಗಲೋಟಿಮಠ ಸಾಹಿತ್ಯ ಪ್ರತಿಷ್ಠಾನ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಅಂಕು-ಡೊಂಕು ತಿದ್ದುವ ಪತ್ರಿಕೋದ್ಯಮ ಸಮಾಜದ ಬಾರಕೋಲಿದ್ದಂತೆ. ರಬಕವಿ-ಬನಹಟ್ಟಿ ಪತ್ರಿಕಾ ಭವನ ಕಾರ್ಯಾಲಯ ಕಾಮಗಾರಿ ಶೀಘ್ರ ಆರಂಭಿಸುವುದಾಗಿ ಭರವಸೆ ನೀಡಿದರು.

ಜೆಡಿಎಸ್ ಮುಖಂಡ ಬಸವರಾಜ ಕೊಣ್ಣೂರ ಮಾತನಾಡಿ, ಜಾಗತೀಕರಣದಲ್ಲಿ ಪತ್ರಕರ್ತರ ಜವಾಬ್ದಾರಿ ಹೆಚ್ಚಿದೆ. ಯುವ ಜನತೆಯ ಹಿತ ಬಯಸುವ ಹಾಗೂ ಹೊಸ ಆಯಾಮಗಳಿಂದ ಕೂಡಿದ ವರದಿಗಳನ್ನು ಪ್ರಕಟಿಸಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಪತ್ರಿಕಾ ರಂಗದ ಪಾತ್ರ ಹಿರಿದಾಗಿದೆ ಎಂದರು. ಸಾಹಿತಿ ಡಾ. ಶಾರದಾ ಮುಳ್ಳೂರ ಮಾತನಾಡಿ, ತನ್ನ ಜವಾಬ್ದಾರಿ ಅರಿತು ಸಮಾಜ ತಿದ್ದುವ ಕಾರ್ಯದಲ್ಲಿ ತೊಡಗಿಕೊಂಡಿರುವ ಪತ್ರಿಕೋದ್ಯಮ ಮಾನವೀಯ ಮೌಲ್ಯ ಕಳೆದುಕೊಳ್ಳಬಾರದು ಎಂದರು.

ರಬಕವಿ-ಬನಹಟ್ಟಿ ಕಾನಿಪ ಸಂಘದ ಅಧ್ಯಕ್ಷ ಕಿರಣ ಆಳಗಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಮಹೇಶ ಅಂಗಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಬಾಳಕ್ಕನವರ, ಜಿಲ್ಲಾ ಉಪಾಧ್ಯಕ್ಷ ಆನಂದ ದಲಭಂಜನ, ಗೌರವಾಧ್ಯಕ್ಷ ನೀಲಕಂಠ ದಾತಾರ, ಮಲ್ಲಿಕಾರ್ಜುನ ಹುಲಗಬಾಳಿ, ಸಾಹಿತಿಗಳಾದ ಜಯವಂತ ಕಾಡದೇವರ, ಜಿ.ಎಸ್. ವಡಗಾಂವಿ, ಶಿವಜಾತ ಉಮದಿ, ಶ್ರೀಶೈಲ ಕೋಪರ್ಡೆ, ಯಶವಂತ ವಾಜಂತ್ರಿ, ಎಸ್.ಎಂ. ಮೇಟಿಪಾಟೀಲ, ಪ್ರಕಾಶ ಕುಂಬಾರ, ಶಿವಾನಂದ ಮಹಾಬಳಶೆಟ್ಟಿ, ಜೆ.ಯು. ಮಹಮ್ಮದ, ಚಂದ್ರು ಮೋರೆ, ರಾಮು ಕಾಡಾಪುರ, ಬಸವರಾಜ ಪಟ್ಟಣ, ಶಂಭು ಗುಣಕಿ, ರವೀಂದ್ರ ಅಷ್ಟಗಿ, ಮಹಾದೇವ ತೋಟಗೇರ, ಪ್ರಭು ಗುಣಕಿ ಇತರರಿದ್ದರು.

ಮಲ್ಲಿಕಾರ್ಜುನ ತುಂಗಳ ಸ್ವಾಗತಿಸಿದರು. ಚಿದಾನಂದ ಕಾರಜೋಳ, ವಿಶ್ವಜ ಕಾಡದೇವರ ನಿರೂಪಿಸಿದರು. ಬಸಯ್ಯ ವಸ್ತ್ರದ ವಂದಿಸಿದರು.

Stay connected

278,732FansLike
580FollowersFollow
620,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...