More

    ಸುದ್ದಿಗೋಷ್ಠಿ ನಡೆಸಲು ಮೋದಿಗೆ ಭಯ- ಎಐಸಿಸಿ ರಾಜ್ಯ ಸಹ ಅಧ್ಯಕ್ಷ ಸುದಾಮ್‌ದಾಸ್

    ಸಿರಗುಪ್ಪ: ಪ್ರಧಾನಿ ನರೇಂದ್ರ ಮೋದಿ ದೇಶದ ನಾಗರಿಕರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಚುನಾವಣಾ ಪೂರ್ವದಲ್ಲಿ ಸುಳ್ಳು ಹೇಳಿ, ಇದುವರೆಗೂ ನಯಾಪೈಸೆ ಹಾಕಿಲ್ಲ. ಈ ಭಯದಿಂದ ಅವರು ಇದುವರೆಗೂ ಒಂದೇ ಒಂದು ಸುದ್ದಿಗೋಷ್ಠಿ ನಡೆಸಿಲ್ಲ ಎಂದು ಎಐಸಿಸಿ ರಾಜ್ಯ ಸಹ ಅಧ್ಯಕ್ಷ ಸುದಾಮ್‌ದಾಸ್ ಆರೋಪಿಸಿದರು.

    ದೇಶದಲ್ಲಿ 1.90 ಲಕ್ಷ ದಲಿತರ ಮೇಲೆ ದೌರ್ಜನ್ಯ ಪ್ರಕರಣ ದಾಖಲಾಗಿವೆ. ಪತ್ರಕರ್ತರು ಈ ಬಗ್ಗೆ ಕೇಳುತ್ತಾರೆ ಎಂಬ ಭಯ ಅವರನ್ನು ಕಾಡುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

    ಇದನ್ನೂ ಓದಿ: ರಾಜ್ಯದಲ್ಲಿ ಆಡಳಿತಯಂತ್ರ ಕುಸಿತ:ಎಸ್.ವಿ.ಉಗ್ರಪ್ಪ ಹೇಳಿಕೆ

    ದಲಿತರ ವೋಟ್ ಪಡೆಯುವುದಷ್ಟೇ ಬಿಜೆಪಿ ಗುರಿ. ಆದ್ದರಿಂದ, ಬಿಜೆಪಿಯವರ ಮಾತನ್ನು ದಲಿತ ಸಮುದಾಯದವರು ನಂಬಬಾರದು. ಬಿಜೆಪಿ ಸಂಘಪರಿವಾರದ ರಾಜಕೀಯ ಬಣವಾಗಿದ್ದು, ಸಂಘಪರಿವಾರದವರು ಯಾವತ್ತೂ ದಲಿತರ ಪರ ಇಲ್ಲ. ಮೀಸಲಾತಿ ಹೆಚ್ಚಳ ಮತ್ತು ಒಳಮೀಸಲಾತಿ ಜಾರಿ ವಿಚಾರದಲ್ಲಿ ಬಿಜೆಪಿ ಸುಳ್ಳು ಹೇಳುತ್ತಿದೆ. ಈ ಬಗ್ಗೆ ಸಂಸತ್‌ಗೆ ಯಾವುದೇ ಪ್ರಸ್ತಾವನೆ ಕಳುಹಿಸಿಲ್ಲ. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಚರ್ಚೆಯನ್ನೂ ನಡೆಸಿಲ್ಲ. ಆದರೆ, ಹಲವು ವರ್ಷಗಳ ಬೇಡಿಕೆ ಈಡೇರಿಸಿದ್ದೇವೆಂದು ದಲಿತರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.

    ಎಐಸಿಸಿ ಸಹ ಉಪಾಧ್ಯಕ್ಷರಾದ ಬಿ.ಗೋಪಾಲ್, ಎಚ್.ಶ್ರೀನಿವಾಸ, ಮರೀಶ್ ಎಸ್.ನಾಗಣ್ಣವರ್, ಪ್ರಮುಖರಾದ ಎನ್.ಕರಿಬಸಪ್ಪ, ಬಿ.ಎಂ.ಸತೀಶ, ಕೊಡ್ಲೆ ಮಲ್ಲಿಕಾರ್ಜುನ, ಜಿ.ಸಿದ್ದಪ್ಪ, ಸಣ್ಣ ಪರಮೇಶ, ಯೋಗಾನಂದ, ಲಿಂಗನಗೌಡ, ಹರ್ಷ ನಾಯಕ, ಅಪ್ಪಾಜಿ ನಾಯಕ, ಎನ್.ವೆಂಕಟೇಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts