More

  ಗೌರಿ ಚಲನಚಿತ್ರ ಶೀಘ್ರ ತೆರೆಗೆ: ನಾಯಕ ನಟ ಸಮರ್ಜಿತ್ ಲಂಕೇಶ್ ಮಾಹಿತಿ

  ಮಂಡ್ಯ: ಇಂದ್ರಜಿತ್ ಲಂಕೇಶ್ ನಿರ್ದೇಶಿಸಿರುವ ಗೌರಿ ಚಲನಚಿತ್ರ ನೂರು ದಿನಗಳ ಶೂಟಿಂಗ್ ಮುಗಿಸಿದ್ದು, ಶೀಘ್ರದಲ್ಲಿಯೇ ರಾಜ್ಯದ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಚಿತ್ರದ ನಾಯಕ ನಟ ಸಮರ್ಜಿತ್ ಲಂಕೇಶ್ ತಿಳಿಸಿದರು.
  ನೈಜ ಘಟನೆ ಆಧಾರಿತ ಕಥೆ ಇರುವ ಈ ಚಿತ್ರವನ್ನು ನಮ್ಮ ತಂದೆ ಇಂದ್ರಜಿತ್ ಲಂಕೇಶ್ ನಿರ್ದೇಶಸಿದ್ದಾರೆ. ಚಿತ್ರದಲ್ಲಿ ಎಂಟು ಹಾಡುಗಳಿವೆ. ಈ ಚಿತ್ರದ ಮೂಲಕ ನಾನು ನಾಯಕನಾಗಿ ಮತ್ತು ಸಾನ್ಯಾ ಅಯ್ಯರ್ ಅವರು ನಾಯಕಿಯಾಗಿ ಪರಿಚಯ ಆಗುತ್ತಿದ್ದೇವೆ. ಬಹು ತಾರಾಗಣವನ್ನು ಒಳಗೊಂಡಿರುವ ಬಿಗ್ ಬಜೆಟ್ ಚಿತ್ರ. ಸುಮಾರು 80 ಕಲಾವಿದರು ನಟಿಸಿದ್ದು, ರಮಣೀಯ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
  ನಾಯಕಿ ಸಾನ್ಯಾ ಅಯ್ಯರ್ ಮಾತನಾಡಿ, ನಮ್ಮಂತಹ ಯುವ ಪ್ರತಿಭೆಗಳಿಗೆ ಇಂದ್ರಜಿತ್ ಲಂಕೇಶ್ ಅವರು ಸ್ಟಾರ್ ಹಾಗೂ ಲಕ್ಕಿ ಡೈರೆಕ್ಟರ್ ಆಗಿದ್ದಾರೆ. ಐಶ್ವರ್ಯ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಗೌರಿ ಚಲನಚಿತ್ರದ ಹಾಡನ್ನು ಬಿಡುಗಡೆ ಮಾಡಲಾಯಿತು.
  ನಿರ್ದೇಶಕ ಇಂದ್ರಜಿತ್ ಲಂಕೇಶ್ ಇದ್ದರು.

  See also  ರಾಜರ್ಷಿ ನಾಲ್ವಡಿ ಸಾಧನೆ ಅನನ್ಯ: ಅಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್ನ ನಿರ್ದೇಶಕ ಡಾ.ನಾಗರಾಜು ಭೈರಿ ಬಣ್ಣನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts