More

  ರಾಜ್ಯ ಬಜೆಟ್​ನಲ್ಲಿ ಕೃಷಿಗಾಗಿಯೇ ಯೋಜನೆ ರೂಪಿಸಿ; ಸಿಎಂಗೆ ಡಾ.ವೀರೇಂದ್ರ ಹೆಗ್ಗಡೆ ಸಲಹೆ 

  ಬೆಂಗಳೂರು:  ದೇಶದ ಸಬಲೀಕರಣ ಮತ್ತು ಗ್ರಾಮೀಣ ಜನರು ಆರ್ಥಿಕತೆ, ರಾಜಕೀಯ, ಕಾನೂನುಗಳ ಬಗ್ಗೆ ಚರ್ಚೆ ಮಾಡಲು ಪತ್ರಿಕೋದ್ಯಮವೇ ಕಾರಣ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

  ಪ್ರೆಸ್​ಕ್ಲಬ್ ಆಫ್ ಬೆಂಗಳೂರು ವತಿಯಿಂದ ಮಂಗಳವಾರ ನಡೆದ ಪ್ರೆಸ್​ಕ್ಲಬ್ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ‘ವರ್ಷದ ವ್ಯಕ್ತಿ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಕರ್ನಾಟಕ ಆರ್ಥಿಕ ಕ್ಷೇತ್ರದಲ್ಲಿ ದೇಶದಲ್ಲಿಯೇ ಮೊದಲ ಸ್ಥಾನ ಪಡೆಯಬೇಕು. ಹಾಗಾಗಲು ಕೃಷಿ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಬೆಂಬಲ ಕೊಡಬೇಕು. ಬಜೆಟ್​ನಲ್ಲಿ ಕೃಷಿಗಾಗಿಯೇ ಕಾರ್ಯಕ್ರಮ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದರು.

  ಭಿನ್ನಾಭಿಪ್ರಾಯ ಬೇಡ: ಪತ್ರಕರ್ತರು ಮತ್ತು ಸರ್ಕಾರದ ನಡುವೆ ಉತ್ತಮ ಬಾಂಧವ್ಯವಿದ್ದು, ಅದು ಹೀಗೆಯೇ ಮುಂದುವರಿಯಲಿ. ಪತ್ರಿಕಾ ರಂಗದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಪತ್ರಕರ್ತರು ತಮ್ಮತಮ್ಮಲೇ ಭಿನ್ನಾಭಿಪ್ರಾಯ ಮೂಡದಂತೆ ಒಗ್ಗಟ್ಟಿನಿಂದ ಸಾಗಬೇಕು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

  ವಿಜಯವಾಣಿ ಸಂಪಾದಕರಿಗೆ ಪ್ರಶಸ್ತಿ 

  ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ, ಹಿರಿಯ ಪತ್ರಕರ್ತರಾದ ಕೆ.ಎಚ್.ಸಾವಿತ್ರಿ, ಎಂ.ಸಿದ್ದರಾಜು, ರವೀಂದ್ರ ಜಿ.ಭಟ್ ಸೇರಿ 16 ಪತ್ರಕರ್ತರಿಗೆ ‘ಪ್ರೆಸ್​ಕ್ಲಬ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರೆಸ್​ಕ್ಲಬ್ ಸುವರ್ಣ ಮಹೋತ್ಸವ ಅಂಗವಾಗಿ ವಿಜಯವಾಣಿಯ ಸಹಾಯಕ ಸಂಪಾದಕ ಜಿ.ವೀರಣ್ಣ ಸೇರಿ 50 ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಶೇ. 80ಕ್ಕಿಂತ ಹೆಚ್ಚಿನ ಅಂಕಗಳಿಸಿದ ಪ್ರೆಸ್​ಕ್ಲಬ್ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts