ಧಾರವಾಡ: ಭಾರತೀಯ ತಂತ್ರಜ್ಞಾನ ಸಂಸ್ಥೆಯ 4ನೇ ಘಟಿಕೋತ್ಸವ ಸಮಾರಂಭ ಸೋಮವಾರ ಜರುಗಿತು. ಬಿ.ಟೆಕ್ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್‌ನಲ್ಲಿ ಸಾಧನೆಗೈದ ಟಿ. ಸಾತ್ವಿಕ್‌ಗೆ ರಾಷ್ಟ್ರಪತಿ ಚಿನ್ನದ ಪದಕ ಪ್ರದಾನ ಮಾಡಲಾಯಿತು.
ಬಿ.ಟೆಕ್ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಖುಷಿ ಯಾಗ್ನಿಕ್‌ಗೆ ನಿರ್ದೇಶಕರ ಚಿನ್ನದ ಪದಕ, ಬಿ.ಟೆಕ್ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್‌ನಲ್ಲಿ ಕಾರ್ತಿಕ್ ಕಂಚರ್ಲಾ ಹಾಗೂ ಬಿ.ಟೆಕ್ ಇಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಸಾಧನೆಗೈದ ಸೂರ್ಯವಿಜೋಯ ಖರ್‌ಗೆ ಸಂಸ್ಥೆ ಕೊಡಮಾಡುವ ಬೆಳ್ಳಿ ಪದಕ, ಬಿ.ಟೆಕ್ ಇಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಓಂಪ್ರಕಾಶ ಗೋಯಲ್ ಮತ್ತು ಸೇವತಿದೇವಿ ಗೋಯಲ್ ಕೊಡಮಾಡಿದ ಅತ್ಯುತ್ತಮ ವಿದ್ಯಾರ್ಥಿನಿ ನಗದು ಪುರಸ್ಕಾರವನ್ನು ಭವಾನಿ ಎ. ಮಾಧಭಾವಿ ಅವರಿಗೆ ಪ್ರದಾನ ಮಾಡಲಾಯಿತು.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕ, ಪದ್ಮಭೂಷಣ ಪ್ರೊ. ಪಿ. ಬಲರಾಮ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಚಿನ್ನ- ಬೆಳ್ಳಿಯ ಪದಕ ಹಾಗೂ ಪದವೀಧರರಿಗೆ ಪ್ರಮಾಣಪತ್ರ ಪ್ರದಾನ ಮಾಡಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಧಾರವಾಡ ಐಐಟಿ ನಿರ್ದೇಶಕ ಪ್ರೊ. ವಿ.ಆರ್. ದೇಸಾಯಿ, ಐಐಟಿ ಆಡಳಿತ ಮಂಡಳಿ ಅಧ್ಯಕ್ಷ ವಿನಾಯಕ ಚಟರ್ಜಿ, ಐಐಟಿ ವಿದ್ಯಾರ್ಥಿಗಳು, ಪದವೀಧರ ವಿದ್ಯಾರ್ಥಿಗಳ ಪಾಲಕರು, ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
