ಇಂಗ್ಲೆಂಡ್ ಮಹಿಳಾ ತಂಡಕ್ಕೆ ಅಧ್ಯಕ್ಷರ ಇಲೆವೆನ್ ಸವಾಲು

ಮುಂಬೈ: ನ್ಯೂಜಿಲೆಂಡ್ ಪ್ರವಾಸದಲ್ಲಿ ರನ್​ಹೊಳೆಯನ್ನೇ ಹರಿಸಿದ್ದ ಸ್ಪೋಟಕ ಬ್ಯಾಟುಗಾರ್ತಿ ಸ್ಮೃತಿ ಮಂದನಾ ಸಾರಥ್ಯದ ಮಂಡಳಿ ಅಧ್ಯಕ್ಷರ ಇಲೆವೆನ್ ಹಾಗೂ ಪ್ರವಾಸಿ ಇಂಗ್ಲೆಂಡ್ ಮಹಿಳಾ ತಂಡ ನಡುವಿನ ಏಕೈಕ ಏಕದಿನ ಅಭ್ಯಾಸ ಪಂದ್ಯ ಸೋಮವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಮುಂದಿನ ಶುಕ್ರವಾರ (ಫೆ.22) ಆರಂಭವಾಗಲಿರುವ ಭಾರತ ವಿರುದ್ಧದ ಐಸಿಸಿ ಚಾಂಪಿಯನ್​ಷಿಪ್ ಸರಣಿಗೆ ಇಂಗ್ಲೆಂಡ್ ಈ ಪಂದ್ಯದಲ್ಲಿ ಪೂರ್ವಸಿದ್ಧತೆ ನಡೆಸಲಿದೆ. ಮಂದನಾ ಅಲ್ಲದೆ, ವಿಕೆಟ್ ಕೀಪರ್ ಆರ್.ಕಲ್ಪನಾಗೆ ವೈಯಕ್ತಿಕವಾಗಿ ಈ ಪಂದ್ಯ ಪ್ರಮುಖವೆನಿಸಿದೆ. ಕನ್ನಡತಿ ವೇದಾ ಕೃಷ್ಣಮೂರ್ತಿ, ಪ್ರಿಯಾ ಪೂನಿಯಾಗೆ ಮುಂಬರುವ ಸರಣಿಗೆ ಆಯ್ಕೆಗಾರರ ಗಮನ ಸೆಳೆಯಲು ಉತ್ತಮ ವೇದಿಕೆಯಾಗಿದೆ.