ಭಾರತೀಯ ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್‌ಗೆ ಪರಮ ವಿಶಿಷ್ಟ ಸೇವಾ ಪದಕ

ನವದೆಹಲಿ: ಭಾರತೀಯ ಸೇನೆಗೆ ಕೊಡಲಾಗುವ 3 ಕೀರ್ತಿ ಚಕ್ರ ಮತ್ತು ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಪ್ರತಿಕೂಲ ಪರಿಸ್ಥಿತಿಗಳಲ್ಲಿ ತೋರಿಸುವ ಸಾಹಸಕ್ಕೆ ನೀಡಲಾಗುವ 15 ಶೌರ್ಯ ಚಕ್ರ ಪ್ರಶಸ್ತಿಗಳನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಇಂದು ಪ್ರದಾನ ಮಾಡಿದರು.

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎರಡು ಕೀರ್ತಿ ಚಕ್ರ ಮತ್ತು ಒಂದು ಶೌರ್ಯ ಚಕ್ರವನ್ನು ಮರಣೋತ್ತರ ಪ್ರಶಸ್ತಿಯಾಗಿ ನೀಡಲಾಯಿತು. ಭಾರತೀಯ ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ(PVSM)ವನ್ನು ರಾಷ್ಟ್ರಪತಿ ನೀಡಿದರು.

ಜಮ್ಮು ಮತ್ತು ಕಾಶ್ಮೀರದ ಕುಪ್ವಾರದ ಗಡಿ ನಿಯಂತ್ರಣ ರೇಖೆ ಬಳಿಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ್ದಕ್ಕಾಗಿ ಜಾಟ್‌ ರೆಜಿಮೆಂಟ್‌, 20ನೇ ಬೆಟಾಲಿಯನ್‌ನ ಮೇಜರ್‌ ತುಶಾರ್‌ ಗೌಬಾ ಅವರಿಗೆ ಕೀರ್ತಿ ಚಕ್ರ ಪ್ರಶಸ್ತಿ ನೀಡಲಾಯಿತು. 2017ರ ನವೆಂಬರ್‌ನಲ್ಲಿ ಪುಲ್ವಾಮದಲ್ಲಿ ನಡೆದ ಉಗ್ರ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದ ಸೈನಿಕ ವ್ರಹ್ಮಾ ಪಾಲ್ ಸಿಂಗ್ ಅವರಿಗೆ ಮರಣೋತ್ತರವಾಗಿ ಎರಡನೇ ಅತ್ಯುನ್ನತ ಗೌರವ ಪ್ರಶಸ್ತಿಯನ್ನು ನೀಡಲಾಯಿತು.

ರಜಪೂತ್‌ ರೆಜಿಮೆಂಟ್‌ 44ನೇ ಬೆಟಾಲಿಯನ್‌ನ ಕ್ಯಾಪ್ಟನ್‌ ವರ್ಮಾ ಜಾಯೇಶ್‌ ರಾಜೇಶ್‌, ಮೇಜರ್‌ ಆದಿತ್ಯ ಕುಮಾರ್‌, ಮೇಜರ್‌ ಪವನ್‌ ಗೌತಮ್‌, ಕ್ಯಾಪ್ಟನ್‌ ಅಭಿನವ್‌ ಕುಮಾರ್‌ ಚೌಧರಿ, ಕ್ಯಾಪ್ಟನ್‌ ಕನಿಂದರ್‌ ಪೌಲ್‌ ಸಿಂಗ್‌, ಗುನ್ನರ್‌ ರಂಜಿತ್‌ ಸಿಂಗ್, ಸಾಪ್ಪೆರ್‌ ಮಹೇಶ್‌ ಎಚ್‌. ಎನ್‌. ಮತ್ತು ಲ್ಯಾನ್ಸ್‌ ನಾಯ್ಕ್‌ ಅಯ್ಯುಬ್‌ ಅಲಿ ಅವರಿಗೆ ಶೌರ್ಯ ಚಕ್ರ ಪ್ರಶಸ್ತಿ ನೀಡಲಾಯಿತು. ಮಾವೋವಾದಿಗಳ ಜತೆ ಹೋರಾಡಿ ಪ್ರಾಣ ಕಳೆದುಕೊಂಡ ಒಡಿಶಾ ಪೊಲೀಸ್‌ ಎಒಜಿ ಅಧಿಕಾರಿ ಅಶೋಕ ಚಕ್ರ ಪ್ರಶಸ್ತಿಯನ್ನು ನೀಡಲಾಯಿತು. ಕೇಂದ್ರ ಮೀಸಲು ಪೊಲೀಸ್‌ ಪಡೆಯ ಮುಖ್ಯಪೇದೆ ಎ.ಎಸ್‌. ಕೃಷ್ಣ, ಪೇದೆ ಕೆ. ದಿನೇಶ್‌ ರಾಜಾ ಮತ್ತು ಪೇದೆ ಪ್ರಫುಲ್ಲ ಕುಮಾರ್‌ ಅವರಿಗೆ ನೀಡಲಾಯಿತು.

ಭಾರತೀಯ ವಾಯುಪಡೆ ಕ್ಯಾಪ್ಟನ್‌ ಪಿ.ರಾಜ್‌ಕುಮಾರ್‌ ಅವರಿಗೆ ಮೂರನೇ ಅತ್ಯುನ್ನತ ಪ್ರಶಸ್ತಿಯನ್ನು ಒಚ್ಕಿ ಚಂಡಮಾರುತದ ವೇಳೆ ಜೀವಗಳನ್ನು ರಕ್ಷಿಸಿದ್ದದ್ದಕ್ಕಾಗಿ ನೀಡಲಾಯಿತು.

Leave a Reply

Your email address will not be published. Required fields are marked *