20.4 C
Bangalore
Monday, December 9, 2019

ನಮೋ ವಚನೋತ್ಸವ

Latest News

ಬೈ ಎಲೆಕ್ಷನ್ ರಿಸಲ್ಟ್​| ಯಲ್ಲಾಪುರದಲ್ಲಿ ಮೂರನೇ ಸುತ್ತು ಮತ ಎಣಿಕೆ ಅಂತ್ಯ

ಕಾರವಾರ: ರಾಜ್ಯದ ಉಪಚುನಾವಣಾ ಸಮರದಲ್ಲಿ ಗಮನಸೆಳೆದಿರುವ ಯಲ್ಲಾಪುರ ಕ್ಷೇತ್ರದ ಮತಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಮೂರನೇ ಸುತ್ತು ಮುಕ್ತಾಯವಾದಾಗ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಿಜೆಪಿ...

ರಾಣೇಬೆನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ ಮುನ್ನಡೆ

ಹಾವೇರಿ: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ 417 ಮತಗಳ ಮುನ್ನಡೆ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್​ನ...

ಬೈಎಲೆಕ್ಷನ್ ರಿಸಲ್ಟ್| ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ ಸಿ ಪಾಟೀಲ್ ಮುನ್ನಡೆ

ಹಾವೇರಿ: ಕುತೂಹಲ ಕೆರಳಿಸಿರುವ ಕರ್ನಾಟಕ ಅಸೆಂಬ್ಲಿಯ ಬೈ ಎಲೆಕ್ಷನ್​ನ ಮತ ಎಣಿಕೆ ನಡೆಯುತ್ತಿದ್ದು, ಮೊದಲ ಎರಡು ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿ...

ಬೈಎಲೆಕ್ಷನ್​ ರಿಸಲ್ಟ್​| ಮೊದಲ ಸುತ್ತಿನ ಮತಎಣಿಕೆ ಮುಕ್ತಾಯ: ಕೆ.ಆರ್​.ಪೇಟೆಯಲ್ಲಿ ಜೆಡಿಎಸ್​, ಹುಣಸೂರಿನಲ್ಲಿ ಕಾಂಗ್ರೆಸ್​ ಮುನ್ನಡೆ

ಹುಣಸೂರು/ಕೆ.ಆರ್​ಪೇಟೆ: ಕೆ.ಆರ್​.ಪೇಟೆ ಕ್ಷೇತ್ರದ ಉಪಚುನಾವಣೆಯ ಅಂಚೆ ಮತಎಣಿಕೆಯಲ್ಲಿ ಮುಂದಿದ್ದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಮೊದಲ ಸುತ್ತಿನ ಮತಎಣಿಕೆಯಲ್ಲಿ ಹಿಂದೆ ಉಳಿದಿದ್ದು, ಜೆಡಿಎಸ್​ ಅಭ್ಯರ್ಥಿ...

ಬೈಎಲೆಕ್ಷನ್​ ರಿಸಲ್ಟ್​| ಚಿಕ್ಕಬಳ್ಳಾಪುರದಲ್ಲಿ 31 ಅಂಚೆಮತದಲ್ಲಿ 27 ಸ್ವೀಕೃತ, ಬಿಜೆಪಿ ಅಭ್ಯರ್ಥಿ ಸುಧಾಕರ್​ ಮುನ್ನಡೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಡೆದ ಅಂಚೆ ಮತಎಣಿಕೆಯಲ್ಲಿ ಚಲಾವಣೆಯಾದ ಒಟ್ಟು 31 ಅಂಚೆಮತದಲ್ಲಿ 27 ಸ್ವೀಕೃತವಾಗಿವೆ. ಅಂಚೆ ಮತೆಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್​...

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಸಮಾಧಿ ಇರುವ ರಾಜ್​ಘಾಟ್​ಗೆ ಭೇಟಿ ನೀಡುವ ಮೂಲಕ ಪ್ರಮಾಣವಚನದ ದಿನ ಆರಂಭಿಸಿದ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ, ಅಟಲ್ ಸ್ಮಾರಕದಲ್ಲಿ ಬಿಜೆಪಿಯ ಸವೋಚ್ಛ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸ್ಮರಿಸಿದರು. ಅಲ್ಲಿಂದ ರಾಷ್ಟ್ರೀಯ ಸಮರ ಸ್ಮಾರಕಕ್ಕೆ ಭೇಟಿ ನೀಡಿ ದೇಶ ರಕ್ಷಿಸಿದ ಯೋಧರಿಗೆ ಗೌರವ ಸಲ್ಲಿಸಿದರು. ನಿಯೋಜಿತ ಪ್ರಧಾನಿಯಾಗಿ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಮೋದಿ, 57 ಸಚಿವರ ಪ್ರಮಾಣವಚನದ ಮೂಲಕ ದೇಶಕ್ಕೆ ಹೊಸ ಸರ್ಕಾರ ‘ನಮೋಸ್ತಾನ್ 2.0’ ನೀಡಿದರು. ಈ ಕ್ಷಣವು ರಾಷ್ಟ್ರಪತಿ ಭವನ, ಬಿಜೆಪಿ ಬೆಂಬಲಿಗರು ಹಾಗೂ ಮೋದಿ ಹಿಂಬಾಲಕರಿಗೆ ಅಕ್ಷರಶಃ ನಮೋತ್ಸವವಾಗಿ ಪರಿಣಮಿಸಿತ್ತು.

ಹೊಸ ಸಚಿವರು

ಸಂಪುಟ ದರ್ಜೆ: ಅಮಿತ್ ಷಾ, ಎಸ್.ಜಯಶಂಕರ್, ರಮೇಶ್ ಪೋಖ್ರಿಯಾಲ್, ಅರ್ಜುನ್ ಮುಂಡಾ, ಪ್ರಹ್ಲಾದ್ ಜೋಷಿ, ಮಹೇಂದ್ರ ನಾಥ್ ಪಾಂಡೆ, ಅರವಿಂದ್ ಸಾವಂತ್

ರಾಜ್ಯ: ಫಗ್ಗನ್​ಸಿಂಗ್ ಕುಲಾಸ್ತೆ, ಡಿ.ಆರ್. ದಾದಾರಾವ್, ಜಿ.ಕಿಶನ್ ರೆಡ್ಡಿ, ಸಂಜೀವ್​ಕುಮಾರ್ ಬಲ್ಯಾನ್, ಡಿ.ಎಸ್.ಶ್ಯಾಮರಾವ್, ಅನುರಾಗ್ ಸಿಂಗ್ ಠಾಕೂರ್, ಸುರೇಶ್ ಅಂಗಡಿ, ನಿತ್ಯಾನಂದ ರೈ, ರತ್ತನ್ ಲಾಲ್ ಕಟಾರಿಯಾ, ವಿ.ಮುರಳೀಧರನ್, ರೇಣುಕಾ ಸಿಂಗ್ ಸರುಟಾ, ಸೋಮ್ ಪ್ರಕಾಶ್, ರಾಮೇಶ್ವರ್ ತೇಲಿ, ಪ್ರತಾಪ್​ಚಂದ್ರ ಸಾರಂಗಿ, ಕೈಲಾಶ್ ಚೌಧರಿ, ದೇವಶ್ರೀ ಚೌಧರಿ

ಸ್ವತಂತ್ರ: ಪ್ರಹ್ಲಾದ್ ಸಿಂಗ್ ಪಟೇಲ್, ಮನ್ಸುಖ್ ಮಾಂಡವಿಯಾ.

ಆರು ಮಹಿಳಾ ಮಂತ್ರಿ: ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಹರ್ಸೀಮೃತ್ ಕೌರ್, ಸಾಧಿ್ವ ನಿರಂಜನ್, ರೇಣುಕಾ ಸಿಂಗ್, ದೇವಶ್ರೀ ಚೌಧರಿ.

ವಿದೇಶಿ ಗಣ್ಯರು

 • ಅಬ್ದುಲ್ ಹಮೀದ್: ಬಾಂಗ್ಲಾದೇಶ ಅಧ್ಯಕ್ಷ
 • ಮೈತ್ರಿಪಾಲ ಸಿರಿಸೇನ: ಶ್ರೀಲಂಕಾ ಅಧ್ಯಕ್ಷ
 • ಸೂರೊನಬೆ ಜಿನಬೆಕೊವ್- ರ್ಕಿಗಿಸ್ತಾನ ಅಧ್ಯಕ್ಷ
 • ಯು ವಿನ್ ಮಿಂಟ್: ಮಯನ್ಮಾರ್ ಅಧ್ಯಕ್ಷ
 • ಪ್ರವಿಂದ್ ಕುಮಾರ್ ಜುಗ್ನಾಥ್: ಮಾರೀಷಸ್ ಪ್ರಧಾನಿ
 • ಕೆ.ಪಿ.ಶರ್ವ ಓಲಿ: ನೇಪಾಳ ಪ್ರಧಾನಿ
 • ಡಾ.ಲೊಟೆ ಶೇರಿಂಗ್: ಭೂತಾನ್ ಪ್ರಧಾನಿ
 • ಗ್ರಿಸಾಡಾ ಬೂನ್ರಾಚ್: ಥೈಲ್ಯಾಂಡ್ ಪ್ರತಿನಿಧಿ

ವಿಶೇಷತೆ

 • ಪುಲ್ವಾಮಾ ದಾಳಿಯಲ್ಲಿ ಮೃತರಾದ ಯೋಧರ ಕುಟುಂಬ ಸದಸ್ಯರು ಭಾಗಿ
 • ಪಶ್ಚಿಮ ಬಂಗಾಳದಲ್ಲಿ ಕೊಲೆಯಾದ 54 ಬಿಜೆಪಿ ಕಾರ್ಯಕರ್ತರ ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿ.
 • ಇದೇ ಮೊದಲ ಬಾರಿಗೆ ಪ್ರಮಾಣವಚನ ಕಾರ್ಯಕ್ರಮಕ್ಕೆ 8 ಸಾವಿರಕ್ಕೂ ಅಧಿಕ ಗಣ್ಯರು ಭಾಗಿ
 • ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ, ಜಗನ್​ವೋಹನ್ ರೆಡ್ಡಿ, ಕೆ.ಚಂದ್ರಶೇಖರ್ ರಾವ್, ಭೂಪೇಶ್ ಭಾಗೇಲ್, ಕ್ಯಾಪ್ಟನ್ ಅಮರಿಂದರ್ ಸಿಂಗ್, ಪಿಣರಾಯಿ ವಿಜಯನ್ ಗೈರು.
 • ಲೋಕಸಭೆಯಲ್ಲಿ ಮೂರನೇ ಅತಿ ದೊಡ್ಡ ಪಕ್ಷ ಡಿಎಂಕೆಗೆ ಆಹ್ವಾನ ನೀಡಿಲ್ಲ ಎಂಬ ಆರೋಪ.

ದೇಶಿ ಗಣ್ಯರು

ಎಂ.ವೆಂಕಯ್ಯ ನಾಯ್ಡು, ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ್ ಜೋಷಿ, ಸುಮಿತ್ರಾ ಮಹಾಜನ್, ಸುಷ್ಮಾ ಸ್ವರಾಜ್, ಉಮಾ ಭಾರತಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ನಿತೀಶ್ ಕುಮಾರ್, ರಾಜ್ಯಪಾಲರು, ಬಿಜೆಪಿ ಆಡಳಿತವಿರುವ ಎಲ್ಲ ಮುಖ್ಯಮಂತ್ರಿಗಳು, ಬಿಜೆಪಿ ಸಂಸದರು, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಶ್ರೀ ಆದಿ ಯೋಗಿ, ರತನ್ ಟಾಟಾ, ಮುಕೇಶ್ ಅಂಬಾನಿ, ಆನಂದ್ ಮಹೀಂದ್ರಾ, ಅನುಪಮ್ ಖೇರ್, ಅನಿಲ್ ಕಪೂರ್, ಕರಣ್ ಜೋಹರ್, ರಜನೀಕಾಂತ್, ಆಶಾ ಬೋಸ್ಲೆ.

ಸಂಪುಟ ಸೇರದ ಜೆಡಿಯು

ಮೋದಿ ಸರ್ಕಾರ 2.0 ಆರಂಭದಲ್ಲಿಯೇ ಜೆಡಿಯು ಮುಖ್ಯಸ್ಥ ಹಾಗೂ ಬಿಹಾರ ಮುಖ್ಯಮಂತ್ರಿ ಭಿನ್ನರಾಗ ತೆಗೆದಿದ್ದಾರೆ. ಕೇವಲ ಒಬ್ಬ ಸಂಪುಟ ದರ್ಜೆ ಸಚಿವರಿಗೆ ಅವಕಾಶ ನೀಡಲು ಬಿಜೆಪಿ ನಿರ್ಧರಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರದಲ್ಲಿ ಭಾಗಿಯಾಗುತ್ತಿಲ್ಲ. ಆದರೆ ಎನ್​ಡಿಎನಲ್ಲಿ ಜೆಡಿಯು ಮುಂದುವರಿಯಲಿದೆ. ಸರ್ಕಾರದಲ್ಲಿ ಕೇವಲ ಸಾಂಕೇತಿಕ ಪ್ರಾತಿನಿಧ್ಯ ಜೆಡಿಯುಗೆ ಅಗತ್ಯವಿಲ್ಲ ಎಂದು ನಿತೀಶ್​ಕುಮಾರ್ ಸ್ಪಷ್ಟಪಡಿಸಿದ್ದಾರೆ. ಮೂಲಗಳ ಪ್ರಕಾರ ತಲಾ ಒಂದು ಸಂಪುಟ, ಸ್ವತಂತ್ರ ಹಾಗೂ ರಾಜ್ಯ ಖಾತೆ ಸಚಿವ ಸ್ಥಾನವನ್ನು ಜೆಡಿಯು ನಿರೀಕ್ಷಿಸಿತ್ತು.

ಗಾಂಧಿ, ಅಟಲ್​ಜಿಗೆ ಮೋದಿ ನಮನ

ಸತತ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಮುಂಚೆ ನರೇಂದ್ರ ಮೋದಿ ಗುರುವಾರ ಬೆಳಗ್ಗೆ ಮಹಾತ್ಮ ಗಾಂಧಿ ಹಾಗೂ ಬಿಜೆಪಿ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮಾರಕಕ್ಕೆ ನಮನ ಸಲ್ಲಿಸಿದರು. ಇದೇ ವೇಳೆ ಇಂಡಿಯಾ ಗೇಟ್​ನ ಅಮರ್ ಜವಾನ್ ಹಾಗೂ ರಾಷ್ಟ್ರೀಯ ಸಮರ ಸ್ಮಾರಕಕ್ಕೆ ವಂದಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಹಾಗೂ 300ಕ್ಕೂ ಅಧಿಕ ಬಿಜೆಪಿ ಸಂಸದರು ಮೋದಿಗೆ ಸಾಥ್ ನೀಡಿದರು. ಬಳಿಕ ಟ್ವೀಟ್ ಮಾಡಿದ ಮೋದಿ, ಈ ವರ್ಷ ಬಾಪುರ 150ನೇ ಜಯಂತಿ ಆಚರಣೆಯಿದೆ. ಬಾಪು ಆದರ್ಶಗಳನ್ನು ಪಸರಿಸಲು ಇದೊಂದು ಅವಕಾಶವಾಗಿರಲಿದೆ ಎಂದಿದ್ದಾರೆ. ಇದೇ ವೇಳೆ ವಾಜಪೇಯಿ ಅವರ ಬಗ್ಗೆಯೂ ಮಾತನಾಡಿರುವ ಮೋದಿ ಜನರ ಸೇವೆಗೆ ಬಿಜೆಪಿಗೆ ಸಿಕ್ಕ ಈ ಅವಕಾಶಕ್ಕಾಗಿ ವಾಜಪೇಯಿ ಖುಷಿಯಾಗಿರುತ್ತಾರೆ. ಅಟಲ್ ಅವರ ಜೀವನ ಮತ್ತು ಕೆಲಸಗಳು ಉತ್ತಮ ಆಡಳಿತ ನೀಡಲು ಪ್ರೇರೇಪಿಸುತ್ತದೆ ಎಂದರು.

ಭಾಜಪಾಕ್ಕೆ ತಂತ್ರಗಾರ ನಡ್ಡಾ ಸಾರಥ್ಯ?

ನವದೆಹಲಿ: 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಉತ್ತರಪ್ರದೇಶದಿಂದ 73 ಸೀಟು ಗೆಲ್ಲಿಸಿಕೊಟ್ಟಿದ್ದ ಅಮಿತ್ ಷಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ಏರಿದ್ದರು. ಈಗ ಮಹಾಮೈತ್ರಿ ಅಸ್ತಿತ್ವದ ಹೊರತಾಗಿಯೂ ಈ ಬಾರಿ 62 ಸೀಟು ಗಳಿಸುವಲ್ಲಿ ತಂತ್ರಗಾರಿಕೆ ರೂಪಿಸಿದ್ದ ಜಗತ್ ಪ್ರಕಾಶ್ ನಡ್ಡಾ ಬಿಜೆಪಿ ಅಧ್ಯಕ್ಷ ಗಾದಿಗೆ ಏರುವುದು ಬಹುತೇಕ ಖಚಿತವಾಗಿದೆ. ಮೋದಿಯ ಮೊದಲ ಸರ್ಕಾರದಲ್ಲಿ ಪ್ರಭಾವಿ ಖಾತೆ ನಿರ್ವಹಿಸಿದ್ದ ನಡ್ಡಾ, ಬಿಜೆಪಿ ಸಂಸದೀಯ ಮಂಡಳಿಯ ಕಾರ್ಯದರ್ಶಿಯೂ ಆಗಿದ್ದಾರೆ. ಇದರ ಜತೆಗೆ ಉತ್ತರಪ್ರದೇಶ ಚುನಾವಣಾ ಉಸ್ತುವಾರಿ ಹೊತ್ತಿದ್ದ ನಡ್ಡಾ, ಮೋದಿ ಹಾಗೂ ಷಾ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಬಿಜೆಪಿಯ ಚುನಾವಣಾ ತಂತ್ರಗಾರಿಕೆ ತಂಡದ ಪ್ರಮುಖ ಸದಸ್ಯರಾಗಿರುವ ನಡ್ಡಾ, ಷಾ ಜಾಗಕ್ಕೆ ಸೂಕ್ತ ವ್ಯಕ್ತಿ ಎಂಬ ಮಾತುಗಳಿವೆ. ಮಾತಿಗಿಂತ ಕೆಲಸದಲ್ಲಿ ಹೆಚ್ಚು ತೊಡಗಿರುವ ನಡ್ಡಾ, ಪಕ್ಷ ಸಂಘಟನೆಗೆ ಹೇಳಿ ಮಾಡಿಸಿದ ವ್ಯಕ್ತಿ ಎನ್ನಲಾಗಿದೆ. ಪಕ್ಷದಲ್ಲಿ ಪ್ರಮುಖ ಸ್ಥಾನ ನೀಡುವ ಉದ್ದೇಶದಿಂದಲೇ ಸಂಪುಟದಲ್ಲಿ ನಡ್ಡಾಗೆ ಅವಕಾಶ ನೀಡಿಲ್ಲ. ಸಂಭಾವ್ಯ ಅಧ್ಯಕ್ಷರು ಎನ್ನುವುದಕ್ಕೆ ಪೂರಕವಾಗಿ ದಿನವಿಡಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಷಾ ಜತೆಗೆ ನಡ್ಡಾ ಕಾಣಿಸಿಕೊಂಡರು. ಹಾಗೆಯೇ ಗಣ್ಯರ ಸಾಲಿನಲ್ಲಿ ಮೊದಲೇ ಅವರು ಕಾಣಿಸಿಕೊಂಡರು.

ಪಕ್ಷಕ್ಕೆ ಹೊಸಮುಖ

ದಕ್ಷಿಣ ಭಾರತದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ಬಿಜೆಪಿ ಸಂಘಟನೆಗೆ ಇನ್ನಷ್ಟು ಹೊಸ ಮುಖ ಪರಿಚಯಿಸುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ರಾಜ್ಯವರ್ಧನ್ ಸಿಂಗ್ ರಾಠೋಡ್ ಅವರಂಥ ಸಮರ್ಥ ನಾಯಕರಿಗೆ ಸಂಪುಟದಲ್ಲಿ ಅವಕಾಶ ನೀಡಲಾಗಿಲ್ಲ ಎನ್ನಲಾಗಿದೆ. ಇನ್ನೊಂದು ತಿಂಗಳೊಳಗೆ ಅಮಿತ್ ಷಾ ರಾಜೀನಾಮೆ ಪಡೆದು ಹೊಸ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ತಂಡ ರಚನೆಯಾಗಲಿದೆ.

ರೇಸ್​ನಲ್ಲಿ ಭೂಪೇಂದ್ರ

ಬಿಜೆಪಿ ಅಧ್ಯಕ್ಷ ಗಾದಿಗೆ ನಡ್ಡಾ ಜತೆಗೆ ಭೂಪೇಂದ್ರ ಯಾದವ್ ಹೆಸರು ಕೂಡ ಕೇಳಿಬರುತ್ತಿದೆ. ಅಮಿತ್ ಷಾ ಪರಮಾಪ್ತರಾಗಿರುವ ಭೂಪೇಂದ್ರ, ರಾಜ್ಯಸಭೆ ಸದಸ್ಯರಾಗಿದ್ದಾರೆ. ಗುಜರಾತ್ ಮೂಲದವರಾದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಉಸ್ತುವಾರಿ ಹೊಂದಿದ್ದರು.

ಸಂಘಟನಾ ಚತುರ

ಹಿಮಾಚಲ ಪ್ರದೇಶದಲ್ಲಿ ಮೂರು ಬಾರಿ ಶಾಸಕ ಹಾಗೂ ಸಚಿವರಾಗಿ ಕೆಲಸ ಮಾಡಿರುವ ನಡ್ಡಾ, 2012ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. ಮೋದಿ ಸರ್ಕಾರದ ಆರಂಭದಲ್ಲಿ ಪಕ್ಷದಲ್ಲಿಯೇ ಸಂಘಟನಾ ಕಾರ್ಯದರ್ಶಿಯಾಗಿ ಉಳಿದಿದ್ದರು. 2014ರ ನವೆಂಬರ್​ನಲ್ಲಿ ಆರೋಗ್ಯ ಸಚಿವರಾಗಿ ನೇಮಕಗೊಂಡರು. ಕೇಂದ್ರ ಸಚಿವರಾಗಿದ್ದರೂ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಉತ್ತರಪ್ರದೇಶ, ಗುಜರಾತ್, ಆಸ್ಸಾಂ ವಿಧಾನಸಭಾ ಚುನಾವಣೆಯ ರಣತಂತ್ರ ರೂಪಿಸುವಲ್ಲಿ ನಡ್ಡಾ ಪಾತ್ರ ದೊಡ್ಡದಿತ್ತು ಎನ್ನಲಾಗಿದೆ. ಬಿಜೆಪಿಯಲ್ಲಿ ಹೊಸ ರಾಜಕೀಯ ಶಕೆ ಆರಂಭಿಸಿರುವ ಮೋದಿ-ಷಾ ಜೋಡಿಗೆ ಪೂರಕವಾಗಿ ನಡ್ಡಾ ಹೇಗೆ ಕೆಲಸ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ, ದೆಹಲಿ ಹಾಗೂ ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಗಳು ನಡ್ಡಾ ರಾಜಕೀಯ ತಂತ್ರಗಾರಿಕೆ ಪ್ರದರ್ಶನಕ್ಕೆ ವೇದಿಕೆಯಾಗಲಿದೆ. ಇದರ ಜತೆಗೆ ಮೋದಿ-ಷಾ ಮಾತು ಕೇಳುವ ರಬ್ಬರ್ ಸ್ಟಾ್ಯಂಪ್ ಅಧ್ಯಕ್ಷರಾಗಿ ಉಳಿಯುತ್ತಾರೋ ಅಥವಾ ತಮ್ಮದೇ ಛಾಪು ಮೂಡಿಸುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ.

ಬಿಜೆಪಿ ವಿರುದ್ಧ ಮಮತಾ ಧರಣಿ

ಕೋಲ್ಕತ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಟಿಎಂಸಿ ಕಾರ್ಯಕರ್ತರ ಮೇಲಿನ ಹಲ್ಲೆ ವಿರೋಧಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೋಲ್ಕತದಲ್ಲಿ ಗುರುವಾರ ಧರಣಿ ನಡೆಸಿದರು. ಟಿಎಂಸಿ ಕಾರ್ಯಕರ್ತರೊಂದಿಗೆ ಕುಳಿತು ಪ್ರತಿಭಟಿಸಿದ ಮಮತಾ, ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗದಿರುವುದನ್ನು ಸಮರ್ಥಿಸಿಕೊಂಡರು. ಆರ್​ಎಸ್​ಎಸ್​ಗೆ ಪ್ರತಿಯಾಗಿ ಜೈ ಹಿಂದ್ ವಾಹಿನಿ ಆರಂಭಿಸುವುದಾಗಿ ಘೋಷಿಸಿದ ಮಮತಾ, ಬಿಜೆಪಿಯನ್ನು ನಾನು ದ್ವೇಷಿಸುತ್ತೇನೆ. ಟಿಎಂಸಿ ಸರ್ಕಾರದ ತಂಟೆಗೆ ಬಂದರೆ ಯಾರನ್ನೂ ಬಿಡುವುದಿಲ್ಲ ಎಂದು ಕಿಡಿಕಾರಿದರು.

ಚೌಕಿದಾರ್ ಟೀಂ ಇಂಡಿಯಾ

ಎರಡನೇ ಬಾರಿ ಪ್ರಧಾನಿಯಾಗಿರುವ ನರೇಂದ್ರ ಮೋದಿ ಜತೆ 58 ಸಚಿವರು ಗುರುವಾರ ಪ್ರಮಾಣವಚನ ಸ್ವೀಕರಿಸಿದ್ದು, ಎರಡನೇ ಅವಧಿ ಆಡಳಿತ ನಡೆಸಲು ಮೋದಿ ಟೀಂ ಸಿದ್ಧಗೊಂಡಿದೆ. ಅನುಭವಿಗಳು ಹಾಗೂ ಹೊಸ ಮುಖಗಳ ಮಿಶ್ರಣದ ಸಂಪುಟ ಇದಾಗಿದೆ. ಬಹುತೇಕ ಹಿರಿಯ, ಅನುಭವಿ ಸಚಿವರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಒಡಿಶಾದ ಮೋದಿ ಎಂದೇ ಖ್ಯಾತಿಯಾಗಿರುವ ಪ್ರತಾಪ್ ಸಾರಂಗಿ, ವಿದೇಶಾಂಗ ಇಲಾಖೆಯ ಮಾಜಿ ಕಾರ್ಯದರ್ಶಿ ಎಸ್.ಜೈಶಂಕರ್​ರಂಥ ಅಚ್ಚರಿಯ ಆಯ್ಕೆ ಈ ಬಾರಿಯ ಸಂಪುಟದ ವಿಶೇಷತೆಯಾಗಿದೆ. ನೂತನ ಸಚಿವರ ವಿವರ ಇಲ್ಲಿದೆ…

 

****************************************************************************************************

ನವದೆಹಲಿ: ದೇಶದ 16ನೇ ಪ್ರಧಾನ ಮಂತ್ರಿಯಾಗಿ ಎರಡನೇ ಬಾರಿಗೆ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದರು.

ಸಂಜೆ ಏಳುಗಂಟೆಗೆ ಸರಿಯಾಗಿ ರಾಷ್ಟ್ರಗೀತೆ ಗಾಯನದೊಂದಿಗೆ ಪದಗ್ರಹಣ ಸಮಾರಂಭ ಆರಂಭವಾಯಿತು. ಮೊಟ್ಟ ಮೊದಲಿಗೆ ರಾಷ್ಟ್ರಪತಿಯವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಮಾಣವಚನ ಬೋಧಿಸಿದರು. ‘ಮೇ ನರೇಂದ್ರ ದಾಮೋದರ್​ ದಾಸ್​ ಮೋದಿ ಎಂದು ಹೇಳಿ ಈಶ್ವರನ ಹೆಸರಿನಲ್ಲಿ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದರು.

ನರೇಂದ್ರ ಮೋದಿಯವರ ಬಳಿಕ ಸಚಿವರಾಗಿ ರಾಜನಾಥ್​ ಸಿಂಗ್​, ಅಮಿತ್​ ಷಾ, ನಿತಿನ್​ ಗಡ್ಕರಿ, ಪಿಯುಷ್​ ಗೋಯಲ್​, ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್​, ರವಿ ಶಂಕರ್​ ಪ್ರಸಾದ್​, ಪ್ರಕಾಶ್​ ಜಾವಡೇಕರ್​, ಡಿ.ವಿ.ಸದಾನಂದ ಗೌಡ ಮತ್ತಿತರರು ಈಶ್ವರನ ಹೆಸರಿನಲ್ಲಿಯೇ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇನ್ನೂ ಹಲವು ಸಚಿವರಿಗೆ ರಾಷ್ಟ್ರಪತಿ ಪ್ರಮಾಣ ವಚನ ಬೋಧಿಸಲಿದ್ದಾರೆ.

ಮೋದಿ ತಾಯಿ ಸಂಭ್ರಮ

ಅತ್ತ ನರೇಂದ್ರ ಮೋದಿಯವರ ಪದಗ್ರಹಣ ಸಮಾರಂಭ ನಡೆಯುತ್ತಿದ್ದರೆ ಇಂದು ಗುಜರಾತ್​ನ ಗಾಂಧಿನಗರದ ಮನೆಯಲ್ಲಿ ಅವರ ತಾಯಿ ಹೀರಾಬೆನ್​ ಪುತ್ರನನ್ನು ಟಿವಿಯಲ್ಲಿ ನೋಡಿ ಸಂತಸ ಪಟ್ಟರು.

ಪ್ರಧಾನಿ ಮೋದಿ ಸಚಿವ ಸಂಪುಟದ ಸಚಿವರ ಪಟ್ಟಿ ಇಲ್ಲಿದೆ.

ಕ್ಯಾಬಿನೆಟ್​ ದರ್ಜೆ ಸಚಿವರು

 1. ರಾಜನಾಥ್​ ಸಿಂಗ್​
 2. ಅಮಿತ್​ ಷಾ
 3. ನಿತಿನ್​ ಜಯರಾಮ್​ ಗಡ್ಕರಿ
 4. ಡಿ.ವಿ. ಸದಾನಂದ ಗೌಡ
 5. ನಿರ್ಮಲಾ ಸೀತಾರಾಮನ್​
 6. ರಾಮ್​ ವಿಲಾಸ್​ ಪಾಸ್ವನ್​
 7. ನರೇನ್​ ಸಿಂಗ್​ ತೋಮರ್
 8. ರವಿಶಂಕರ್​ ಪ್ರಸಾದ್​
 9. ಹರ್​ಸಿಮ್ರತ್​ ಕೌರ್​ ಬಾದಲ್​
 10. ಥಾವರ್​ ಚಂದ್​ ಗೆಹ್ಲೋಟ್​
 11. ಸುಬ್ರಮಣಿಯನ್​ ಜೈ ಶಂಕರ್​
 12. ರಮೇಶ್​ ಪೋಕ್ರಿಯಾಲ್​​ ನಿಶಾಂತ್​
 13. ಅರ್ಜುನ್​ ಮುಂಡಾ
 14. ಸ್ಮೃತಿ ಇರಾನಿ
 15. ಡಾ. ಹರ್ಷವರ್ಧನ್​
 16. ಪ್ರಕಾಶ್​ ಜಾವಡೇಕರ್​
 17. ಪಿಯುಷ್​ ಗೋಯಲ್​
 18. ಧರ್ಮೇಂದ್ರ ಪ್ರಧಾನ್​
 19. ಮುಕ್ತಾರ್​ ಅಬ್ಬಾಸ್​ ನಖ್ವಿ
 20. ಪ್ರಲ್ಹಾದ್ ಜೋಶಿ
 21. ಡಾ. ಮಹೇಂದ್ರ ನಾಥ್​ ಪಾಂಡೆ
 22. ಡಾ. ಅರವಿಂದ್​ ಗಣಪತ್​ ಸಾವಂತ್​
 23. ಗಿರಿರಾಜ್​ ಸಿಂಗ್​
 24. ಗಜೇಂದ್ರ ಸಿಂಗ್​ ಶೇಖಾವತ್​

ರಾಜ್ಯ ದರ್ಜೆ ಸಚಿವರು (ಸ್ವತಂತ್ರ ನಿರ್ವಹಣೆ)

 1. ಸಂತೋಷ್​ ಕುಮಾರ್​ ಗಂಗ್ವಾರ್​
 2. ರಾವ್​ ಇಂದ್ರಜಿತ್​ ಸಿಂಗ್​
 3. ಶ್ರೀಪಾದ್​ ನಾಯಕ್​
 4. ಡಾ. ಜಿತೇಂದ್ರ ಸಿಂಗ್​
 5. ಕಿರಣ್​ ರಿಜಿಜು
 6. ಪ್ರಲ್ಹಾದ್​ ಸಿಂಗ್​ ಪಟೇಲ್​
 7. ರಾಜ್​ ಕುಮಾರ್​ ಸಿಂಗ್​
 8. ಹರ್ದೀಪ್​ ಸಿಂಗ್​ ಪುರಿ
 9. ಮನ್​ಸುಖ್​ ಮಾಂಡವಿಯಾ

ರಾಜ್ಯ ದರ್ಜೆ ಸಚಿವರು

 1. ಫಗ್ಗನ್​ ಸಿಂಗ್​ ಫುಲಸ್ತೆ
 2. ಅಶ್ವಿನಿ ಕುಮಾರ್​ ಚೌಬೆ
 3. ಅರ್ಜುನ್​ ರಾಮ್​ ಮೇಘವಾಲ್​
 4. ವಿ.ಕೆ. ಸಿಂಗ್​
 5. ಕ್ರಿಶನ್​ ಪಾಲ್​
 6. ರಾವ್​ಸಾಹೇಬ್​ ದಾದಾರಾವ್​ ಪಾಟೀಲ್​ ದಾನ್ವೆ
 7. ಕಿಶನ್​ ರೆಡ್ಡಿ
 8. ಪರಶೋತ್ತಮ್​ ರೂಪಾಲ
 9. ರಾಮ್​ದಾಸ್​ ಅಠಾವಳೆ
 10. ಸಾಧ್ವಿ ನಿರಂಜನ್​ ಜ್ಯೋತಿ
 11. ಬಾಬುಲ್​ ಸುಪ್ರಿಯೋ
 12. ಡಾ. ಸಂಜೀವ್​ ಕುಮಾರ್​ ಬಾಲಿಯಾನ್​
 13. ಸಂಜಯ್​ ಶಾಮರಾವ್​ ಧೋತ್ರೆ
 14. ಅನುರಾಗ್​ ಸಿಂಗ್​ ಠಾಕೂರ್​
 15. ಸುರೇಶ್​ ಅಂಗಡಿ
 16. ನಿತ್ಯಾನಂದ ರಾಯ್​
 17. ರತನ್​ ಲಾಲ್​ ಕಠಾರಿಯಾ
 18. ವಿ. ಮುರಳೀಧರನ್​
 19. ರೇಣುಕಾ ಸಿಂಗ್​
 20. ಸೋಮ್​ ಪ್ರಕಾಶ್​
 21. ರಾಮೇಶ್ವರ್​ ತೇಲಿ
 22. ಪ್ರತಾಪ್​ ಚಂದ್ರ ಸಾರಂಗಿ
 23. ಕೈಲಾಶ್​ ಚೌಧರಿ
 24. ದೇಬಶ್ರಿ ಚೌಧರಿ

Stay connected

278,743FansLike
583FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...