Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ದಿಢೀರ್ ತಲಾಕ್ ಶಿಕ್ಷಾರ್ಹ

Thursday, 20.09.2018, 3:05 AM       No Comments

ನವದೆಹಲಿ: ಬಹುರ್ಚಚಿತ ತ್ರಿವಳಿ ತಲಾಕ್ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವ ಐತಿಹಾಸಿಕ ಸುಗ್ರೀವಾಜ್ಞೆಗೆ ಕೇಂದ್ರ ಸಂಪುಟ ಬುಧವಾರ ಸಮ್ಮತಿಯ ಮುದ್ರೆ ಒತ್ತಿದೆ. ಈ ನಿರ್ಧಾರ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ರಾಷ್ಟ್ರಪತಿ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ. ಈಗಾಗಲೇ ಲೋಕಸಭೆಯಲ್ಲಿ ತ್ರಿವಳಿ ತಲಾಕ್ ನಿಷೇಧ ಮಸೂದೆ ಮಂಡನೆಯಾಗಿ ಅಂಗೀಕಾರ ವಾಗಿದ್ದರೂ ಕಾಂಗ್ರೆಸ್ ಸೇರಿ ಇತರ ಪ್ರತಿಪಕ್ಷಗಳ ಅಸಹಕಾರ ದಿಂದಾಗಿ ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಸುಗ್ರೀವಾಜ್ಞೆ ಪ್ರಯೋಗಿಸಿದೆ. ಸುಗ್ರೀವಾಜ್ಞೆ ಪ್ರಕಾರ, ದಿಢೀರ್ ತ್ರಿವಳಿ ತಲಾಕ್ ನೀಡುವವರು 3 ವರ್ಷ ಜೈಲು ಶಿಕ್ಷೆ ಜತೆಗೆ ದಂಡಕಟ್ಟಬೇಕಾಗುತ್ತದೆ. ಇದರ ಜತೆಗೆ ಪತ್ನಿ ಹಾಗೂ ಮಕ್ಕಳಿಗೆ ನಿರ್ವಹಣಾ ವೆಚ್ಚವನ್ನೂ ಪಾವತಿಸಬೇಕಾಗುತ್ತದೆ.

ತ್ರಿವಳಿ ತಲಾಕ್ ವಿರುದ್ಧ 1990ರ ಅವಧಿಯಲ್ಲೇ ಮುಸ್ಲಿಂ ಸಮುದಾಯದ ಮಹಿಳಾ ಹಕ್ಕು ಹೋರಾಟ ಗಾರ್ತಿಯರು ದನಿಯೆತ್ತಿದ್ದರು. 2017ರಲ್ಲಿ ಲಕ್ಷಾಂತರ ಮಹಿಳೆಯರು ಸಹಿ ಸಂಗ್ರಹಿಸುವ ಮೂಲಕ ಈ ಹೋರಾಟಕ್ಕೆ ಶಕ್ತಿ ತುಂಬಿದರು. ತ್ರಿವಳಿ ತಲಾಕ್ ನಿಷೇಧದ ಕುರಿತಾಗಿ ಸುಪ್ರೀಂಕೋರ್ಟ್ ಕೂಡ 2017ರ ಆಗಸ್ಟ್ ನಲ್ಲಿ ಆದೇಶ ನೀಡಿತ್ತು. ಅಲ್ಲಿಂದ ಮುಂದಿನ 6 ತಿಂಗಳವರೆಗೆ ನಿಷೇಧ ಜಾರಿಗೊಳಿಸಿದ್ದ ನ್ಯಾಯಾಲಯ ಅಷ್ಟರೊಳಗೆ ಕೇಂದ್ರ ಸರ್ಕಾರ ಸೂಕ್ತ ಕಾನೂನು ರೂಪಿಸಬೇಕೆಂದು ನಿರ್ದೇಶನ ನೀಡಿತ್ತು.

ಇದಕ್ಕೆ ಪೂರಕವಾಗಿ 2017ರ ಡಿಸೆಂಬರ್​ನಲ್ಲಿಯೇ ಲೋಕಸಭೆ ಈ ಸಂಬಂಧದ ಮಸೂದೆಗೆ ಅನುಮೋದನೆ ನೀಡಿತ್ತು. ಆದರೆ ರಾಜ್ಯಸಭೆಯಲ್ಲಿ ಕಳೆದ 1 ವರ್ಷದಿಂದ ನನೆಗುದಿಗೆ ಬಿದ್ದಿದೆ.

ಸುಪ್ರೀಂಕೋರ್ಟ್ ಆದೇಶದ ಬಳಿಕವೂ ದೇಶಾದ್ಯಂತ 201 ತ್ರಿವಳಿ ತಲಾಕ್ ಪ್ರಕರಣಗಳು ವರದಿಯಾಗಿವೆ. ಸರ್ಕಾರ ಹಾಗೂ ಮಾಧ್ಯಮಗಳ ಗಮನಕ್ಕೆ ಬಾರದ ನೂರಾರು ಪ್ರಕರಣಗಳಿರುತ್ತವೆ. ಹೀಗಾಗಿ ಸುಗ್ರೀವಾಜ್ಞೆ ಹೊರಡಿಸುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ನಿಷೇಧದ ಹಾದಿ

2017ರ ಮಾರ್ಚ್: ತ್ರಿವಳಿ ತಲಾಕ್ ನಿಷೇಧಕ್ಕೆ ಆಗ್ರಹಿಸಿ ರಾಷ್ಟ್ರೀಯ ಮುಸ್ಲಿಂ ಮಂಚ್ ವತಿಯಿಂದ ಸಹಿ ಸಂಗ್ರಹ

2017ರ ಆಗಸ್ಟ್: ತ್ರಿವಳಿ ತಲಾಕನ್ನು 6 ತಿಂಗಳವರೆಗೆ ನಿಷೇಧಿಸಿದ ಸುಪ್ರೀಂ ಕೋರ್ಟ್, ಕಾನೂನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಸೂಚನೆ

2017ರ ಡಿಸೆಂಬರ್: ಲೋಕಸಭೆಯಲ್ಲಿ ವಿಧೇಯಕ ಮಂಡನೆ ಹಾಗೂ ಅನುಮೋದನೆ

2018ರ ಜುಲೈ: ರಾಜ್ಯಸಭೆಯಲ್ಲಿ ಪರಿಷ್ಕೃತ ವಿಧೇಯಕ ಮಂಡನೆ

ಸುಷ್ಮಾ ನೆರವು ಯಾಚನೆ

ಯೆಮನ್ ನಾಗರಿಕನೋರ್ವ ಭಾರತೀಯ ಪತ್ನಿಗೆ ವಾಟ್ಸ್​ಆಪ್ ಮೂಲಕ ತಲಾಕ್ ನೀಡಿದ್ದಾನೆ. ಹೈದರಾಬಾದ್​ನ 29 ವರ್ಷದ ಯುವತಿ ಯೆಮನ್​ನ 62 ವರ್ಷದ ವ್ಯಕ್ತಿಯನ್ನು ಮದುವೆಯಾಗಿದ್ದಳು. ಆದರೆ ಆಕೆ ಭಾರತಕ್ಕೆ ಬಂದ ಸಂದರ್ಭದಲ್ಲಿ ತ್ರಿವಳಿ ತಲಾಕ್ ನೀಡಿದ್ದಾನೆ. ಈ ಕುರಿತು ನೆರವಿಗೆ ಬರುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಯುವತಿ ಮನವಿ ಮಾಡಿದ್ದಾಳೆ.

ಎಲ್ಲೆಲ್ಲಿ ನಿಷೇಧ?

ಪಾಕಿಸ್ತಾನ ಸೇರಿದಂತೆ 21 ದೇಶಗಳಲ್ಲಿ ತ್ರಿವಳಿ ತಲಾಕ್​ಗೆ ನಿಷೇಧವಿದೆ.

ಸುಗ್ರೀವಾಜ್ಞೆಯಲ್ಲೇನಿದೆ?

# ತ್ರಿವಳಿ ತಲಾಕ್ ನೀಡುವವರಿಗೆ ಮೂರು ವರ್ಷ ಜೈಲು ಹಾಗೂ ದಂಡ

#ಸಂತ್ರಸ್ತ ಮಹಿಳೆ, ಆಕೆಯ ರಕ್ತಸಂಬಂಧಿಗಳು ಅಥವಾ ಪತಿಯ ಮನೆಯವರಷ್ಟೇ ದೂರು ಸಲ್ಲಿಸಬಹುದು

# ದೂರು ಸಲ್ಲಿಕೆ ಬಳಿಕ ದಂಪತಿ ಒಪ್ಪಂದಕ್ಕೆ ಬಂದು, ತಲಾಕ್ ಹಿಂಪಡೆದರೆ ದೂರನ್ನು ರದ್ದುಪಡಿಸಬಹುದು

# ಸಂತ್ರಸ್ತ ಪತ್ನಿಯ ಹೇಳಿಕೆ ಪಡೆಯದೇ ಪತಿಗೆ ಜಾಮೀನು ನೀಡುವಂತಿಲ್ಲ

# ನ್ಯಾಯಾಧೀಶರ ಸೂಚನೆಯಂತೆ ಅಪ್ರಾಪ್ತ ಮಕ್ಕಳು ಹಾಗೂ ಪತ್ನಿಗೆ ಪತಿ ನಿರ್ವಹಣಾ ವೆಚ್ಚ ನೀಡಬೇಕು.

# ತ್ರಿವಳಿ ತಲಾಕ್ ಸಂತ್ರಸ್ತ ಮಹಿಳೆಗೆ ಅಪ್ರಾಪ್ತ ಮಗುವಿನ ಜವಾಬ್ದಾರಿ ನೀಡಬೇಕು

# ಈ ಸುಗ್ರೀವಾಜ್ಞೆ ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ

ಯಾವುದು ನಿಷೇಧ?

ತಲಾಕ್​ನಲ್ಲಿ ಮೂರು ವಿಧಗಳಿವೆ- ತಲಾಕ್-ಎ-ಎಹಸಾನ್, ತಲಾಕ್-ಎ-ಹಸನ್ ಹಾಗೂ ತಲಾಕ್-ಎ-ಬಿದ್ದತ್. ಇಲ್ಲಿ ತಲಾಕ್-ಎ-ಬಿದ್ದತ್ ಎಂದರೆ ತ್ರಿವಳಿ ತಲಾಕ್ ಎಂದರ್ಥ. ಹೀಗಾಗಿ ಉಳಿದೆರಡು ರೀತಿಯ ತಲಾಕ್ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಈ ಎರಡು ವಿಧಾನದಲ್ಲಿ ತಲಾಕ್​ಗೆ ಮೂರು ತಿಂಗಳು ಅವಕಾಶ ನೀಡಲಾಗುತ್ತದೆ.

ಏನಿದು ತ್ರಿವಳಿ ತಲಾಕ್?

# ಯಾವುದೇ ಮಾಧ್ಯಮಗಳ ಮೂಲಕ ಆ ಕ್ಷಣದಲ್ಲಿ ಮೂರು ಬಾರಿ ತಲಾಕ್ ಹೇಳಿ ಪತ್ನಿಗೆ ವಿಚ್ಛೇದನ ನೀಡುವುದು

# ಪತ್ನಿ ಎದುರಲ್ಲಿ ಮೌಖಿಕವಾಗಿ ತಲಾಕ್ ಎಂದು ಹೇಳುವುದು; ವಾಟ್ಸ್​ಆಪ್, ಫೇಸ್​ಬುಕ್, ಎಸ್​ಎಂಎಸ್, ದೂರವಾಣಿ ಕರೆ ಮೂಲಕವೂ ತಲಾಕ್ ನೀಡಿದ ಪ್ರಕರಣಗಳಿವೆ.

ಸುಗ್ರೀವಾಜ್ಞೆಗೆ 6 ತಿಂಗಳ ಆಯಸ್ಸು

ಸದ್ಯ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ ಬಿದ್ದಿರುವುದರಿಂದ ಮುಂದಿನ 6 ತಿಂಗಳ ಒಳಗೆ ರಾಜ್ಯಸಭೆಯಲ್ಲಿ ಅನುಮೋದನೆ ಪಡೆದುಕೊಂಡು ಕಾಯ್ದೆ ರೂಪಿಸಬೇಕು. ಇಲ್ಲವಾದಲ್ಲಿ 6 ತಿಂಗಳ ಬಳಿಕ ಮತ್ತೆ ಸುಗ್ರೀವಾಜ್ಞೆ ಹೊರಡಿಸಬೇಕಾಗುತ್ತದೆ.

ಮಹಿಳಾ ಸಮಾನತೆ ಹಾಗೂ ಹಕ್ಕುಗಳ ಬಗ್ಗೆ ಮಾತನಾಡುವ ಸೋನಿಯಾ ಗಾಂಧಿ, ಮಾಯಾವತಿ, ಮಮತಾ ಬ್ಯಾನರ್ಜಿ ಮತಬ್ಯಾಂಕ್ ರಾಜಕಾರಣಕ್ಕಾಗಿ ತ್ರಿವಳಿ ತಲಾಕ್ ಪರ ನಿಂತಿದ್ದಾರೆ.

| ರವಿಶಂಕರ್ ಪ್ರಸಾದ್ ಕೇಂದ್ರ ಕಾನೂನು ಸಚಿವ

ಈ ಸುಗ್ರೀವಾಜ್ಞೆ ಸಂವಿಧಾನ ವಿರೋಧಿ. ಇದರಿಂದ ಮುಸ್ಲಿಂ ಮಹಿಳೆಯರ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸಬೇಕಿದೆ.

| ಅಸಾದುದ್ದೀನ್ ಓವೈಸಿ ಸಂಸದ

Leave a Reply

Your email address will not be published. Required fields are marked *

Back To Top