ಪುರಾತನ ಕಟ್ಟಡ ಯಥಾವತ್ತಾಗಿ ಉಳಿಸಿಕೊಳ್ಳಿ

blank

ತೀರ್ಥಹಳ್ಳಿ: ಬ್ರಿಟಿಷರ ಕಾಲದಿಂದ ಇಂದಿನವರೆಗೆ ತಾಲೂಕಿನ ಆಡಳಿತ ಮತ್ತು ಸಹಸ್ರಾರು ಹೋರಾಟಗಳು, ಸಾಮಾಜಿಕ ಬೆಳವಣಿಗೆಯ ಕೇಂದ್ರ ಸ್ಥಾನವಾಗಿರುವ ಎರಡೂವರೆ ಶತಮಾನಗಳಷ್ಟು ಹಿಂದಿನ ಇತಿಹಾಸವಿರುವ ಹಳೆಯ ತಾಲೂಕು ಕಚೇರಿ ಕಟ್ಟಡವನ್ನು ಯಥಾವತ್ತಾಗಿ ಉಳಿಸಿಕೊಳ್ಳಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ತಹಸೀಲ್ದಾರ್ ಎಸ್.ರಂಜಿತ್, ಪಿಡಬ್ಲುೃಡಿ ಇಂಜಿನಿಯರ್ ಪೃಥ್ವಿರಾಜ್ ಮತ್ತಿತರ ಅಧಿಕಾರಿಗಳ ಜತೆಗೆ ಚರ್ಚಿಸಿದ ಶಾಸಕರು, ಹಳೇ ತಾಲೂಕು ಕಚೇರಿ ಕಟ್ಟಡದ ನವೀಕರಣಕ್ಕೆ ಅಗತ್ಯವಿರುವ ಸಂಪನ್ಮೂಲ ಸಂಗ್ರಹ ಸೇರಿದಂತೆ ಪೂರ್ವಭಾವಿ ಕೆಲಸಗಳ ಕುರಿತು ಮಾತನಾಡಿದರು.
1883ರಲ್ಲಿ ನಿರ್ಮಾಣವಾಗಿರುವ ಈ ಕಟ್ಟಡದ ವಿನ್ಯಾಸ ವಿಭಿನ್ನವಾಗಿದೆ. ಶತಮಾನಗಳ ಇತಿಹಾಸವನ್ನು ನೆನಪಿಸುವ ಇಂತಹ ಕಟ್ಟಡಗಳು ಮುಂದಿನ ತಲೆಮಾರಿಗೆ ಮಾರ್ಗಸೂಚಿಯೂ ಆಗಬಲ್ಲದು. 242 ವರ್ಷ ಹಳೆಯದಾಗಿದ್ದರೂ ರೀಪರ್‌ಗಳ ಹೊರತಾಗಿ ಕಿಟಿಕಿ, ಬಾಗಿಲುಗಳು ಇಂದಿಗೂ ಸುಸ್ಥಿತಿಯಲ್ಲಿದೆ. ಕೋಟ್ಯಂತರ ರೂ. ವೆಚ್ಚದಲ್ಲಿ ಇತ್ತೀಚೆಗೆ ನಿರ್ಮಿಸಿರುವ ಕಟ್ಟಡಗಳಿಗೆ ಸವಾಲೊಡ್ಡುವಂತಿದೆ ಎಂದು ಅಭಿಪ್ರಾಯಪಟ್ಟರು.
ಪಪಂ ಸದಸ್ಯ ಯತಿರಾಜ್, ಹಿರಿಯ ನಾಗರಿಕ ಸಿ.ಬಿ.ಈಶ್ವರ್, ರಾಘವೇಂದ್ರ, ತೂದೂರು ಗ್ರಾಪಂ ಸದಸ್ಯ ಮಧುರಾಜ ಹೆಗ್ಡೆ, ಗೃಹರಕ್ಷಕ ಅಣ್ಣಪ್ಪ ಇತರರಿದ್ದರು.

Share This Article

ಚಾಣಕ್ಯನ ಪ್ರಕಾರ ನಿಮಗೆ ಈ 4 ಸಂಗತಿ ಗೊತ್ತಿದ್ದರೆ ಯಾರಿಂದಲೂ ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ! Chanakya Niti

Chanakya Niti : ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ…

ಪ್ರತಿದಿನ ಬೆಳಿಗ್ಗೆ ಪಪ್ಪಾಯಿ ತಿಂದರೆ ಏನಾಗುತ್ತದೆ ಗೊತ್ತಾ? ನೀವು ಇದನ್ನು ತಿಳಿದುಕೊಳ್ಳಲೇಬೇಕು..Papaya

Papaya: ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯಕ್ಕೂ ಪ್ರಯೋಜನಕಾರಿ ಎನ್ನುವುದು ನಮಗೆ ಗೊತ್ತಿರುವ ವಿಚಾರವಾಗಿದೆ. ಪಪ್ಪಾಯಿ…

ಈ 3 ರಾಶಿಯವರ ಮಾನಸಿಕ ಶಕ್ತಿಯನ್ನು ಕುಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ! ನಿಮ್ಮ ರಾಶಿ ಯಾವುದು? Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ…