More

  ಪ್ರೆಸೆಂಟ್ 0% ಲವ್

  ಬೆಂಗಳೂರು: ‘ಪ್ರೀತಿಯನ್ನು ಪರ್ಸೆಂಟ್ ಲೆಕ್ಕದಲ್ಲಿ ಅಳೆಯಲಾಗುತ್ತದೆಯಾ?’ ಹೌದು ಎಂದಿದೆ ಇಲ್ಲೊಂದು ಚಿತ್ರತಂಡ. ಈ ಬಗ್ಗೆ ಸಿನಿಮಾ ಕೂಡ ಮಾಡುತ್ತಿದ್ದು, ಹೆಸರು ‘ಪ್ರೆಸೆಂಟ್ ಪ್ರಪಂಚ 0% ಲವ್’.

  ‘ಸಂಯುಕ್ತ 2’ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದ ಅಭಿರಾಂ ಅವರು ‘ಪ್ರೆಸೆಂಟ್ ಪ್ರಪಂಚ 0% ಲವ್’ ಚಿತ್ರ ನಿರ್ದೇಶಿಸುತ್ತಿದ್ದು, ‘ಸಂಯುಕ್ತ 2’, ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರಕ್ಕೆ ಬಂಡವಾಳ ಹೂಡಿದ್ದ ಅರ್ಜುನ್ ಮಂಜುನಾಥ ನಾಯಕರಾಗಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿ ಸಿನಿಮಾ ಬಗ್ಗೆ ಹೇಳಿಕೊಂಡಿತು.

  ‘ಇಂದಿನ ದಿನಗಳಲ್ಲಿ ಪ್ರೀತಿ ಯಾವ ಮಹತ್ವ ಪಡೆದಿದೆ? ಯುವ ಸಮುದಾಯ ದಾರಿತಪ್ಪಿ ಭವಿಷ್ಯ ಹೇಗೆ ಹಾಳುಮಾಡಿಕೊಳ್ಳುತ್ತಿದೆ ಎಂದು ತಿಳಿಸುವ ಚಿತ್ರ ಇದು. ರೊಮ್ಯಾಂಟಿಕ್, ಕಾಮಿಡಿ, ಥ್ರಿಲ್ಲರ್ ಕಥಾನಕ ಒಳಗೊಂಡ ಈ ಚಿತ್ರವನ್ನು ಬೆಂಗಳೂರು, ಮೈಸೂರು ಸೇರಿ ಹಲವು ಭಾಗಗಳಲ್ಲಿ 50 ದಿನ ಶೂಟಿಂಗ್ ಮಾಡಲಾಗಿದೆ. ಫೆ.14ರಂದು ಬಿಡುಗಡೆ ಮಾಡುವ ಯೋಜನೆ ಇದೆ’ ಎಂದರು ನಿರ್ದೇಶಕ ಅಭಿರಾಂ.

  ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿರುವ ನಟ ಕಂ ನಿರ್ವಪಕ ಅರ್ಜುನ್ ಮಂಜುನಾಥ, ‘ನಾಯಕನನ್ನಾಗಿಸಿ ಸಿನಿಮಾ ಮಾಡುತ್ತೇನೆ ಎಂದು ಈ ಮೊದಲೇ ನಿರ್ದೇಶಕ ಅಭಿರಾಂ ಹೇಳಿದ್ದರು. ಅವರ ಮಾತನ್ನು ತಮಾಷೆ ಎಂದುಕೊಂಡಿದ್ದೆ. ಕೊನೆಗೂ ಅದು ನಿಜವಾಗಿದೆ. ಚಿತ್ರದಲ್ಲಿ ನನ್ನದು ಸಾಫ್ಟವೇರ್ ಎಂಜಿನಿಯರ್ ಪಾತ್ರ’ ಎಂದು ಮಾತು ಹಂಚಿಕೊಂಡರು.

  ‘ಪ್ರೆಸೆಂಟ್ ಪ್ರಪಂಚ 0% ಲವ್’ ಚಿತ್ರದಲ್ಲಿ ರಂಗಭೂಮಿ ಕಲಾವಿದ ಯಶಸ್ ಅಭಿ ಎರಡನೇ ನಾಯಕನಾಗಿ ಕಾಣಿಸಿಕೊಂಡಿದ್ದು, ಹುಬ್ಬಳ್ಳಿಯ ಅಕ್ಷತಾ ಹಾಗೂ ಸಂಭ್ರಮಶ್ರೀ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹಿರಿಯ ಕಲಾವಿದರಾದ ಎಸ್. ನಾರಾಯಣ್, ಓಂ ಪ್ರಕಾಶ್ ರಾವ್, ತಬಲಾ ನಾಣಿ, ತುಂಗಾ ಪ್ರಮುಖ ತಾರಾವರ್ಗದಲ್ಲಿದ್ದಾರೆ. ಚಿತ್ರಕ್ಕೆ ಎಲ್.ಕೃಷ್ಣಮೂರ್ತಿ, ಎಚ್.ಪಿ.ರವಿಕುಮಾರ್ ಬಂಡವಾಳ ಹಾಕಿದ್ದಾರೆ. ಕೆ.ವಿ. ರವಿಚಂದ್ರ ಸಂಗೀತ, ಈಶ್ವರಿ ಸುರೇಶ್ ಛಾಯಾಗ್ರಹಣ, ವೆಂಕಿ ಸಂಕಲನ ಈ ಚಿತ್ರಕ್ಕಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts