PHOTOS | ಕೊನೆ ಹಂತದ ಮತದಾನಕ್ಕೆ ತಯಾರಿ: ನಾನಾ ಪಕ್ಷದ ಅಭ್ಯರ್ಥಿಗಳು, ತಾರಾ ಪ್ರಚಾರಕರಿಂದ ಅಬ್ಬರದ ಪ್ರಚಾರ

ನವದೆಹಲಿ: ಲೋಕಸಭಾ ಚುನಾವಣೆಯ ಕೊನೆಯ ಹಾಗೂ 7ನೇ ಹಂತದ ಮತದಾನ ಮೇ 19ರಂದು ದೇಶದ ವಿವಿಧೆಡೆ ನಡೆಯಲಿದ್ದು, ನಾನಾ ಪಕ್ಷಗಳ ಘಟಾನುಘಟಿ ಮುಖಂಡರು ತಮ್ಮ ಅಭ್ಯರ್ಥಿ ಪರ ಅಬ್ಬರದ ಪ್ರಚಾರ ನಡೆಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮೌ ಜಿಲ್ಲೆಯಲ್ಲಿ ಪ್ರಚಾರ ನಡೆಸಿದರೆ, ಕುಲ್ಲು ಜಿಲ್ಲೆಯಲ್ಲಿ ಕೇಂದ್ರ ಸಚಿವ ರಾಜನಾಥ್​ ಸಿಂಗ್​ ಪ್ರಚಾರ ನಡೆಸಿದರು. ಪ್ರಮುಖ ಕ್ಷೇತ್ರವಾದ ವಾರಾಣಸಿಯಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ರಾಷ್ಟ್ರೀಯ ಲೋಕ ದಳ(ಆರ್​ಎಲ್​ಡಿ) ಮುಖಂಡ ಅಜಿತ್ ಸಿಂಗ್ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು. ಅಮೃತಸರದಲ್ಲಿ ಅಮ್​ ಆದ್ಮಿ ಪಾರ್ಟಿಯ ನಾಯಕ, ದೆಹಲಿ ಉಪಮುಖ್ಯಮಂತ್ರಿ ಮನೀಷ್​ ಸಿಸೋಡಿಯಾ ಅಭ್ಯರ್ಥಿ ಕುಲ್ದೀಪ್ ಸಿಂಗ್ ಧಲಿವಲ್ ಪರ, ಪಶ್ಚಿಮ ಬಂಗಾಳದ ಪರ್ಗಾನಸ್​ ಜಿಲ್ಲೆಯಲ್ಲಿ ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ನೇಪಾಳ್​ದೇಬ್ ಭಟ್ಟಾಚಾರ್ಜಿ ಪರ ಪ್ರಚಾರ ನಡೆಸಿದರು.