More

    ಪ್ರಧಾನಿ ಮೋದಿ ಸ್ವಾಗತಕ್ಕೆ ಸಜ್ಜಾದ ಅಂಕೋಲಾ

    ಕಾರವಾರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೇ 3 ರಂದು ಅಂಕೋಲಾಕ್ಕೆ ಆಗಮಿಸುತ್ತಿದ್ದು, ಬಿಜೆಪಿ ತಮ್ಮ ಸರ್ವೋಚ್ಚ ನಾಯಕನ ಸ್ವಾಗತಕ್ಕೆ ಅದ್ದೂರಿ ತಯಾರಿ ಕೈಗೊಂಡಿದೆ.
    ಶಾಸಕಿ ರೂಪಾಲಿ ನಾಯ್ಕ ಹಾಗೂ ಜಿಲ್ಲೆಯ ಎಲ್ಲ ಅಭ್ಯರ್ಥಿಗಳು ಸಂಪೂರ್ಣ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದು, ಗಿರೀಶ ಪಟೇಲ್, ಪ್ರಸನ್ನ ಕೆರೆಕೈ, ವೆಂಕಟೇಶ ನಾಯಕ ನೇತೃತ್ವದಲ್ಲಿ ಪಕ್ಷದ ತಂಡ ಮೋದಿ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ವಹಿಸಿಕೊಂಡಿದೆ.
    ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅಂಕೋಲಾ ಹಟ್ಟಿಕೇರಿ ಟೋಲ್ ಗೇಟ್ ಪಕ್ಕದ ಗೌರಿಕೆರೆಯ ಸುಮಾರು 17 ಎಕರೆ ಜಾಗದಲ್ಲಿ ಬೃಹತ್ ಪೆಂಡಾಲ್ ವ್ಯವಸ್ಥೆ ಮಾಡಲಾಗಿದೆ. ಸುಮಾರು 70 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.

    ಉಳಿದವರಿಗೆ ನಿಂತು ಕಾರ್ಯಕ್ರಮ ವೀಕ್ಷಿಸಲು ಪೆಂಡಾಲ್ ವ್ಯವಸ್ಥೆ ಮಾಡಲಾಗಿದೆ. ಎಂಟು ಅಡಿ ಎತ್ತರಕ್ಕೆ ಸುಮಾರು 300 ಮೀಟರ್ ಅಗಲದ ಬೃಹತ್ ವೇದಿಕೆ ಸಜ್ಜು ಮಾಡಲಾಗಿದೆ.

    ಕಾರವಾರದಿಂದ ಬರುವವರಿಗೆ ಹಟ್ಟಿಕೇರಿ ಪಿಎಚ್‌ಸಿ ಬಳಿ, ಅಂಕೋಲಾ, ಕುಮಟಾ, ಶಿರಸಿ, ಯಲ್ಲಾಪುರ ಭಾಗದಿಂದ ಬರುವವರಿಗೆ ಬಾಳೆಗುಳಿ ಬಳಿ ವಿವಿಧೆಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

    ನೌಕಾನೆಲೆ ಜಾಗದಲ್ಲೇ ಪ್ರತ್ಯೇಕ ಮೂರು ಹೆಲಿಪ್ಯಾಡ್‌ಗಳನ್ನು ಮಾಡಲಾಗಿದ್ದು, ವಿಶೇಷ ಭದ್ರತಾ ಪಡೆ ಹಾಗೂ ಸ್ಥಳೀಯ 500 ಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

    ಮಧ್ಯಾಹ್ನ 11 ಗಂಟೆಗೇ ಕಾರ್ಯಕ್ರಮ ಪ್ರಾರಂಭವಾಗಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಎಲ್ಲ 6 ಅಭ್ಯರ್ಥಿಗಳು ಮಾತನಾಡುವರು. 12 ಗಂಟೆಗೆ ಮೋದಿ ಅವರು ಹೆಲಿಕಾಪ್ಟರ್ ಮೂಲಕ ಬಂದಿಳಿಯುವರು.

    ನೇರವಾಗಿ ಅವರು ವೇದಿಕೆಯ ಮೇಲೆ ಬರಲಿದ್ದಾರೆ. ಮೋದಿ ಅವರ ಎದುರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡುವರು.

    ನಂತರ ನರೇಂದ್ರ ಮೋದಿ ಸುಮಾರು ಅರ್ಧ ಗಂಟೆ ಮಾತನಾಡಲಿದ್ದಾರೆ. ವೇದಿಕೆಯ ಮೇಲೆ 17 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಶಿವರಾಮ ಹೆಬ್ಬಾರ ಮಂಗಳವಾರ ಸುದ್ದಿಗೋಷ್ಠೀಯಲ್ಲಿ ಮಾಹಿತಿ ನೀಡಿದರು.

    ಮೋದಿ ಮೋಡಿ ನಿರೀಕ್ಷೆ:

    ಜಿಲ್ಲೆಗೆ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಕಾಲಿಡುತ್ತಿದ್ದಾರೆ. ಅವರ ಪ್ರಚಾರ ಭಾಷಣ ಜಿಲ್ಲೆಯ ಅಭ್ಯರ್ಥಿಗಳ ಗೆಲುವಿಗೆ ರಹದಾರಿಯಾಗಲಿದೆ ಎಂಬುದು ಬಿಜೆಪಿ ಕಾರ್ಯಕರ್ತರ ನಂಬಿಕೆ. `ಮೋದಿ ಅವರು ಬರುವ ಜತೆಗೆ ಜಿಲ್ಲೆಯ ಸಮಸ್ಯೆಗಳನ್ನೂ ಬಿಂಬಿಸಲಾಗುವುದು, ಸೀಬರ್ಡ್ ನೌಕಾನೆಲೆಯಲ್ಲಿ ಸ್ಥಳೀಯರಿಗೆ ಉದ್ಯೋಗ, ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಚಾರಗಳ ಬಗ್ಗೆ ಬಿಜೆಪಿ ನಾಯಕರು ಮೋದಿ ಅವರ ಗಮನ ಸೆಳೆಯಲಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದರು.

    ಇದನ್ನೂ ಓದಿ:ಸಿಂಧನೂರಿನ ಹೊಸಳ್ಳಿ ಕ್ಯಾಂಪ್‌ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು

    ಮೋದಿಗೆ ಇಡಗುಂಜಿ ಗಣಪನ ಮೂರ್ತಿ


    ಯಕ್ಷಗಾನದಲ್ಲಿ ಅರ್ಜುನನ ಪಾತ್ರಧಾರಿಗಳು ತೊಡುವ ಕೇದಕೆ ಮುಂದಲೆ(ಪಗಡೆ)ಯನ್ನು ಅವರ ತಲೆಗೆ ತೊಡಿಸಲಾಗುವುದು. ಕುಮಟಾದಲ್ಲಿ ಸಿದ್ಧವಾದ ಗಂಧದ ಪುಷ್ಪಮಣಿ ಹಾರವನ್ನು ಸಮರ್ಪಿಸಲಾಗುವುದು. ಇಡಗುಂಜಿ ಮಹಾಗಣಪತಿಯ ಮೂರ್ತಿಯುನ್ನು, ಅಂಕೋಲಾ ಕರಿ ಈಶಾಡು ಹಣ್ಣನ್ನು ನೀಡಿ ಸನ್ಮಾನಿಸಲಾಗುವುದು.
    ಮೋದಿ ಅವರಿಗೆ ರವೆ ಪಾಯಸ, ಸೊಪು÷್ಪಗಳ ಪಲ್ಯ, ಮಾವು ಹಾಗೂ ಇತರ ಹಣ್ಣುಗಳ ಊಟದ ವ್ಯವಸ್ಥೆ ಮಾಡಲಾಗಿದೆ. ಆದರೆ, ಭದ್ರತೆಯ ದೃಷ್ಟಿಯಿಂದ ಅವರಿಗೆ ಪ್ರತ್ಯೇಕ ಆಹಾರವನ್ನೇ ನೀಡುವ ಸಾಧ್ಯತೆ ಇದೆ. ಅವರ ಜತೆಗೆ ಬರುವ ಸಿಬ್ಬಂದಿಗೂ ಊಟದ ವ್ಯವಸ್ಥೆ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts