ಜೋಗಿ ಪ್ರೇಮ್​ರನ್ನು ನಿರ್ಮಾಪಕ ಶ್ರೀನಿವಾಸ್​ ಟೋಪಿ ಪ್ರೇಮ್​ ಎಂದಿದ್ದಾರೆ: ಯಾಕೆ ಗೊತ್ತೇ?

ಬೆಂಗಳೂರು: ಕರಿಯಾ, ಎಕ್ಸ್​ಕ್ಯೂಸ್​ಮೀ ಮತ್ತು ಜೋಗಿಯಂಥ ಹಿಟ್​ ಸಿನಿಮಾಗಳನ್ನು ನಿರ್ದೇಶಿಸಿದ್ದ ಪ್ರೇಮ್​ ಅವರನ್ನು ನಿರ್ಮಾಪಕ ಶ್ರೀನಿವಾಸ್​ ಅವರು ಟೋಪಿ ಪ್ರೇಮ್​ ಎಂದು ಜರಿದಿದ್ದಾರೆ.

ತಾರಕಾಸುರ ಸಿನಿಮಾದ ಕುರಿತು ಮಾಹಿತಿ ಹಂಚಿಕೊಳ್ಳಲು ಇಂದು ಬೆಂಗಳೂರಿನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೇಮ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

” ಸಿನಿಮಾ ಮಾಡಿಕೊಡುತ್ತೇನೆ ಎಂದು ನನಗೆ ಹೇಳಿ 14 ವರ್ಷಗಳಾದವು. ಆದರೆ, ಇನ್ನೂ ಟೋಪಿ ಹಾಕಿಕೊಂಡೇ ಓಡಾಡುತ್ತಿದ್ದಾರೆ. ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಓಡಾಡಿಕೊಂಡಿದ್ದಾರೆ,” ಎಂದು ಅವರು ಬೇಸರ ವ್ಯಕ್ತಪಡಿಸಿದರು.