ಶಿವಮೊಗ್ಗ: ಪ್ರಸಾರ ಭಾರತಿ ದೂರದರ್ಶನ ಕೇಂದ್ರದಲ್ಲಿ ನಡೆಸಿದ ಭರತನಾಟ್ಯ ಆಡಿಷನ್‌ನಲ್ಲಿ ನಗರದ ಪ್ರೇಕ್ಷಾ ಅರವಿಂದ್ ಆಯ್ಕೆಯಾಗಿದ್ದಾರೆ. ಇದರೊಂದಿಗೆ ದೂರದರ್ಶನದ ಬಿ ಗ್ರೇಡ್ ಆರ್ಟಿಸ್ಟ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಬೆಂಗಳೂರು ದೂರದರ್ಶನ ಕೇಂದ್ರದಿಂದ ಭರತನಾಟ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ. ಸಿಮ್ಸ್‌ನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಪ್ರೇಕ್ಷಾ, ಎಸ್‌ಆರ್‌ಎನ್‌ಎಂ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಹಾಗೂ ಉಪನ್ಯಾಸಕಿ ಸಿ.ಎ.ಪೂರ್ಣಿಮಾ ಅವರ ಪುತ್ರಿ.