ಮಹೇಂದ್ರ ಸಿಂಗ್​ ಧೋನಿ ಪುತ್ರಿ ಝಿವಾಳನ್ನು ಕಿಡ್ನ್ಯಾಪ್​ ಮಾಡುತ್ತೇನೆ ಎಂದು ಪ್ರೀತಿ ಜಿಂಟಾ ಹೇಳಿದ್ದೇಕೆ?

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರ ಮುದ್ದಿನ ಮಗಳು ಝಿವಾಳನ್ನು ಅಪಹರಿಸುತ್ತೇನೆ ಎಂದು ಬಾಲಿವುಡ್​ ನಟಿ ಮತ್ತು ಕಿಂಗ್ಸ್​ ಇಲೆವೆಲ್​ ಪಂಜಾಬ್​ ತಂಡದ ಮಾಲಕಿ ಪ್ರೀತಿ ಜಿಂಟಾ ತಿಳಿಸಿದ್ದಾರೆ.

ಭಾನುವಾರ ಮೊಹಾಲಿನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಕಿಂಗ್ಸ್​ ಇವೆಲೆನ್​ ಪಂಜಾಬ್​ ತಂಡದ ನಡುವೆ ಪಂದ್ಯ ನಡೆದಿತ್ತು. ಪಂದ್ಯದ ಬಳಿಕ ಧೋನಿ ಅವರನ್ನು ಭೇಟಿ ಮಾಡಿದ ಪ್ರೀತಿ ಜಿಂಟಾ ಕೆಲ ಕಾಲ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ತೆಗೆದ ಚಿತ್ರವನ್ನು ಪ್ರೀತಿ ಜಿಂಟಾ ಮಂಗಳವಾರ ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಫೋಟೋ ಶೇರ್​ ಮಾಡುವುದರ ಜತೆಗೆ ಅವರು ‘ಕ್ಯಾಪ್ಟನ್​ ಕೂಲ್​ ಧೋನಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅದರಲ್ಲಿ ನಾನೂ ಒಬ್ಬಳು. ಆದರೆ ಈಗ ನಾನು ಅವರ ಪುತ್ರಿ ಝಿವಾಳ ಅಭಿಮಾನಿಯಾಗಿ ಬದಲಾಗಿದ್ದೇನೆ. ನಾನು ಅವರಿಗೆ ಈಗಲೇ ತಿಳಿಸುತ್ತಿದ್ದೇನೆ. ಆಕೆಯನ್ನು ನಾನು ಅಪಹರಿಸಲೂ ಬಹುದು’ ಎಂದು ಝಿವಾಳ ಮೇಲಿರುವ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *