ನವದೆಹಲಿ: ಮಕ್ಕಳಿಲ್ಲದವರು, ಮಕ್ಕಳಾಗಲ್ಲ ಎಂಬಂಥವರು ದತ್ತು ಪಡೆಯಲಿಕ್ಕೇ ಮಕ್ಕಳು ಸಿಗುತ್ತಿಲ್ಲ. ಅಂಥದ್ದರಲ್ಲಿ ಇಲ್ಲೊಬ್ಬಳು ಗರ್ಭಿಣಿ ತಾನು ಮಗುವೊಂದಕ್ಕೆ ಜನ್ಮ ನೀಡಲಿರುವುದು ಖಚಿತವಿದ್ದರೂ ಇನ್ನೊಂದು ಮಗುವೊಂದನ್ನು ಕದ್ದೊಯ್ದಿದ್ದಾಳೆ. ಹೀಗೆ ಮಗುವನ್ನು ಕಳವು ಮಾಡಲೆಂದೇ ಕಡಿಮೆ ಭದ್ರತೆ ಇರುವ ಆಸ್ಪತ್ರೆಯೊಂದನ್ನು ಆಯ್ಕೆ ಮಾಡಿಕೊಂಡು ದಾಖಲಾದ ಅವಳು, ಅಲ್ಲಿನ ಹೆರಿಗೆ ವಾರ್ಡ್ನೊಳಕ್ಕೆ ಹೊಕ್ಕು ಮಗುವೊಂದನ್ನು ಕದ್ದು ಪರಾರಿಯಾಗಿದ್ದಾಳೆ.
ಇಂಥದ್ದೊಂದು ವಿಚಿತ್ರ ಪ್ರಕರಣ ಕರಾಚಿಯ ಆಸ್ಪತ್ರೆಯೊಂದರಲ್ಲಿ ಜೂ. 23ರಂದು ನಡೆದಿದ್ದು, ಹಾಗೆ ಮಗುವನ್ನು ಕದ್ದುಕೊಂಡು ಹೋಗಿ ತಲೆಮರೆಸಿಕೊಂಡಿದ್ದ ಮಹಿಳೆ ಕೊನೆಗೂ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. 37 ವರ್ಷದ ಮಹಿಳೆಗೆ ಈಗಾಗಲೇ ಮೂವರು ಹೆಣ್ಣು ಮಕ್ಕಳಿದ್ದು, ಇದೀಗ ಮತ್ತೊಮ್ಮೆ ಗರ್ಭಿಣಿಯಾಗಿದ್ದರೂ ಯಾಕೆ ಮಗುವನ್ನು ಕದ್ದಳು ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿದೆ.
ಇದನ್ನೂ ಓದಿ: ಸೀಟ್ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ
ಮನೆಯಲ್ಲಿ ಗಂಡು ಮಗು ಬೇಕು ಎಂಬ ಒತ್ತಡ ಹೆಚ್ಚಾಗಿತ್ತು. ಮಾತ್ರವಲ್ಲ, ತಾನು ಜನ್ಮ ಕೊಡಲಿರುವ ಮಗು ಹೆಣ್ಣು ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದುಬಂದಿತ್ತು. ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ಮನೆಯವರು ನಾಲ್ಕನೆಯದ್ದೂ ಹೆಣ್ಣು ಮಗುವಾದರೆ ಇಷ್ಟಪಡಲಾರರು ಎಂಬ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿ, ಗಂಡುಮಗುವನ್ನು ಕದ್ದೆ ಎಂಬುದಾಗಿ ಈಕೆ ಪೊಲೀಸರಿಗೆ ತಿಳಿಸಿದ್ದಾಳೆ. (ಏಜೆನ್ಸೀಸ್)
ನೀವು ಈ ಬ್ಯಾಂಕ್ ಖಾತೆದಾರರಾಗಿದ್ದರೆ ಇತ್ತ ಸ್ವಲ್ಪ ಗಮನಹರಿಸಿ; ಐಎಫ್ಎಸ್ಸಿ ಬದಲಾಗಿದೆ ಗಮನಿಸಿ..
ರಾಜ್ಯದಲ್ಲಿ ಕರೊನಾ ಸಕ್ರಿಯ ಪ್ರಕರಣಗಳೆಷ್ಟು ಗೊತ್ತೇ? ಈ ಅಂಕಿ-ಅಂಶ ನೋಡಿದರೆ ನೀವಾಗಬಹುದು ನಿರಾಳ..
ಆ ಭಾಗ ಸ್ವಲ್ಪ ಕಾಣಿಸ್ತಿದೆ ಅಂತ ಜಿಮ್ನಿಂದ್ಲೇ ಹೊರಗೆ ಕಳಿಸಿದ್ರಂತೆ!; ಅವಮಾನ ಆಯಿತೆಂದು ವಿಡಿಯೋ ಮಾಡಿ ಅತ್ತಳು…
ತಮ್ಮನ ಮದ್ವೆಗಾಗಿ 2 ದಿನ ರಜೆ ತೆಗೆದುಕೊಳ್ಳಲಿಕ್ಕೂ ಪತ್ರ ಬರೆದು ಕೋರಿಕೊಂಡ ಗ್ರಾಮ ಪಂಚಾಯತ್ ಸದಸ್ಯ!