Tuesday, 11th December 2018  

Vijayavani

Breaking News

ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು ಆರೋಪ: ಪೋಷಕರ ಪ್ರತಿಭಟನೆ

Sunday, 14.01.2018, 9:48 AM       No Comments

ಉತ್ತರಕನ್ನಡ: ವೈದ್ಯರ ನಿರ್ಲಕ್ಷ್ಯಕ್ಕೆ ಆಸ್ಪತ್ರೆಯಲ್ಲಿ ಬಾಣಂತಿ ಸಾವು ಎಂದು ಆರೋಪಿಸಿ ಆಸ್ಪತ್ರೆ ಬಳಿ ಶವವಿಟ್ಟು ಪೋಷಕರು ಪ್ರತಿಭಟನೆ ನಡೆಸಿದರು.

ಉತ್ತರಕನ್ನಡದ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಜನವರಿ 8ರಂದು ಆಯಿಷಾ ಗೌಸ್‌ ಅಕ್ತರ್‌(32) ಎಂಬಾಕೆಯನ್ನು ದಾಖಲಿಸಲಾಗಿತ್ತು.

ಹೆರಿಗೆ ಸಮಯದಲ್ಲಿ ಸಮರ್ಪಕ ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ಆಕೆಯನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಯಿಷಾ ಮೃತಪಟ್ಟಿದ್ದರು.

ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು ಎಂದು ಪೋಷಕರು ಆರೋಪಿಸಿದ್ದು, ಹಳಿಯಾಳ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top