ಈ ಆರುತಿಂಗಳ ಗರ್ಭಿಣಿಗೆ ಮಗಳನ್ನೂ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ನೋವು ಏನಿತ್ತು?

ಚಾಮರಾಜನಗರ: ಆರು ತಿಂಗಳ ಗರ್ಭಿಣಿ, ಮೂರು ವರ್ಷದ ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೊಡ್ಡಮೋಳೆ ಗ್ರಾಮದ ಮಹಾಲಕ್ಷ್ಮೀ (24) 6 ತಿಂಗಳ ಗರ್ಭಿಣಿ. ಈಗಾಗಲೇ ಮೂರು ವರ್ಷದ ಮಗುವಿದೆ. ಪತಿ ಪತ್ನಿ ನಡುವೆ ಸದಾ ಜಗಳ ನಡೆಯುತ್ತಿತ್ತು. ಪತಿ ಸೋಮಶೇಖರ್​ ಸದಾ ಕಿರುಕುಳ ನೀಡುತ್ತಿದ್ದ. ಬೇಸತ್ತ ಮಹಾಲಕ್ಷ್ಮೀ ತನ್ನ ಮಗಳು ಪ್ರಣೀತಾಳನ್ನು ಕೊಂದು ತಾನೂ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆದರೆ ಮಹಾಲಕ್ಷ್ಮೀ ಪೋಷಕರು ಇದು ಕೊಲೆ ಎಂಬ ಅನುಮಾನ ವ್ಯಕ್ತಪಡಿಸಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪತಿ ಸೋಮಶೇಖರ್​ ಪರಾರಿಯಾಗಿದ್ದಾನೆ. ಪೂರ್ವ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *