ಮೆಗಾ ಮಾರುಕಟ್ಟೆ ಕಟ್ಟಡ ನಿರ್ಮಿಸಲು ಆದ್ಯತೆ

Prefer to construct mega market building

ನಿಡಗುಂದಿ: ಮನಸ್ಸಿಟ್ಟು ಕೆಲಸ ಮಾಡಿದರೆ ೇತ್ರದ ಅಭಿವೃದ್ಧಿ ಸಾಧ್ಯ. ೇತ್ರ ಸೇರಿ ನಿಡಗುಂದಿ ಪಟ್ಟಣವನ್ನು ಮಾದರಿ ಪಟ್ಟಣವಾಗಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಜವಳಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಪ.ಪಂ. ವತಿಯಿಂದ ವಿವಿಧ ವಾರ್ಡ್​ಗಳಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿ ಭೂಮಿಪೂಜೆ ಹಾಗೂ ಕಾಟಾಪುರ ರಸ್ತೆ ಬದಿ ಸಸಿ ನೆಡುವ ಕಾರ್ಯ, ವಾಣಿಜ್ಯ ಮಳಿಗೆ ಚಾಲನೆ ನೆರವೇರಿಸಿದ ನಂತರ ವೀರೇಶ ನಗರದ ಉದ್ಯಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿಯೇ ನಿಡಗುಂದಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ನಿಡಗುಂದಿ ತಾಲೂಕು ರಚನೆಗೆ ಬೇಕಾಗಿದ್ದ ಎಲ್ಲ ಅರ್ಹತೆ ಒದಗಿಸುವ ಮೂಲಕ ತಾಲೂಕು ಕೇಂದ್ರ ರಚನೆ ಮಾಡಲಾಗಿದೆ. ನಿಡಗುಂದಿಯಲ್ಲಿ ನೀರಿನ ಬವಣೆ ತಪ್ಪಿಸಲು ಜಲಾಧಾರೆ ಯೋಜನೆಯಡಿ ಆಲಮಟ್ಟಿಯಿಂದ 1300 ಕೋಟಿ ರೂ. ವೆಚ್ಚದಲ್ಲಿ ಇಂಡಿ, ವಿಜಯಪುರ ಬಸವನಬಾಗೇವಾಡಿ ಸೇರಿ ಮೂರು ತಾಲೂಕಿಗೆ ನೀರು ಕೊಡುವ ಮೂಲಕ 2050 ರವರೆಗೆ ನೀರಿನ ಸಮಸ್ಯೆ ಆಗದಂತೆ ಮಾಡಲಾಗಿದೆ ಎಂದರು.

ಪಾತೀತ ಹಾಗೂ ಜಾತ್ಯತಿತವಾಗಿ ಪಟ್ಟಣದ ಎಲ್ಲ ವಾರ್ಡ್​ಗಳಲ್ಲಿ ಅಂದಾಜು 55 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆ ನೀಡುತ್ತಿರುವ ಕಾರಣದಿಂದ ನಿಡಗುಂದಿಯಲ್ಲಿ ತಾಲೂಕು ಕಚೇರಿಗಳನ್ನು ತೆರೆಯುವಲ್ಲಿ ಸ್ವಲ್ಪ ವಿಳಂಬವಾಗಿದೆ. ಸದ್ಯದಲ್ಲೇ ಇಲ್ಲಿ ಮೆಗಾ ಮಾರುಕಟ್ಟೆ ಕಟ್ಟಡ ಕಾರ್ಯ ಆರಂಭವಾಗಲಿದೆ. ಮಾದರಿ ಪಟ್ಟಣಕ್ಕೆ ಮುಂಬರುವ ದಿನದಲ್ಲಿ ಅಗತ್ಯ ಎಲ್ಲ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು ಎಂದರು.

ಶಿಣ ಪ್ರೇಮಿ ಸಿದ್ಧಣ್ಣ ನಾಗಠಾಣ ಮಾತನಾಡಿ, ಸಚಿವ ಶಿವಾನಂದ ಪಾಟೀಲ ಅವರು ೇತ್ರಕ್ಕೆ ಆಯ್ಕೆಗೊಂಡ ದಿನದಿಂದ ೇತ್ರದ ದಿಕ್ಕನ್ನೆ ಬದಲಿಸುವ ಜತೆಗೆ ನಿಡಗುಂದಿಗೆ ಪಟ್ಟಣಕ್ಕೆ ಬೇಕಾದ ಎಲ್ಲ ಅರ್ಹತೆ ಒದಗಿಸಿ ತಾಲೂಕಿನ ಕೀರಿಟ ನೀಡಿದರು. ಸಿಮೆಂಟ್​ ಮುಖವನ್ನೇ ನೋಡದ ರಸ್ತೆಗಳು ಸುಂದರ ರಸ್ತೆಗಳಾಗಿ ಕಂಡವು. ನೂರಾರು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಣುವಂತಾಗಿದೆ. ಅಭಿವೃದ್ಧಿ ಮಂತ್ರದಿಂದ ಮತ ಕೇಳುವ ಸಚಿವರನ್ನು ಎಂದಿಗೂ ಕಳೆದುಕೊಳ್ಳಲು ಸಾಧ್ಯವಿಲ್ಲ. ಬರುವ ದಿನಗಳಲ್ಲಿ ಎಲ್ಲ ಕಾರ್ಯಗಳನ್ನು ಸಚಿವ ಶಿವಾನಂದ ಪಾಟೀಲ ಅವರು ಪ್ರಾಮಾಣಿಕವಾಗಿ ಮಾಡುತ್ತಾರೆ ಎಂದರು.ಪಪಂ ಮುಖ್ಯಾಧಿಕಾರಿ ವೀರೇಶ ಹಟ್ಟಿ, ಕಸಾಪ ತಾಲೂಕಾಧ್ಯ ಸಂಗಮೇಶ ಕೆಂಭಾವಿ, ಬಾಬು ಸಜ್ಜನ ಇತರರು ಮಾತನಾಡಿದರು.

ಪಪಂ ಅಧ್ಯೆ ದೇಸಾಯಿ ಜಂಬಕ್ಕ ವಿಭೂತಿ, ಉಪಾಧ್ಯೆ ಗೌರಮ್ಮ ಹುಗ್ಗಿ, ತಹಸೀಲ್ದಾರ್​ ಎ.ಡಿ.ಅಮರವಾದಗಿ, ಮುಖಂಡರಾದ ಪರಶುರಾಮ ಕಾರಿ, ಶೇಖರ ರೂಡಗಿ, ಎಂ.ಎಂ ಮುಲ್ಲಾ, ಮೌಲಾಸಾಬ ಅತ್ತಾರ, ಸಂಗಮೇಶ ಬಳಿಗಾರ, ಗಂಗಾಧರ ವಾರದ, ಬಸಯ್ಯ ಸಾಲಿಮಠ, ಜಿಲ್ಲಾ ಕಾಂಗ್ರೆಸ್​ ಸಮಿತಿ ಪ.ಜಾತಿ ಸಂಟನಾ ಕಾರ್ಯದರ್ಶಿ ರಾವೇಂದ್ರ ವಡವಡಗಿ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯ ಚಂದ್ರು ಹಳಮನಿ, ತಮ್ಮಣ್ಣ ಬಂಡಿವಡ್ಡರ, ಆಂಜನೇಯ ಮೋಪಗಾರ, ರವಿ ಬೋವಿವಡ್ಡರ, ಪಪಂ ಸದಸ್ಯರು ಇತರರಿದ್ದರು.

ಪಪಂ ಸಿಬ್ಬಂದಿ ಹಾಗೂ ಹಾಲುಮತ ಸಮಾಜ ಬಾಂಧವರು, ವೀರೇಶ ನಗರದ ಗಜಾನನ ಯುವಕ ಮಂಡಳದವರು ಸಚಿವ ಶಿವಾನಂದ ಪಾಟೀಲ ಅವರನ್ನು ಸನ್ಮಾನಿಸಿದರು. ಪಟ್ಟಣದ ನಾಗರಿಕರು ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು.

Share This Article

World Arthritis Day: ಸಂಧಿವಾತ ಕಾಯಿಲೆಗೆ ಚಿಕಿತ್ಸೆಯೇ ಮದ್ದು! ತಜ್ಞವೈದ್ಯೆ ಡಾ. ಅರ್ಚನಾ ಎಂ. ಉಪ್ಪಿನ ಅಭಿಮತ

ಪ್ರಸ್ತುತ ದಿನಗಳಲ್ಲಿ ಬಿಪಿ-ಶುಗರ್ ಸಮಸ್ಯೆಯಂತೆ ಅರ್ಥರೈಟಿಸ್ ( Arthritis ) , ರುಮಾಟಾಲಜಿ (ಸಂಧಿವಾತ/ ಕೀಲುವಾಯು)…

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತಿದ್ಯಾ? ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…