Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ವರ್ಗಾವಣೆ ಮುಂದೂಡಿಕೆ ಹಿಂದೆ ರಾಜಕೀಯ ಒತ್ತಡ?

Monday, 02.07.2018, 3:03 AM       No Comments

ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಕೌನ್ಸೆಲಿಂಗ್ ಮುಂದೂಡಿಕೆಯಿಂದ ಬಹಳಷ್ಟು ಉಪನ್ಯಾಸಕರಿಗೆ ನಿರಾಶೆಯಾಗಿದೆ. ನಗರ ಪ್ರದೇಶಗಳಲ್ಲಿ ಪಡೆಯುತ್ತಿರುವ ಎಚ್​ಆರ್​ಎ ಸೌಲಭ್ಯ ಕಳೆದುಕೊಳ್ಳಲಾಗದೆ, ಗ್ರಾಮೀಣ ಪ್ರದೇಶಕ್ಕೆ ಹೋಗಲಾರದ ಉಪನ್ಯಾಸಕರ ಗುಂಪಿನ ಲಾಬಿ ಇದರ ಹಿಂದೆ ಕೆಲಸ ಮಾಡಿದೆ ಎಂದು ಅವಕಾಶವಂಚಿತ ಉಪನ್ಯಾಸಕರು ವಿಜಯವಾಣಿ ಸಹಾಯವಾಣಿಗೆ ಕರೆ ಮಾಡಿ ಅಸಹಾಯಕತೆ ತೋಡಿಕೊಂಡಿದ್ದಾರೆ. ಈ ಮೇರೆಗೆ ನಮ್ಮ ವರದಿಗಾರ ರಮೇಶ ಜಹಗೀರದಾರ್ ಮಾಡಿದ ವರದಿ ಇಲ್ಲಿದೆ.

ದಾವಣಗೆರೆ: ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ 2017-18ನೇ ಸಾಲಿನ ವರ್ಗಾವಣೆಗಳ ಕೌನ್ಸೆಲಿಂಗ್ ಅನಿರ್ದಿಷ್ಟವಾಗಿ ಮುಂದೂಡಿರುವುದರ ಹಿಂದೆ ರಾಜಕೀಯ ಒತ್ತಡ ಕೆಲಸ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

ವರ್ಗಾವಣೆ ನಿರೀಕ್ಷೆಯಲ್ಲಿರುವ ಉಪನ್ಯಾಸಕರಿಗೆ ಇದರಿಂದ ಅನ್ಯಾಯವಾಗಿದೆ. ಚುನಾವಣೆ ಮತ್ತು ಪರೀಕ್ಷಾ ಕಾರ್ಯಗಳಿಂದಾಗಿ ಹಲವು ಬಾರಿ ಮುಂದೂಡಲಾಗಿದ್ದ ವರ್ಗಾವಣೆ ಈ ಬಾರಿಯೂ ಹಳ್ಳ ಹಿಡಿಯುವ ಲಕ್ಷಣಗಳು ಗೋಚರಿಸುತ್ತಿವೆ.

ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಶನಿವಾರ ಸಭೆ ನಡೆದಿದ್ದು, ಅವರ ನಿರ್ದೇಶನದಂತೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಕೋರಿಕೆ, ಪರಸ್ಪರ ಮತ್ತು ಕಡ್ಡಾಯ ವರ್ಗಾವಣೆ ಕೌನ್ಸೆಲಿಂಗ್​ಅನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ.

ವರ್ಗಾವಣೆ ನಿಯಮದಲ್ಲಿ ತಿದ್ದುಪಡಿ ತಂದ ನಂತರ ಉಪನ್ಯಾಸಕರಲ್ಲಿ ಆಶಾಭಾವನೆ ಮೂಡಿತ್ತು. ಅನೇಕ ವರ್ಷಗಳಿಂದ ಅವಕಾಶ ವಂಚಿತರಾದವರಿಗೆ ಈ ಬಾರಿಯಾದರೂ ವರ್ಗಾವಣೆ ಭಾಗ್ಯ ಸಿಗಬಹುದು ಎಂಬ ಭರವಸೆ ಇತ್ತು. 10 ವರ್ಷಕ್ಕೂ ಮೇಲ್ಪಟ್ಟು ನಗರ ಪ್ರದೇಶಗಳಲ್ಲೇ ಠಿಕಾಣಿ ಹೂಡಿದ್ದ ಉಪನ್ಯಾಸಕರಲ್ಲಿ ಕೇವಲ ಶೇ. 5ರಷ್ಟು ಜನರನ್ನು ಕಡ್ಡಾಯ ವರ್ಗಾವಣೆಗಾಗಿ ಗುರುತಿಸಲಾಗಿತ್ತು. ಅಂಥ ಉಪನ್ಯಾಸಕರ ಗುಂಪು ರಾಜಕೀಯ ಒತ್ತಡ ತರುವಲ್ಲಿ ಯಶಸ್ವಿಯಾಗಿದೆ ಎಂಬ ಮಾತು ಕೇಳಿಬಂದಿದೆ.

ನಗರ ಪ್ರದೇಶಗಳಲ್ಲಿ ಪಡೆಯುತ್ತಿರುವ ಉತ್ತಮ ಎಚ್​ಆರ್​ಎ (ಕನಿಷ್ಠ 10 ಸಾವಿರ ರೂ. ವ್ಯತ್ಯಾಸ)ಕಳೆದುಕೊಳ್ಳಲು ಮನಸಿಲ್ಲದ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಪಾಠ ಮಾಡಲೊಲ್ಲದ ಉಪನ್ಯಾಸಕರ ಗುಂಪಿನ ಲಾಬಿ ಕೆಲಸ ಮಾಡಿದೆ ಎಂಬ ಆರೋಪವಿದೆ.

ಒಮ್ಮೆ ಸರ್ಕಾರದ ಹಂತದಲ್ಲೇ ನಿರ್ಣಯಿಸಲಾದ, ರಾಜ್ಯಪತ್ರದಲ್ಲಿ ಪ್ರಕಟಣೆಯಾದ ವರ್ಗಾವಣೆ ತಿದ್ದುಪಡಿ ಗಳನ್ನು ಈ ರೀತಿ ರಾಜಕೀಯ ಒತ್ತಡಕ್ಕೆ ಮಣಿದು ಬದಲಾಯಿಸುವುದು ಎಷ್ಟು ಸಮರ್ಥನೀಯ ಎಂದು ಅವಕಾಶವಂಚಿತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಸಚಿವರು ಮತ್ತು ನಿರ್ದೇಶಕರು ಈ ಮುಂಚಿನ ವೇಳಾಪಟ್ಟಿಯಂತೆ ವರ್ಗಾವಣೆ ನಡೆಸುವ ಬದ್ಧತೆ ಪ್ರದರ್ಶಿಸಲಿ ಎಂಬುದು ಅವರ ಒತ್ತಾಯ.

ಯಾವುದೇ ನೆಪ ಹೇಳದೆ ಈ ತಿಂಗಳ ಒಳಗಾಗಿ ವರ್ಗಾವಣೆ ಮಾಡಲೇಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು.

| ತಿಮ್ಮಯ್ಯ ಪುರ್ಲೆ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ

ವರ್ಗಾವಣೆ ನಿರೀಕ್ಷೆಯಲ್ಲಿ..

ವರ್ಗಾವಣೆ ಭಾಗ್ಯಕ್ಕಾಗಿ ಅದೆಷ್ಟೋ ಉಪನ್ಯಾಸಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ದೂರದ ಜಿಲ್ಲೆಯಿಂದ ಬಂದು ಗ್ರಾಮೀಣ ಭಾಗದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇಂದಲ್ಲ ನಾಳೆ ವರ್ಗಾವಣೆಯಾಗುತ್ತದೆ ಎಂಬ ನಿರೀಕ್ಷೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಆರೋಗ್ಯ ತೊಂದರೆ, ಕೌಟುಂಬಿಕ ಕಾರಣಗಳಿಂದ ವರ್ಗಾವಣೆಗೆ ಕಾಯುತ್ತಿರುವವರೂ ಬಹಳಷ್ಟು ಜನರಿದ್ದಾರೆ. ಪತಿ ಒಂದು ಕಡೆ, ಪತ್ನಿ ಒಂದು ಕಡೆ ಇರಬೇಕಾದ ಅನಿವಾರ್ಯತೆ. ಅಂಗವಿಕಲರು, ವಿಧವೆಯರು ಆದ್ಯತಾ ಪಟ್ಟಿಯಲ್ಲಿ ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *

Back To Top