ಹರಿಹರ: ತಾಲೂಕಿನ ನಗರಸಭಾ ಸಭಾಂಗಣದಲ್ಲಿ ಸೋಮವಾರ ನಗರಸಭೆ ಅಧ್ಯಕ್ಷ ಕವಿತಾ ಬೇಡರ್ ಅಧ್ಯಕ್ಷತೆಯಲ್ಲಿ ಆಯವ್ಯಯ ತಯಾರಿಕೆ ಪೂರ್ವಭಾವಿ ಸಭೆ ನಡೆಯಿತು.

ನಗರದ ಸಮಗ್ರ ಅಭಿವೃದ್ಧಿ ಹಾಗೂ ಆದಾಯ ಹೆಚ್ಚಳಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಂದ ಸಲಹೆಗಳ ಮಹಾಪೂರವೇ ಹರಿದು ಬಂತು.
ನಗರಸಭೆಯ ಆದಾಯ ಹೆಚ್ಚಳಕ್ಕೆ ಬಿ. ಖಾತೆ ನೀಡುವುದು, ಏಕ ನಿವೇಶನಕ್ಕೆ ಅನುಮೋದನೆ, ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು, ನಗರಸಭೆಯ ಮುಂಭಾಗ ಮಳಿಗೆಗಳನ್ನು ನಿರ್ವಿುಸುವುದು ಸೇರಿ ಇತರೆ ಮೂಲಗಳಿಂದ ಆದಾಯ ಹೆಚ್ಚಳಕ್ಕೆ ವಿಪುಲ ಅವಕಾಶವಿದೆ ಎಂದು ಹಲವರು ಸಲಹೆ ನೀಡಿದರು.
ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ಸದಸ್ಯ ಶಿವಪ್ರಕಾಶ್ ಶಾಸ್ತ್ರಿ, ನಗರಸಭೆಯಲ್ಲಿ ಬಿಲ್ಡಿಂಗ್ ಲೈಸೆನ್ಸ್ ಸಿಗುತ್ತಿಲ್ಲ ಎಂದರೆ, ಎಂ.ಬಿ. ಅಣ್ಣಪ್ಪ, ಬಿ-ಖಾತೆ ಮಾಡಿದರೆ ನಗರಸಭೆಗೆ ಅಂದಾಜು 5 ಕೋಟಿ ಆದಾಯ ಬರುತ್ತದೆ ಎಂದು ಗಮನ ಸೆಳೆದರು.
ರೇವಣಸಿದ್ದಪ್ಪ ಬೆಣ್ಣೆ ಮಾತನಾಡಿ, ಮುಂಬರುವ ಆಯವ್ಯಯದಲ್ಲಿ ನಗರದ ಅಭಿವೃದ್ಧಿಗೆ ಗಮನ ಹರಿಸುವಂತೆ ಒತ್ತಾಯಿಸಿದರು.
ಅಮರಾವತಿ ರೇವಣಸಿದ್ದಪ್ಪ ಮಾತನಾಡಿ, ನಗರದಲ್ಲಿ ರ್ಪಾಂಗ್ ವ್ಯವಸ್ಥೆ ಮಾಡಿದರೆ ಲಕ್ಷಾಂತರ ಆದಾಯ ಬರುವಂತೆ ಮಾಡಬಹುದು ಎಂದರು.
ಪತ್ರಕರ್ತ ಶೇಖರ್ ಗೌಡ ಪಾಟೀಲ್ ಮಾತನಾಡಿ, ಶಿಥಿಲಗೊಂಡ ನಗರಸಭಾ ಮಳಿಗೆಗಳ ಮರುನಿರ್ವಣದಿಂದ ಹೆಚ್ಚು ಆದಾಯ ನಿರೀಕ್ಷಿಸಬಹುದು. ಹಾಗೆಯೇ ನಗರದಲ್ಲಿ ಕನ್ನಡ ಭವನ ನಿರ್ವಣಕ್ಕೆ 1 ಕೋಟಿ ರೂ., ರಾಜ್ಯೋತ್ಸವ ಆಚರಣೆಗೆ 10 ಲಕ್ಷ ರೂ. ಮೀಸಲಿಡಬೇಕು ಎಂದರು.
ನಗರಸಭೆ ಅಧ್ಯಕ್ಷೆ ಕವಿತಾ ಬೇಡರ್ ಮಾತನಾಡಿ, ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹರಿಹರ ನಗರದ ಅಭಿವೃದ್ಧಿಗೆ ಯಾವುದೇ ಅನುದಾನವನ್ನು ನೀಡುತ್ತಿಲ್ಲ. ನಗರಸಭೆಯ ನಿಧಿಯಲ್ಲಿ ವಾರ್ಡ್ಗೆ 5 ಲಕ್ಷ ನೀಡುವ ಮೂಲಕ ಕಾಮಗಾರಿ ಮಾಡುವ ಯೋಜನೆಯಿದೆ ಎಂದರು.
ದೂಡಾ ಮಾಜಿ ಸದಸ್ಯ ಎಚ್. ನಿಜಗುಣ, ಕರವೇ ಮುಖಂಡರಾದ ಪ್ರೀತಮ್ ಬಾಬು ಮತ್ತು ರಮೇಶ್ ಮಾನೆ, ಪತ್ರಕರ್ತ ಎಚ್. ಸುಧಾಕರ್, ಕಾರ್ವಿುಕ ಮುಖಂಡ ಎಚ್.ಕೆ. ಕೊಟ್ರಪ್ಪ, ಬಿ. ಮುಗ್ದಮ್ ಮುಖಂಡ ತಿಪ್ಪೇಶಿ ಮಾತನಾಡಿದರು.
ಸದಸ್ಯರಾದ ಬಿ. ಅಲ್ತಾಫ್, ದಿನೇಶ್ ಬಾಬು, ದಾದಾಖಲಾಂದರ್, ಆಟೋ ಹನುಮಂತಪ್ಪ, ಸುಮಿತ್ರಮ್ಮ, ಶಹಜಾದ್ ಸನಾವುಲ್ಲಾ, ನಿಂಬಕ್ಕ ಚಂದಾಪುರ, ವಿವಿಧ ಸಂಘಟನೆಗಳ ಮುಖಂಡರು ಇದ್ದರು.