ಡಿಜಿಪಿ ಪ್ರವೀಣ್ ಸೂದ್‌ಗೆ ವಿಮುಕ್ತಿ; ಡಾ.ಅಲೋಕ್ ಮೋಹನ್‌ಗೆ ಡಿಜಿ-ಐಜಿಪಿ ಹೆಚ್ಚುವರಿ ಹೊಣೆ

ಬೆಂಗಳೂರು: ಕೇಂದ್ರ ತನಿಖಾ ದಳ(ಸಿಬಿಐ) ನಿರ್ದೇಶಕರಾಗಿ ನೇಮಕವಾಗಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಪ್ರವೀಣ್ ಸೂದ್‌ರನ್ನು ಹುದ್ದೆಯಿಂದ ವಿಮುಕ್ತಿ ಮಾಡಿ ಶನಿವಾರ ಸರ್ಕಾರ ಆದೇಶಿಸಿದೆ. ಇವರಿಂದ ತೆರವಾದ ಡಿಜಿ-ಐಜಿಪಿ ಹುದ್ದೆಯನ್ನು ಹಿರಿಯ ಡಿಜಿಪಿ ಡಾ. ಅಲೋಕ್ ಮೋಹನ್‌ಗೆ ಹೆಚ್ಚುವರಿಯಾಗಿ ವಹಿಸಿ ಸರ್ಕಾರ ಇದೇ ವೇಳೆ ಆದೇಶ ಹೊರಡಿಸಿದೆ. ಸಿಬಿಐನ ಹಾಲಿ ನಿರ್ದೇಶಕ ಸುಬೋದ್ ಕುಮಾರ್ ಜೈಸ್ವಾಲ್ ಅವರ ಅಧಿಕಾರ ಅವಧಿ ಮೇ 25ಕ್ಕೆ ಮುಕ್ತಾಯವಾಗಲಿದೆ. ನೂತನ ನಿರ್ದೇಶಕರ ಹುದ್ದೆಗೆ ಡಿಜಿ-ಐಜಿಪಿ ಪ್ರವೀಣ್ ಸೂದ್ ಅವರನ್ನು ನೇಮಕ ಮಾಡಿ … Continue reading ಡಿಜಿಪಿ ಪ್ರವೀಣ್ ಸೂದ್‌ಗೆ ವಿಮುಕ್ತಿ; ಡಾ.ಅಲೋಕ್ ಮೋಹನ್‌ಗೆ ಡಿಜಿ-ಐಜಿಪಿ ಹೆಚ್ಚುವರಿ ಹೊಣೆ