More

  ಗವಿಮಠಕ್ಕೆ ಭೇಟಿ ನೀಡಿದ ದೇಸಾಯಿ ಚಿತ್ರತಂಡ ; ಶ್ರೀಗಳ ಆಶೀರ್ವಾದ ಪಡೆದ ಪ್ರವೀಣ್​

  ವಿಜಯವಾಣಿ ಸುದ್ದಿಜಾಲ ಬೆಂಗಳೂರು:

  “ಲವ್​ 360′ ಖ್ಯಾತಿಯ ಡಾ. ಪ್ರವೀಣ್ ಕುಮಾರ್​ ನಾಯಕನಾಗಿ ನಟಿಸುತ್ತಿರುವ ಎರಡನೇ ಸಿನಿಮಾ “ದೇಸಾಯಿ’. ಚಿತ್ರವನ್ನು ನಾಗಿರೆಡ್ಡಿ ಭಡ ನಿರ್ದೇಶಿಸುತ್ತಿದ್ದು, ಮಹಾಂತೇಶ್​ ಚೊಳಚಗುಡ್ಡ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರವಿಣ್​ಗೆ ರಾಧ್ಯಾ ನಾಯಕಿಯಾಗಿದ್ದಾರೆ. ಇತ್ತೀಚೆಗಷ್ಟೆ ನಿರ್ಮಾಪಕ ಮಹಾಂತೇಶ್​ ಮತ್ತು ನಾಯಕ ಪ್ರವಿಣ್​, ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಸಂಸ್ಥಾನ ಮಠಕ್ಕೆ ಭೇಟಿ ನೀಡಿದ್ದರು.

  ಗವಿಮಠಕ್ಕೆ ಭೇಟಿ ನೀಡಿದ ದೇಸಾಯಿ ಚಿತ್ರತಂಡ ; ಶ್ರೀಗಳ ಆಶೀರ್ವಾದ ಪಡೆದ ಪ್ರವೀಣ್​

  ಮೊಬೈಲ್​ನಲ್ಲಿಯೇ “ದೇಸಾಯಿ’ ಚಿತ್ರದ ಟೀಸರ್​ ಮತ್ತು ಹಾಡನ್ನು ವೀಸಿದ ಶ್ರೀಗಳು, ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂತರ ಗದ್ದುಗೆಯ ದರ್ಶನ ಪಡೆದ ಚಿತ್ರತಂಡ ಮಠದಲ್ಲಿ ಪ್ರಸಾದ ಸೇವಿಸಿ, ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಕೊಪ್ಪಳದ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ತೋಟಪ್ಪ ಕಾಮನೂರು, ಬಸವರಾಜ್​ ಬುಡ್ಡನಗೌಡರ, ಶರಣಪ್ಪ ನಾವೋಜಿ, ಅಶೋಕ್​ ಲಾಗಲೋಟಿ, ನಿಂಗಣ್ಣ ಗೋಡಿ, ಸಂಗನಗೌಡ ಪಾಟೀಲ್​ ಜತೆಗಿದ್ದರು.

  ಗವಿಮಠಕ್ಕೆ ಭೇಟಿ ನೀಡಿದ ದೇಸಾಯಿ ಚಿತ್ರತಂಡ ; ಶ್ರೀಗಳ ಆಶೀರ್ವಾದ ಪಡೆದ ಪ್ರವೀಣ್​

  ಪ್ರವೀಣ್​, ರಾಧ್ಯ ಜತೆ “ಒರಟ’ ಪ್ರಶಾಂತ್​, ಚೆಲುವರಾಜ್​, ಹರಿಣಿ ಪ್ರಶಾಂತ್​ ನಟನ ಪ್ರಮುಖ ತಾರಾಗಣದಲ್ಲಿದ್ದಾರೆ. “ದೇಸಾಯಿ’ ಚಿತ್ರಕ್ಕೆ ಪಿಕೆಎಚ್​ ದಾಸ್​ ಛಾಯಾಗ್ರಹಣ, ಸಾಯಿ ಕಾರ್ತಿಕ್​ ಸಂಗೀತ, ದೀಪು ಎಸ್​. ಕುಮಾರ್​ ಸಂಕಲನವಿರಲಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts