ಬೈಂದೂರು: ಸಂಘ ಸಂಸ್ಥೆಗಳ ಕ್ರಿಯಾತ್ಮಕ ಚಟುವಟಿಕೆ ಊರಿನ ಅಭಿವೃದ್ಧಿಗೆ ಸಹಕಾರಿ. ಗಣೇಶೋತ್ಸವದ ಮೂಲಕ ಸಂಘಟನೆ ಜತೆಗೆ ನಿರಂತರ ಸಾಮಾಜಿಕ ಚಟುವಟಿಕೆ ನಡೆಸುತ್ತಿರುವುದು ಕರಾವಳಿ ಯುವಶಕ್ತಿಯ ಸಾಧನೆ ಎಂದು ಅಪೆಕ್ಸ್ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಮಂಗಳುಮನೆ ಮಾಚ ಬಿಲ್ಲವ ಹೇಳಿದರು.
ಶಿರೂರು ಕರಾವಳಿ ಯುವಶಕ್ತಿ ಸಭಾ ವೇದಿಕೆಯಲ್ಲಿ ನಡೆದ 26ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು.
ಅನ್ನದಾನದ ಸೇವಾಕರ್ತ ನಾಗಪ್ಪ ಬಿಲ್ಲವ ಜಟ್ಟಜ್ಜಿಮನೆ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಗೌರವಾಧ್ಯಕ್ಷ ಮಂಗಳು ಬಿಲ್ಲವ, ಮಾಜಿ ಗೌರವಾಧ್ಯಕ್ಷ ವಾಸು ಬಿಲ್ಲವ ತೆಂಕಮನೆ, ಯುವಶಕ್ತಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶಿರೂರು, ಉಪಾಧ್ಯಕ್ಷ ಸುರೇಶ್ ಮೊಗೇರ್, ಯುವಶಕ್ತಿ ಉತ್ಸವ ಸಮಿತಿ ಅಧ್ಯಕ್ಷ ಚಂದ್ರ ಮೊಗೇರ್, ಪೂರ್ವಾಧ್ಯಕ್ಷ ರವಿದಾಸ್ ಮೊಗೇರ್, ತಾಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಆಲಂದೂರು ಶಾಲಾ ಮುಖ್ಯಶಿಕ್ಷಕ ಮಾಧವ ಬಿಲ್ಲವ ಕಾಳನಮನೆ, ತಿಮ್ಮಪ್ಪ ಬಿಲ್ಲವ ದೇವರಹಿತ್ಲು, ಮಹಾದೇವ ಬಿಲ್ಲವ, ಅಣ್ಣಪ್ಪ ಮೊಗೇರ್, ಹಾಗೂ ಯುವಶಕ್ತಿ ಸರ್ವ ಸದಸ್ಯರು ಇದ್ದರು. ಯುವಶಕ್ತಿ ಕಾರ್ಯದರ್ಶಿ ಮಹೇಶ್ ಮೊಗೇರ್ ಸ್ವಾಗತಿಸಿ, ಮಹೇಂದ್ರ ಬಿಲ್ಲವ ಕಾರ್ಯಕ್ರಮ ನಿರ್ವಹಿಸಿದರು.