ಹುಬ್ಬಳ್ಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಶಿವಶಿಂಪಿ ಸಂಘದ ವತಿಯಿಂದ ದಾಜಿಬಾನಪೇಟನಲ್ಲಿರುವ ಸಂಘದ ಸಭಾಗೃಹದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಆ. 11ರಂದು ಸಂಜೆ 4ಕ್ಕೆ ಆಯೋಜಿಸಲಾಗಿದೆ.
ದಿ. ಗುರುಸಿದ್ದಪ್ಪ ನಾಗಪ್ಪ ಲಕ್ಕೀಮರ, ಜಯಶೀಲಾ ಎಸ್. ಲಕ್ಕೀಮರ ಇವರ ದತ್ತಿ ಶಿಕ್ಷಣ ನಿಧಿಯಿಂದ ಪುರಸ್ಕಾರ ನೀಡಲಾಗುವುದು.
ಕೆಸಿಸಿಐ ಮಾಜಿ ಉಪಾಧ್ಯಕ್ಷ ಅಶೋಕ ತೋಳನವರ, ಔಷಧ ವಿತರಕ ಶಂಭುಲಿಂಗಪ್ಪ ಯಾವಗಲ್ಲ ಅತಿಥಿಗಳಾಗಿ ಪಾಲ್ಗೊಳ್ಳುವರು. ಶಶಿಧರ ಕರವೀರಶೆಟ್ಟರ್ ಉಪನ್ಯಾಸ ನೀಡುವರು. ಸಂಘದ ಅಧ್ಯಕ್ಷ ಗಂಗಾಧರ ಗಂಜಿ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.