ಆಲ್ದೂರು ಗ್ರಾಮ ಪಂಚಾಯಿತಿಗೆ ಪ್ರತಿಭಾ ಅಧ್ಯಕ್ಷೆ

ಆಲ್ದೂರು: ಆಲ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆದಿದ್ದು ಅಧ್ಯಕ್ಷರಾಗಿ ಪ್ರತಿಭಾ ನವೀನ್ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನ ಬಿಸಿಎಂ ಬಿ ಮಹಿಳೆಗೆ ಮೀಸಲಾಗಿದ್ದು ಪ್ರತಿಭಾ ನವೀನ್ ಹಾಗೂ ನಗೀನಾ ನೂರ್ ನಾಮಪತ್ರ ಸಲ್ಲಿಸಿದ್ದರು. ಗೌಪ್ಯ ಮತದಾನ ಪ್ರಕ್ರಿಯೆಯಲ್ಲಿ ಪ್ರತೀಬಾ ನವೀನ್ 20 ಮತಗಳನ್ನು ಪಡೆದರೆ ನಗೀನಾನೂರ್ ಕೇವಲ 3 ಮತಗಳನ್ನು ಪಡೆದರು.

ಒಂದು ವರ್ಷದಿಂದ ಆಲ್ದೂರು ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಹಗ್ಗ ಜಗ್ಗಾಟ ನಡೆದಿದ್ದು ಪೂರ್ಣಿಮಾ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸದಸ್ಯರು ಅವರ ವಿರುದ್ಧ ಅವಿಶ್ವಾಸ ತಂದಿದ್ದು ಇದರ ವಿರುದ್ಧ. ಪೂರ್ಣಿಮಾ ಸುದಿನ್ ಹೈಕೋರ್ಟ್ ಮಟ್ಟಿಲೇರಿದ್ದರು. ಇದನ್ನು ಪ್ರಶ್ನಿಸಿ ಪ್ರತಿಭಾ ತಾವೂ ನ್ಯಾಯಾಲಯದ ಮೊರೆಹೋಗಿದ್ದರು. ಕೋರ್ಟ್ ಪೂರ್ಣಿಮಾ ಅವರ ಕೇಸ್ ವಜಾಮಾಡಿ ಪ್ರತಿಭಾ ಪರ ತೀರ್ಪು ನೀಡಿತ್ತು. ಇದರ ಅನ್ವಯದಂತೆ ಚುನಾವಣೆ ನಡೆದು ಅಧ್ಯಕ್ಷರಾಗಿ ಪ್ರತಿಭಾ ಆಯ್ಕೆಯಾದರು.

ಎಪಿಎಂಸಿ ಮಾಜಿ ಅಧ್ಯಕ್ಷ ಕವೀಶ್, ತಾಪಂ ಸದಸ್ಯೆ ಭವ್ಯಾ, ವಿಸ್​ಎಸ್​ಎಸ್​ಎನ್ ನಿರ್ದೇಶಕ ದಿಲೀಪ್ ಇದ್ದರು.

Leave a Reply

Your email address will not be published. Required fields are marked *