ಮಾಸ್ಕ್ ಧರಿಸದೇ ಬಂದ ಪ್ರತಾಪ್‌ಸಿಂಹಗೆ ವಿಧಾನಸೌಧದ ಬಾಗಿಲಲ್ಲೇ ತಡೆ!

ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಎಲ್ಲರೂ ಮಾಸ್ಕ್ ಧರಿಸಬೇಕೆಂದು ಸರ್ಕಾರವೇ ಕಡ್ಡಾಯ ಮಾಡಿದ್ದರೂ ಇಂದು ಮಾಸ್ಕ್ ಧರಿಸದೆ ವಿಧಾನಸೌಧಕ್ಕೆ ಬಂದ ಮೈಸೂರು-ಕೊಡಗು ಸಂಸದ ಪ್ರತಾಪ್‌ಸಿಂಹ ಅವರಿಗೆ ಭದ್ರತಾ ಸಿಬ್ಬಂದಿ ಪ್ರವೇಶ ನಿರಾಕರಿಸಿದ ಪ್ರಸಂಗ ನಡೆದಿದೆ. ಶುಕ್ರವಾರ ಬೆಳಗ್ಗೆ ವಿಧಾನಸೌಧದ ಪಶ್ಚಿಮ ಗೇಟ್‌ಗೆ ಆಗಮಿಸಿದ ಪ್ರತಾಪ್‌ಸಿಂಹ ಮಾಸ್ಕ್ ಧರಿಸದೇ ಇರುವುದನ್ನು ಅಲ್ಲಿದ್ದ ಆರೋಗ್ಯ ಸಿಬ್ಬಂದಿ ಮತ್ತು ಪೊಲೀಸರು ಗಮನಿಸಿದರು. ನೇರವಾಗಿ ಒಳಹೋಗುತ್ತಿದ್ದ ಅವರನ್ನು ಕೈ ಮಾಡಿ ನಿಲ್ಲಿಸಿದರು. ‘‘ಸಾರ್, ಮಾಸ್ಕ್ ಹಾಕಿಕೊಂಡೇ ಬರಬೇಕು’’ ಎಂದು ಸೂಚಿಸಿದರು. ಇದರಿಂದ ವಿಚಲಿತರಾಗದ ಪ್ರತಾಪ್‌ಸಿಂಹ, … Continue reading ಮಾಸ್ಕ್ ಧರಿಸದೇ ಬಂದ ಪ್ರತಾಪ್‌ಸಿಂಹಗೆ ವಿಧಾನಸೌಧದ ಬಾಗಿಲಲ್ಲೇ ತಡೆ!