ಯುಟಿ ಖಾದರ್​ ಚಪ್ಪಲಿಯಲ್ಲಿ ಯಾರಿಗೆ ಹೊಡೆಯಬೇಕು: ಸಂಸದ ಪ್ರತಾಪ್​ ಸಿಂಹ

ಮೈಸೂರು: ಈ ಹಿಂದೆ ನಾವು ಮಂಗಳೂರು ಚಲೋ ಮಾಡಿ, ಬಂದ್​ ಮಾಡಲು ಮುಂದಾದಾಗ ಸಚಿವ ಯು.ಟಿ.ಖಾದರ್​, ಬಂದ್​ ಮಾಡುವವರನ್ನು ಚಪ್ಪಲಿಯಲ್ಲಿ ಹೊಡೆಯಬೇಕು ಎಂದಿದ್ದರು. ಈಗ ಅವರ ಚಪ್ಪಲಿಯನ್ನು ಎಲ್ಲಿ ಇಟ್ಟುಕೊಂಡಿದ್ದಾರೆ ಎಂದು ಸಂಸದ ಪ್ರತಾಪ್​ ಸಿಂಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇಂಧನ ಬೆಲೆ ಏರಿಕೆ ಕುರಿತು ದೇಶಾದ್ಯಂತ ಭಾರತ್​ ಬಂದ್​ ಆಗಿರುವ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಯು.ಟಿ.ಖಾದರ್ ಅವರು ಚಪ್ಪಲಿಯನ್ನು ಎಲ್ಲಿ ಇಟ್ಟುಕೊಂಡಿದ್ದಾರೆ. ಆ ಚಪ್ಪಲಿಯಲ್ಲಿ ನಾವು ಯಾರಿಗೆ ಹೊಡೆಯಬೇಕು ಎಂದು ಪ್ರಶ್ನಿಸಿದ್ದಾರೆ.

ದುರುದ್ದೇಶಪೂರ್ವಕವಾಗಿ ಶಾಲೆಗಳಿಗೆ ರಜೆ ಘೋಷಿಸಿ, ಬಸ್​​ಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ. ಎಚ್.​ಡಿ.ಕೆ. ಸಿಎಂ ಆಗಲು ಕಾಂಗ್ರೆಸ್ ಕಾರಣ. ಕಾಂಗ್ರೆಸ್ ಋಣ ತೀರಿಸಲು ಸಿಎಂ ಬಂದ್‌ಗೆ ಬೆಂಬಲ ನೀಡಿದ್ದಾರೆ ಎಂದರು.

ಸರ್ಕಾರಿ ಪ್ರಾಯೋಜಿತ
ಕುಮಾರಸ್ವಾಮಿ ಅವರು ಯಾರನ್ನು ಪುಣ್ಯಾತ್ಮ ಅಂದಿದ್ದರೋ, ಆ ಪುಣ್ಯಾತ್ಮ ರಾಹುಲ್ ಗಾಂಧಿ ಅವರ ಋಣ ತೀರಿಸುವ ಸಲುವಾಗಿ ಬಂದ್‌ಗೆ ಬೆಂಬಲ ಕೊಟ್ಟಿದ್ದಾರೆ. ಜಿಲ್ಲಾಧಿಕಾರಿಗಳ ಮೂಲಕ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿ, ಕೆ‌ಎಸ್‌ಆರ್‌ಟಿಸಿ ಬಸ್‌ಗಳನ್ನು ಮಧ್ಯಾಹ್ನದವರೆಗೆ ತೆಗೆಯದಂತೆ ಸೂಚನೆ ನೀಡಲಾಗಿದೆ. ಇದೊಂದು ಸರ್ಕಾರಿ ಪ್ರಾಯೋಜಿತ ಬಂದ್‌ ಎಂದು ಆರೋಪಿಸಿದ್ದಾರೆ. (ದಿಗ್ವಿಜಯ ನ್ಯೂಸ್​)