Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಪ್ರಶ್ನೆ ಪರಿಹಾರ

Thursday, 14.06.2018, 3:03 AM       No Comments

ನನ್ನ ಗೆಳೆಯರೊಬ್ಬರ ಮಗಳ ಜನ್ಮಕುಂಡಲಿ ಕಳಿಸಿದ್ದೇನೆ. ಎಂ.ಬಿ.ಬಿ.ಎಸ್. ಓದುತ್ತ ಎಲ್ಲ ಚೆನ್ನಾಗಿಯೇ ಇದ್ದ ಅವಳು ಈಗ ಒಬ್ಬ ಸಾಮಾನ್ಯ ಹುಡುಗನನ್ನು ಮದುವೆಯಾಗುತ್ತೇನೆಂದು ಹಠ ಹಿಡಿದಿದ್ದಾಳೆ. ಆತನಿಗೆ ಕೆಲಸವೂ ಇಲ್ಲ. ಜತೆಗೆ ಕ್ರಿಮಿನಲ್ ಆರೋಪಗಳೂ ಇರುವ ಹುಡುಗ. ಏನು ಮಾಡಲು ಸಾಧ್ಯ. ಇವಳ ಪ್ರಾರಬ್ಧ ಬದಲಿಸಬಹುದೇ?

| ಅಂದಾನಯ್ಯ ಜಿ.ಆರ್. ಹಳಿಯಾಳ

ಲೋಕೋ ಭಿನ್ನ ರುಚಿಃ ಎಂಬ ಮಾತು ನೀವು ಕೇಳಿಸಿಕೊಂಡಿರುತ್ತೀರಿ. ಸಂಸ್ಕೃತದಲ್ಲಿ ಒಂದು ಮಾತಿದೆ. ಯಸ್ಯ ನಾಸ್ತಿ ಸ್ವಯಂ ಪ್ರಜ್ಞಾ ಶಾಸ್ತ್ರಂ ತಸ್ಯ ಕರೋತಿ ಕಿಂ | ಲೋಚನಾಭ್ಯಾಂ ವಿಹೀನಸ್ಯ ದರ್ಪಣ ಕಿಂ ಕರಿಷ್ಯತಿ ||

(ಸ್ವಂತ ಜ್ಞಾನವಿಲ್ಲದಿರುವಾಗ ಶಾಸ್ತ್ರದಿಂದ ಉಪಯೋಗವಿಲ್ಲ. ಕಣ್ಣು ಕಾಣದಿರುವ ವ್ಯಕ್ತಿಗೆ ಕನ್ನಡಿಯಿಂದ ಏನು ಉಪಯೋಗ?) ಹೀಗಿರುವಾಗ; ಎಂ.ಬಿ.ಬಿ.ಎಸ್. ಓದುತ್ತಿದ್ದಾಳೆ, ಬಹುಶಃ ಕ್ರಿಮಿನಲ್ ಕೂಡ ಆಗಿರುವ ಹುಡುಗನ ಜತೆ ಸ್ನೇಹ ಎಂದರೆ ನೋವಿನ ವಿಷಯ. (ಕುಂಡಲಿಯಲ್ಲಿ ಪ್ರಾರಬ್ಧ ಹರಳುಗಟ್ಟಿರುವಾಗ, ಕುಜ ಹಾಗೂ ಶನೈಶ್ಚರರು ಬಾಳಸಂಗಾತಿಯ ಮನೆಯ ಸಂಪನ್ನತೆಯನ್ನು ಹಾಳು ಮಾಡಿದ್ದಾರೆ.) ಅರಿಶಿಣ, ಕುಂಕುಮ, ಅಕ್ಷತೆ ಬೆರೆಸಿ ಶ್ರೀದೇವಿ ಬಳಗಾಮುಖಿಗೆ ಏರಿಸಿ ದಿನವೂ ಆರಾಧಿಸಲಿ. ಕ್ರೂರಿಯಾದ ಕುಜನ ಹಿಡಿತದಿಂದ ಶನೈಶ್ಚರ ಪಾರಾಗಿ ಸುಹಾಸಕರ ದಿಕ್ಕು ಗೋಚರಿಸಲು ಸಾಧ್ಯ.

ನನ್ನ ಮಗ ಜರ್ನಲಿಸಂ ಓದಿ, ವಿದೇಶದಲ್ಲೂ ಬಹು ಮುಖ್ಯವಾದ ಕೆಲವು ವರ್ಕ್​ಶಾಪ್​ಗಳಲ್ಲಿ ಭಾಗವಹಿಸಿ, ಅಡ್ವಾನ್ಸ್ ್ಡ ಜರ್ನಲಿಸಂ ಡಿಪ್ಲೊಮಾದಲ್ಲಿ ಚಿನ್ನದ ಪದಕ ಗಳಿಸಿದ್ದಾನೆ. ಹೀಗಿರುವಾಗ ಒಬ್ಬಳು ಹುಡುಗಿಯ ಜತೆ ಸ್ನೇಹ ಒದಗಿತು. ಆಕೆ ಇಂಜಿನಿಯರ್. ಅವಳೇ ಮದುವೆಯ ಪ್ರಪೋಸ್ ಮಾಡಿದಳು. ಜಾತಿ ಬೇರಿದ್ದರೂ ನಾವೇನೂ ವಿರೋಧಿಸಲಿಲ್ಲ. ಈಗ ಆಕೆ ತಣ್ಣಗೆ ಬೇರೊಬ್ಬನ ಜತೆ ಮದುವೆಯಾಗಿ ಅಮೆರಿಕಕ್ಕೆ ಹಾರಿದ್ದಾಳೆ. ಇವನು ಮಂಕಾಗಿ ಸ್ವಾಸ್ಥ್ಯ ಕಳೆದುಕೊಂಡು ಮಾನಸಿಕವಾಗಿ ಅಸ್ತವ್ಯಸ್ತನಾಗಿದ್ದಾನೆ. ಪರಿಹಾರವಿದೆಯೇ?

| ಅನ್ನಪೂರ್ಣಾ ಕವಟಕ್​ಕರ್ ಮುಂಬಯಿ

ಆತಂಕದ ವಿಷಯವೇ ಆಗಿದೆ. ಬಹುಶಃ ಆಕೆ ತಪ್ಪಿದ್ದು ಒಳ್ಳೆಯದೇ ಆಯ್ತು. ಆದರೆ ಈಗ ನಿಮ್ಮ ಮಗನಿಗೆ ಅವನ ‘ತಾನು’ ಎಂಬ ಭಾವಕ್ಕೆ ಪೆಟ್ಟು ಬಿದ್ದಿದೆ. ಅವನ ಜಾತಕದಲ್ಲಿ ಬುಧಾದಿತ್ಯ ಯೋಗ ಗಟ್ಟಿಯಾಗಿದೆ. ರ್ತಾಕವಾಗಿ ಯೋಚಿಸಬಲ್ಲ ಚೈತನ್ಯ ಇಲ್ಲವೆಂದಲ್ಲ. ಈಗ ಸಾಡೇಸಾತಿ ಕಾಟವೂ, ರವಿಯ ಜತೆ ಸೇರಿದ ರಾಹುವಿನ ದಶಾಕಾಲ (ಇದು ಸದ್ಯದ ವರ್ತಮಾನವನ್ನು ವಿಷಮಯವಾಗಿ ಕಲಕುತ್ತಲೇ ಇರುತ್ತದೆ.) ನಡೆಯುತ್ತಿದೆ. ಪ್ರತಿದಿನ ರಾಹುಪೀಡಾ ನಿವಾರಣಾ ಸ್ತೋತ್ರ ಓದಲಿ. ಸಾಧ್ಯವಾದರೆ (ಕಡ್ಡಾಯವಾಗಿ ಓದಿದರೆ ಒಳಿತು) ಸೂರ್ಯಗ್ರಹ ಮೂಲ ಬೀಜಾಕ್ಷರ ಮಂತ್ರವನ್ನು 108 ಬಾರಿಗೆ ಕಡಿಮೆ ಆಗದಷ್ಟು ಸಾರಿ ಓದಲಿ. ಮತ್ತೆ ಸುಸ್ಥಿರವಾದುದನ್ನು ಕರುಣಿಸಲು ಗುರುದಶಾದಲ್ಲಿ ಗುರು ಬರುತ್ತಾನೆ. ಹನುಮಾನ್ ಚಾಲೀಸಾ ಓದಲಿ. ಅದೃಷ್ಟವನ್ನು ರೂಪಿಸಿಕೊಳ್ಳಬೇಕು. ಪ್ರಾರಬ್ಧವನ್ನು ಎದುರಿಸಬೇಕು. ತಿಳಿಸಿ ಹೇಳಿ.

ನಮ್ಮ ಯಜಮಾನರು ಒಳ್ಳೆಯ ಕೆಲಸದಲ್ಲಿದ್ದಾರೆ. ತಂದೆ-ತಾಯಿ ಒಪ್ಪಿದ ಮದುವೆಯಾದರೂ, ಮೂಲದಲ್ಲಿ ನಾವೇ ಪ್ರೀತಿಸಿ ತಂದೆ-ತಾಯಿಗಳ ಒಪ್ಪಿಗೆ ಪಡೆದು ಮದುವೆಯಾದೆವು. ಈಗ ಎರಡು ಮಕ್ಕಳು. ದುರ್ದೈವವೆಂದರೆ ಆಫೀಸಿನಲ್ಲಿಯೇ ಸಹೋದ್ಯೋಗಿಯ ಜತೆ ಇವರಿಗೀಗ ಆತ್ಮೀಯತೆಯ ನಂಟು. ‘ಅವಳೂ ಇರುತ್ತಾಳೆ ಏನೀಗ?’ ಎಂಬ ಉಡಾಫೆ. ವಶೀಕರಣ ಏನಾದರೂ ನಡೆದಿದೆಯೇ? ಏನು ಪರಿಹಾರ?

| ವಿಶಾಲಾಕ್ಷಿ ಅಲಕಾನಂದಮೂರ್ತಿ ಗೋರಖಪುರ

ಮೂಢನಂಬಿಕೆಯ ವಿರುದ್ಧ ಸಮಾಜ ಯುದ್ಧ ಸಾರಿದೆ. ಸರ್ಕಾರ ಮೂಢನಂಬಿಕೆಗಳ ವಿರುದ್ಧ ಮೂಢನಂಬಿಕೆ ತಡೆ ಕಾಯ್ದೆಗಾಗಿ ಮಾತು ಎತ್ತುತ್ತಲೇ ಇರುತ್ತದೆ. ಈ ನಿಟ್ಟಿನಲ್ಲಿ ಹಲವು ಹೆಜ್ಜೆಗಳನ್ನಿಟ್ಟಿದ್ದನ್ನು ಮಾಧ್ಯಮಗಳ ಮೂಲಕ ತಿಳಿಯುತ್ತಲೇ ಇದ್ದೇವೆ. ಹೀಗಿರುವಾಗ ವಶೀಕರಣ ನಡೆದಿದೆಯೆ ಎಂಬ ಪ್ರಶ್ನೆ ಕೇಳಿದ್ದೀರಿ. ರಾಹು ಘಾತಕನಾಗಿದ್ದಾನೆ. ದಾಸವಾಳದ ಹೂಗಳ ಮೂಲಕ ನಿರ್ವಿಘ್ನಕಾರಕನಾದ ಗಣಾಧ್ಯಕ್ಷ ಶ್ರೀ ಗಣಪತಿಯನ್ನು ಆರಾಧಿಸಿ. ಮುಂದಿನ ಏಳು ಶುಕ್ರವಾರಗಳಂದು – ಹಾಲಿನಲ್ಲಿ ನೆನೆಸಿದ ಔಡಲಬೀಜಗಳನ್ನು ಅರಿಶಿಣ, ಕುಂಕುಮ, ಅಕ್ಷತೆಗಳೊಂದಿಗೆ ಅರಳಿಮರದ ಎಲೆಯಲ್ಲಿರಿಸಿ; ಮನೆಯಿಂದ ದೂರದ ಮರವೊಂದರ ಬಳಿ ಇಟ್ಟು ಬನ್ನಿ. ಲಕ್ಷ್ಮೀನಾರಾಯಣಹೃದಯ ಮಂತ್ರಭಾಗ ಓದಿ. ಕ್ಷೇಮ.

ನನ್ನ ತಮ್ಮನ ಜಾತಕ ಕಳಿಸಿದ್ದೇನೆ. ಯಾಕೋ ಮದುವೆ ಆಗಲಿಲ್ಲ. ಒಬ್ಬ ಚೈನೀಸ್, ಒಬ್ಬಳು ಗಯಾನಾದ ಹುಡುಗಿ ಸ್ನೇಹ ತೋರಿದರು. ಕೆಲವು ದಿನಗಳಲ್ಲಿ ಹೊಂದಾಣಿಕೆಯ ತೊಂದರೆ ಬಂದು ಮದುವೆಯ ವಿಚಾರ ಅರ್ಧಕ್ಕೆ ನಿಂತುಹೋದವು. ಈಗ ಒಬ್ಬಳು ಸ್ಕಾಟಿಷ್ ಗೆಳತಿಯ ಜತೆ ಲಿವಿಂಗ್ ಟುಗೆದರ್. ಈ ಹುಡುಗಿ ಇವನನ್ನು ತುಂಬ ಹಚ್ಚಿಕೊಂಡಿದ್ದಾಳೆ. ಆದರೆ ಈಗ ನನ್ನ ತಮ್ಮನ ತೊಂದರೆ ಎಂದರೆ, ‘ಯಾರೋ ತನ್ನನ್ನು ಬೆಂಬತ್ತಿದ್ದಾರೆ. ಅವರು ನನ್ನನ್ನು ಕ್ರೂರವಾಗಿ ಮುಗಿಸಲು ಹೊರಟಿದ್ದಾರೆ. ಯಾತನಾಯುತ ಮರಣಕ್ಕಿಂತ ಯಾತನಾರಹಿತ ಮರಣಕ್ಕೆ ಶರಣಾಗುವುದೇ ಸೂಕ್ತ’ ಇತ್ಯಾದಿ ಅಪಲಾಪ ಶುರು ಹಚ್ಚಿದ್ದಾನೆ. ಗೆಳತಿ ಎಷ್ಟೇ ಧೈರ್ಯ ತುಂಬಿದರೂ ಕೇಳಿಸಿಕೊಳ್ಳುತ್ತಿಲ್ಲ. ಏನಿದು ಪ್ರಾರಬ್ಧ? ಪರಿಹಾರ ಸಾಧ್ಯವೇ?

| ನಿರ್ಮಲಾ ಜಗಪತಿ ಸಿಡ್ನಿ

ಮನುಷ್ಯನ ಗೋಳು ಹಲವು ಬಗೆಯದ್ದು. ಆತನಿಗೆ ಸ್ಕ್ರಿಝೊಫ್ರೀನಿಯಾ ಆವರಿಸಿದೆ. ಭಯಕ್ಕೆ ಮಿತಿ ಎಂಬುದಿಲ್ಲ. ಯಾರೋ ನನ್ನನ್ನು ತಮ್ಮ ಅಂಕೆಗೆ ತೆಗೆದುಕೊಳ್ಳುತ್ತಾರೆ. ಹಿಂಸಿಸುತ್ತಾರೆ. ಆಕಾಶವೇ ಕಳಚಿ ತಲೆಯ ಮೇಲೆ ಬೀಳಬಹುದು ಇತ್ಯಾದಿ ಇತ್ಯಾದಿ. ಇಲ್ಲಿನ ವಿಸ್ಮಯ ಎಂದರೆ, ಈ ಭೀತಿಯ ಅನಾರೋಗ್ಯ ಬಂದವರ ಜಾತಕ ಕುಂಡಲಿಯಲ್ಲಿ ಒಂದಿಲ್ಲೊಂದು ದುಷ್ಟಗ್ರಹಗಳ ಯಾದಿಯೇ (ಚಂದ್ರ, ಶನಿ, ರಾಹು, ಕೇತು, ಶನೈಶ್ಚರ, ಕುಜ ಇತ್ಯಾದಿಗಳ ತಪು್ಪ ಸಂಯೋಜನೆಯಿಂದಾಗಿ) ಈ ವೈಪರೀತ್ಯಗಳನ್ನು ಸೃಷ್ಟಿಸಿರುತ್ತವೆ. ಅನಾದಿಯಿಂದಲೂ ಭಾರತೀಯ ಜ್ಯೋತಿಷ್ಯವಿಜ್ಞಾನ ವಿಸ್ಮಯಕಾರಕ, ವಿಕೃತ, ಕ್ರೂರ, ಮನೋವೈಫಲ್ಯ, ಹುಚ್ಚು, ಅಪಸ್ಮಾರ, ಬಾಲಾರಿಷ್ಟ, ಅತಿಯಾದ ಚಟುವಟಿಕೆಗಳು (ಏಢಟಛ್ಟಿ ಅಠಿಜಿಡಛಿ) ಇತ್ಯಾದಿಗಳು ಬಹು ಮುಖ್ಯವಾಗಿ ರಾಹು, ಕುಜ, ಕೇತು, ಕ್ರೂರ ಕ್ಷೀಣ ಚಂದ್ರ, ಅಸಮತೋಲನ ಹೊಂದಿದ ರವಿ-ಬುಧರಿಂದ (ಮುಖ್ಯವಾಗಿ ದುಷ್ಟತನ) ಒದಗುತ್ತದೆ ಎಂಬುದನ್ನು ತಿಳಿಸಿದೆ. ಮುಖ್ಯವಾಗಿ ಲಕ್ಷ್ಮೀನರಸಿಂಹ ಕವಚ, ಚಂಡಿಕಾ ಸಹಸ್ರನಾಮಾವಳಿ ಓದಲಿ. ಭಯಪಟ್ಟು ಆತ್ಮಹತ್ಯೆಗೆ ಯೋಚಿಸುತ್ತಿರುವ ನಿಮ್ಮ ತಮ್ಮ ಹುಣ್ಣಿಮೆ, ಅಮಾವಾಸ್ಯೆಗಳಂದು ಗೆಳೆಯರ ಜತೆಗೇ ಇರಲಿ.

ನಮ್ಮದು ರೈತಾಪಿ ಜೀವನ. ನಮ್ಮ ತಂದೆಯವರು ಕೃಷಿಯ ಸಂದರ್ಭದಲ್ಲಿ ತಿಳಿಯದೆ ಒಂದು ನಾಗರಹಾವನ್ನು ಅಕಸ್ಮಾತ್ ಸಾಯಿಸಿಬಿಟ್ಟಿದ್ದರು. ಉದ್ದೇಶಪೂರ್ವಕವಾಗಿ ಅಲ್ಲ. ಆ ಘಟನೆ ನಡೆದಲ್ಲಿಂದ ನಮ್ಮ ಆದಾಯ ವೃದ್ಧಿಸಿದರೂ ಸರ್ಪಸುತ್ತು, ತೀರ ಹತ್ತಿರದ ಬಂಧುಗಳು ಅವಘಡದಲ್ಲಿ ಮೃತಪಟ್ಟಿದ್ದು, ನಮ್ಮದೇ ಕುಟುಂಬದಲ್ಲಿ ಜಾರಿಬಿದ್ದು, ವಾಹನ ಬಡಿದು ಮೂಳೆ ಮುರಿತ – ಹೀಗೆ ನೋವುಗಳ ಸರಮಾಲೆಯೇ ಆಗಿವೆ. ಇವು ನಾಗದೋಷದಿಂದಲೇ ಆಗುತ್ತಿವೆಯೇ? ನನ್ನ, ಪತ್ನಿಯ ಹಾಗೂ ಮಗನ ಜಾತಕ ಕಳಿಸಿದ್ದೇನೆ. ಪರಿಹಾರ ತಿಳಿಸಿ.

| ಸಣ್ಣಶಂಕರಪ್ಪ ಗುಳಗೋಳಣ್ಣ ಚಿಕ್ಕೋಡಿ

ಆದಾಯ ವೃದ್ಧಿ ಇದೆ. ಮಾನಸಿಕ ವಿಪ್ಲವ, ದೈಹಿಕ ತೊಂದರೆಗಳ ಕಾರಣದಿಂದ ನಿಮ್ಮ ಚಡಪಡಿಕೆಗೆ ಸರ್ಪದೋಷ, ನಾಗರ ಹತ್ಯೆ ಕಾರಣವೆ ಎಂಬುದು ಪ್ರಶ್ನೆ. ನೀವು ಮೂವರ ಜಾತಕದಲ್ಲಿಯೂ ಸರ್ಪದೋಷ ಕಂಡುಬರುತ್ತಿಲ್ಲ. ಒಂದು ಕೆಲಸ ಮಾಡಿ. ಪ್ರತಿ ಷಷ್ಠಿಯ ದಿನ ನಿಮಗೆ ಲಭ್ಯವಿದ್ದಲ್ಲಿ ಪಡವಲಕಾಯಿಯ ಉದ್ದಕ್ಕೂ ಹಸುವಿನ ಹಸಿ ಹಾಲನ್ನು ತುಸು ಲೇಪಿಸಿ; ಹಿಂದಿನ ರಾತ್ರಿ ನೆನೆಸಿಟ್ಟ ಕಡಲೆಕಾಳಿಗೆ ಬೆಲ್ಲ ಸೇರಿಸಿ ಹಸುವಿಗೆ ಕೊಡಿ. ಮುಂದಿನ 27 ಷಷ್ಠಿಯ ದಿನಗಳಂದು ಇದು ನಡೆಯಲಿ. ನಿಮ್ಮ ಮನೆಯಲ್ಲಿನ ಸರ್ಪಬಾಧೆಗೆ ತಡೆ ತರುವಲ್ಲಿ ಇದು ಸಹಕಾರಿಯಾಗುತ್ತದೆ. ರಾಹುಕವಚವನ್ನು ನೀವು ಓದಿ. ಪ್ರತಿದಿನ ಸ್ನಾನಾನಂತರ ಮನೆಯಲ್ಲಿನ ಶಿವಲಿಂಗ, ನಾಗ, ವಿಷ್ಣು, ತಪ್ಪಿದರೆ ಗಣೇಶನ ಮೂರ್ತಿ ಇದ್ದರೂ ಸರಿ, ಬಿಳಿ ಹೂಗಳನ್ನು ಏರಿಸಿ ಆರಾಧಿಸಿ. ಏಳು ಬಾರಿ ರಾಹುಪೀಡಾ ನಿವಾರಣಾ ಸ್ತೋತ್ರ ಓದಿ.

(ಲೇಖಕರು ಕಥೆಗಾರರು ಮತ್ತು ಜ್ಯೋತಿಷ ವಿಜ್ಞಾನ ಸಂಶೋಧಕರು)

Leave a Reply

Your email address will not be published. Required fields are marked *

Back To Top