ಕಿಡ್ನಾಪ್​ ಕೇಸ್​ಗೆ ಟ್ವಿಸ್ಟ್​: ಟೆಕ್ಕಿ ಪ್ರಸನ್ನ ಆಧ್ಯಾತ್ಮದ ಕಡೆ ವಾಲಿದ್ರಾ?

ಬೆಂಗಳೂರು: ಟೆಕ್ಕಿ ಅಜಿತಾಬ್​ ನಾಪತ್ತೆಯಾಗಿದ್ದ ಮಾದರಿಯಲ್ಲೇ ಇತ್ತೀಚೆಗೆ ಬನಶಂಕರಿಯಿಂದ ನಾಪತ್ತೆಯಾಗಿದ್ದ ಟೆಕ್ಕಿ ಪ್ರಸನ್ನ ರಾಘವೇಂದ್ರ ಅವರ ಕೇಸ್​ಗೆ ಟ್ವಿಸ್ಟ್​ ಸಿಕ್ಕಿದೆ. ಅವರು ಆಧ್ಯಾತ್ಮದ ಹಾದಿ ತುಳಿದಿರುವ ಕುರಿತು ಶಂಕೆ ವ್ಯಕ್ತವಾಗಿದೆ.

ಲಂಡನ್​ನಿಂದ ಬಂದ ಮೇಲೆ ಪ್ರಸನ್ನ ಅವರು ಆಧ್ಯಾತ್ಮದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದರು. ಅವರು ಸ್ವಂತ ವ್ಯಾಪಾರ ಮಾಡಿ ಕೈ ಸುಟ್ಟುಕೊಂಡಿದ್ದರು. ಇದರಿಂದಾಗಿ ಮಾನಸಿಕವಾಗಿ ಕುಗ್ಗಿದ್ದರು. ಜತೆಗೆ ಕಳೆದ 6 ತಿಂಗಳ ಹಿಂದೆ ಅವರ ಒಂದು ಕಣ್ಣು ಕಾಣಿಸುತ್ತಿರಲಿಲ್ಲ. ಚಿಕಿತ್ಸೆ ಬಳಿಕ ಅವರು ಮೊದಲಿನಂತಾಗಿದ್ದರು. ಆದರೆ ಪ್ರಸನ್ನ ಅವರು ದೇವ ಅನುಗ್ರಹದಿಂದಲೇ ಕಣ್ಣು ಬಂದಿದೆ ಎಂದು ನಂಬಿದ್ದರು. ಇದೇ ಕಾಣದಿಂದಾಗಿಯೇ ಅವರು ಯಾವುದಾದರೂ ಆಶ್ರಮ ಸೇರಿರುವ ಶಂಕೆ ಇದೆ ಎಂದು ಬನಶಂಕರಿ ಠಾಣೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪೂರಕ ಎಂಬಂತೆ ಪ್ರಸನ್ನ ಅವರು ಆಧ್ಯಾತ್ಮದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡಿರುವ ವಿಡಿಯೋ ದಿಗ್ವಿಜಯ ನ್ಯೂಸ್​ಗೆ ಲಭ್ಯವಾಗಿದೆ.

ಪದ್ಮನಾಭನಗರದ ಪ್ರಸನ್ನ ಅವರು ನ. 9 ರಂದು ರಾತ್ರಿ 8 ಗಂಟೆಗೆ ಲಕ್ಷ್ಮೀಕಾಂತ ಉದ್ಯಾನಕ್ಕೆ ವಾಯುವಿಹಾರಕ್ಕೆ ತೆರಳಿದ್ದರು. ರಾತ್ರಿ 10 ಗಂಟೆಯಾದರೂ ಅವರು ಮರಳಿರಲಿಲ್ಲ. ಆ ನಂತರ ಅವರ ಮೊಬೈಲ್​ನಿಂದ ಪತ್ನಿ ಫೋನ್​ಗೆ ನಿಮ್ಮ ಯಜಮಾನರು ನಮ್ಮ ಬಳಿ ಇರುತ್ತಾರೆ. ನಾಳೆ ನಿಮ್ಮ ಜತೆ ಮಾತನಾಡುತ್ತೇವೆ. ಪೊಲೀಸರ ಬಳಿ ಹೋಗಬೇಡಿ ಎಂದು ಹಿಂದಿಯಲ್ಲಿ ಸಂದೇಶ ಬಂದಿತ್ತು.

Leave a Reply

Your email address will not be published. Required fields are marked *