20 C
Bengaluru
Saturday, January 18, 2020

ವಿಷಾಹಾರ, ಇನ್ನೂ 29 ಜನ ಗಂಭೀರ

Latest News

ತಲೆಯಲ್ಲಿ ಮೂರು, ಮುಖಕ್ಕೆ ಒಂದು ಬುಲೆಟ್​ ಹೊಕ್ಕಿ ಗಾಯಗೊಂಡರೂ 7 ಕಿ.ಮೀ. ಚಲಿಸಿ ದೂರು ದಾಖಲಿಸಿದ ಮಹಿಳೆ!

ಚಂಡೀಗಢ: ತಲೆಯಲ್ಲಿ ಮೂರು ಹಾಗೂ ಮುಖಕ್ಕೆ ಒಂದು ಬುಲೆಟ್​ ಹೊಕ್ಕು ಗಾಯಗೊಂಡರೂ ಸುಮಾರು 7 ಕಿ.ಮೀ. ಚಲಿಸಿ ಮಹಿಳೆಯೊಬ್ಬಳು ಜಮೀನು ಕಸಿದ ಪ್ರಕರಣದಡಿಯಲ್ಲಿ...

ಮನೆಗೆ ಮರಳುವಾಗ ನಾಪತ್ತೆಯಾಗಿದ್ದ ಭಾರತೀಯ ಮೂಲದ ಮಹಿಳೆ ತನ್ನ ಕಾರಿನ ಟ್ರಂಕ್​ನಲ್ಲೇ ಶವವಾಗಿ ಪತ್ತೆ

ವಾಷಿಂಗ್ಟನ್​: ಕಳೆದ ತಿಂಗಳು ಮನೆಗೆ ಮರಳುತ್ತಿದ್ದವಳು ನಾಪತ್ತೆಯಾಗಿದ್ದಾಳೆ ಎಂದು ಕುಟುಂಬದವರು ದೂರು ದಾಖಲಿಸಿದ್ದ ಭಾರತೀಯ ಮೂಲದ ಅಮೆರಿಕ ಮಹಿಳೆ ತನ್ನ ಕಾರಿನ ಟ್ರಂಕ್​ನಲ್ಲಿ...

ಡಿ.14ರಿಂದ ತಲಕಾಡು ಪಂಚಲಿಂಗ ದರ್ಶನ

ತಲಕಾಡು: ಡಿಸೆಂಬರ್ 14ರಿಂದ ಹತ್ತು ದಿನಗಳ ಕಾಲ ತಲಕಾಡಿನಲ್ಲಿ ನಡೆಯಲಿರುವ ವಿಶ್ವಪ್ರಸಿದ್ಧ ಪಂಚಲಿಂಗ ದರ್ಶನ ಮಹೋತ್ಸವವನ್ನು ಅಚ್ಚುಕಟ್ಟಾಗಿ ನೆರವೇರಿಸಲು ಜಿಲ್ಲಾಡಳಿತ ವತಿಯಿಂದ ಅಗತ್ಯ...

ಕಿಡ್ನಿ ಕಸಿಗೆ ನೆರವು ನೀಡಲು ಯುವಕನ ಮನವಿ

ವಿಜಯವಾಣಿ ಸುದ್ದಿಜಾಲ ಮಂಡ್ಯ ಎರಡೂ ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿರುವ ಯುವಕ ನೆರವಿಗೆ ಮನವಿ ಮಾಡಿದ್ದಾನೆ.ತಾಲೂಕಿನ ಕೊತ್ತತ್ತಿ ಗ್ರಾಮದ ವಿನೋದ್‌ಕುಮಾರ್(28) ಎರಡೂ ಕಿಡ್ನಿ ವೈಫಲ್ಯದಿಂದ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ ಮಿಸ್​ ಮಾಡಿಕೊಂಡ್ರೆ ನಿಮಗೆ ನಷ್ಟ!

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ...
<< ಮೂವರು ಶಂಕಿತರು ಪೊಲೀಸ್ ವಶಕ್ಕೆ>>

ಮೈಸೂರು: ಸುಳ್ವಾಡಿ ಗ್ರಾಮದ ಕಿಚ್ಚುಗತ್ತಿ ಮಾರಮ್ಮ ದೇವಸ್ಥಾನದಲ್ಲಿ ವಿಷಪ್ರಸಾದ ಸೇವನೆಯಿಂದಾಗಿ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿರುವ 122 ಅಸ್ವಸ್ಥರ ಪೈಕಿ 29 ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದೆಡೆ ಪ್ರಸಾದದಲ್ಲಿ ವಿಷ ಬೆರೆಸಿರುವ ಶಂಕೆಯ ಮೇಲೆ ಪೊಲೀಸರು ಮತ್ತೆ ಮೂವರನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಗಂಭೀರ ಸ್ಥಿತಿಯಲ್ಲಿರುವವರ ಪೈಕಿ ಕೆಲವರು 24 ಗಂಟೆಗಳಲ್ಲಿ, ಮತ್ತೆ ಕೆಲವರು 48 ಗಂಟೆಗಳಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆ ಇದ್ದು, ಉಳಿದಂತೆ ಪೈಕಿ 93 ಜನರ ಆರೋಗ್ಯ ಸ್ಥಿರವಾಗಿದೆಯೆಂದು ವೈದ್ಯರು ತಿಳಿಸಿದ್ದಾರೆ.

ತೀವ್ರಗೊಂಡ ತನಿಖೆ: ಪ್ರಕರಣ ಸಂಬಂಧ ಪೊಲೀಸರು ಅನುಮಾನದ ಮೇರೆಗೆ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ಅರ್ಚಕ ಹಾಗೂ ಮತ್ತಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. 11 ಜನರ ಸಾವಿಗೆ ಕಾರಣರಾದವರನ್ನು ಪತ್ತೆ ಹಚ್ಚಲು ತನಿಖೆ ಚುರುಕುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ವೆಂದ್ರ ಕುಮಾರ್ ಮೀನಾ ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಶುಕ್ರ ವಾರ ಸುಳ್ವಾಡಿಯ ಚಿಣ್ಣಪ್ಪಿ, ಮಾದೇಶ್ ಎಂಬುವವರನ್ನು ವಶಕ್ಕೆ ಪಡೆಯಲಾಗಿತ್ತು.


ದುರಂತಕ್ಕೆ ದೇಗುಲ ಆದಾಯ ಕಾರಣವೇ?

| ಪ್ರಸಾದ್ ಲಕ್ಕೂರು

ಚಾಮರಾಜನಗರ: ಕಿಚ್ಚುಗುತ್ತಿ ಮಾರಮ್ಮ ದೇಗುಲದಲ್ಲಿ ಪ್ರಸಾದ ಸೇವಿಸಿ 11 ಜನರು ಸಾವಿಗೀಡಾಗಲು ಇತ್ತೀಚೆಗೆ ಆ ದೇಗುಲಕ್ಕೆ ಬರುತ್ತಿದ್ದ ಹೆಚ್ಚಿನ ಆದಾಯ ಕಾರಣವೇ ಎಂಬ ಚರ್ಚೆ ಪ್ರಾರಂಭವಾಗಿದೆ. ಗಳಿಕೆ ಮೇಲೆ 2 ಗುಂಪುಗಳು ಕಣ್ಣಿಟ್ಟಿದ್ದವು ಎಂದು ಹೇಳಲಾಗುತ್ತಿದೆ.

ಕೊಳ್ಳೇಗಾಲ ತಾಲೂಕಿನ ಸುಳ್ವಾಡಿ ಗ್ರಾಮದ ಒಂದು ಗುಂಪು ಮತ್ತು ಗ್ರಾಮದ ಆಸುಪಾಸಿನಲ್ಲಿರುವ ಬರಗೂರು, ಗುಂಡ್ರೆ, ಶಿಂಗಲ, ಕೊಂಗಾಡಿ ಗ್ರಾಮಗಳ ಒಂದು ಗುಂಪಿನ ನಡುವೆ ಮಾರಮ್ಮ ದೇವಾಲಯ ಒಡೆತನಕ್ಕಾಗಿ ಹಿಂದಿನಿಂದಲೂ ಮುಸುಕಿನ ಗುದ್ದಾಟ ನಡೆಯುತ್ತಲೇ ಬಂದಿದೆ.

ಸುಳ್ವಾಡಿ ಗ್ರಾಮದಲ್ಲಿರುವ ಬ್ರಹ್ಮೇಶ್ವರ ದೇವಾಲಯ ಬರಗೂರು, ಗುಂಡ್ರೆ ಗ್ರಾಮಸ್ಥರ ಒಡೆತನದಲ್ಲಿದ್ದು, ಈಗಲೂ ಅವರೇ ನಿರ್ವಹಿಸುತ್ತಿದ್ದಾರೆ. ಗ್ರಾಮದಿಂದ 1 ಕಿ.ಮೀ. ದೂರದಲ್ಲಿರುವ ಕಿಚ್ಚ್ಚುಗುತ್ತಿ ಮಾರಮ್ಮ ದೇಗುಲದ ಆಡಳಿತವೂ ಇವರ ಬಳಿಯೇ ಇತ್ತು. ಆದರೆ, ಸುಳ್ವಾಡಿಯ ದುಂಮಾದಪ್ಪ ಎಂಬುವರು ಕಿಚ್ಚುಗುತ್ತಿ ದೇಗುಲಕ್ಕೆ ಅರ್ಚಕರಾದ ಬಳಿಕ ಈ ಗುಂಪು ದೇಗುಲ ಚಟುವಟಿಕೆಯಿಂದ ದೂರ ಸರಿಯಿತು ಎನ್ನುತ್ತಾರೆ ಗ್ರಾಮಸ್ಥರು.

ದುಂಮಾದಪ್ಪ ನೇತೃತ್ವದಲ್ಲಿ ದೇವಸ್ಥಾನ ಚೆನ್ನಾಗಿ ನಿರ್ವಹಣೆಯಾಗುತ್ತಿತ್ತು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿನಿತ್ಯ ಪೂಜೆ, ಅಮಾವಾಸ್ಯೆ, ಪೌರ್ಣಿಮೆಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ಮತ್ತು ಮೇ ತಿಂಗಳಲ್ಲಿ ವಿಜೃಂಭಣೆಯಿಂದ ಜಾತ್ರೆ ನಡೆಸುತ್ತಿದ್ದರು. ಆದರೆ, ಅರ್ಚಕ ದುಂಮಾದಪ್ಪ 4 ವರ್ಷಗಳ ಹಿಂದೆ ನಿಧನರಾದ ಮೇಲೆ ದೇಗುಲ ಒಡೆತನಕ್ಕೆ 2 ಗುಂಪುಗಳ ನಡುವೆ ಜಗಳ ಆರಂಭವಾಗಿತ್ತು. ಗ್ರಾಮದ ಮುಖಂಡರು ಮಲೆಮಹದೇಶ್ವರ ಬೆಟ್ಟ ಸಾಲೂರು ಮಠದ ಗುರುಸ್ವಾಮೀಜಿ ಅವರ ಬಳಿ ಪರಿಹಾರ ನೀಡುವಂತೆ ಕೋರಿದ್ದರು. ಬಳಿಕ ಸಾಲೂರು ಮಠದ ಇಮ್ಮಡಿ ಮಹದೇವ ಸ್ವಾಮೀಜಿ ಅಧ್ಯಕ್ಷತೆಯಲ್ಲಿ 9 ಸದಸ್ಯರನ್ನೊಳಗೊಂಡ ಕಿಚ್ಚುಗುತ್ತಿ ಮಾರಮ್ಮ ದೇವಾಲಯ ಸೇವಾ ಟ್ರಸ್ಟ್ ಪ್ರಾರಂಭಿಸಲಾಗಿತ್ತು.

ದೇವಾಲಯದಲ್ಲಿ ಕುಡಿಯುವ ನೀರು, ವಸತಿ ಗೃಹ, ಅಡುಗೆ ಮನೆ, ಬಲಿಪೀಠ ಸೇರಿ ಹಲವು ಸೌಲಭ್ಯ ಕಲ್ಪಸಿದ್ದು, ಧಾರ್ವಿುಕ ಕಾರ್ಯಗಳೂ ಹೆಚ್ಚಳಗೊಂಡು ಆದಾಯ ಹೆಚ್ಚುತ್ತಾಹೋಯಿತು. ಇದರಿಂದ ಬರಗೂರು, ಗುಂಡ್ರೆ, ಶಿಂಗಲ, ಕೊಂಗಾಡಿ ಗ್ರಾಮಗಳ ಗುಂಪು ಮತ್ತೆ ದೇವಾಲಯ ಒಡೆತನ ಪಡೆಯಲು ಯತ್ನಿಸುತ್ತಿತ್ತು ಎಂದು ಸ್ಥಳೀಯರು ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಈ ತಿಕ್ಕಾಟವೇ ದುರಂತಕ್ಕೆ ಕಾರಣ ಎಂಬ ಶಂಕೆ ಮೂಡುತ್ತಿದೆ.

ಕಣ್ತಪ್ಪಿಸಿ ವಿಷ ಬೆರೆಸಿರುವ ಅನುಮಾನ

ದೇವಾಲಯದಲ್ಲಿ ಸುಳ್ವಾಡಿಯ ಪುಟ್ಟಣ್ಣ, ಪುಟ್ಟಸ್ವಾಮಿ, ಲೋಕೇಶ್ ಎಂಬವರು ಹಿಂದಿನಿಂದಲೂ ಅಡುಗೆ ಹಾಗೂ ಮಾರಮ್ಮ ದೇವಿಯ ಪ್ರಸಾದ ತಯಾರಿಸಿಕೊಂಡು ಬರುತ್ತಿದ್ದಾರೆ. ಇವರ ಕಣ್ಣು ತಪ್ಪಿಸಿ ಯಾರೋ ಪ್ರಸಾದಕ್ಕೆ ಕ್ರಿಮಿನಾಶಕ ಸೇರಿಸಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.

ವಿಷಯುಕ್ತ ಪ್ರಸಾದ ಸೇವಿಸಿ 11 ಜನರು ಮೃತಪಟ್ಟ ಪ್ರಕರಣ ಸಂಬಂಧ ದೇವಾಲಯದ ಒಡೆತನಕ್ಕಾಗಿ ಗುಂಪುಗಾರಿಕೆ ನಡೆದಿದೆಯೇ ಎನ್ನುವುದು ಸೇರಿ ಇತರ ಎಲ್ಲ ಆಯಾಮಗಳಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶೀಘ್ರ ಪತ್ತೆ ಹಚ್ಚುವಂತೆ ಎಸ್ಪಿಗೆ ಸೂಚಿಸಿದ್ದೇನೆ.

| ಬಿ.ಬಿ.ಕಾವೇರಿ, ಚಾಮರಾಜನಗರ ಜಿಲ್ಲಾಧಿಕಾರಿ

ಭಕ್ತಿಯ ಪರಾಕಾಷ್ಠೆ ಮುಳುವಾಯಿತೇ?

ಮೈಸೂರು: ದೇವರ ಪ್ರಸಾದ ತಿನ್ನಲು ಯೋಗ್ಯವಲ್ಲ ಎಂದು ಮನವರಿಕೆಯಾದರೂ ಸಾಕಷ್ಟು ಭಕ್ತರು ಪ್ರಸಾದವನ್ನು ದೇವಿಯ ಮೇಲಿನ ಭಕ್ತಿಗೆ ಸೇವಿಸಿದರು. ಭಕ್ತಿಯ ಪರಾಕಾಷ್ಠೆಯೇ ಹಲವು ಭಕ್ತರ ಸಾವು ನೋವಿಗೆ ಕಾರಣವಾಯಿತು. ಶುಕ್ರವಾರ ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಕಾರ್ಯ 8.50ಕ್ಕೆ ಮುಕ್ತಾಯವಾಗುತ್ತಿದ್ದಂತೆ ಪ್ರಸಾದ ವಿತರಣೆ ಪ್ರಾರಂಭವಾಯಿತು. ಸೇವನೆ ವೇಳೆ ಒಗರು ಸಹಿತ ಅಡ್ಡ ವಾಸನೆ ಬಂದರೂ ದೇವರ ಪ್ರಸಾದ ಎಸೆಯಬಾರದು ಎಂದು ಕಷ್ಟಪಟ್ಟು ಸಾಕಷ್ಟು ಜನ ಸೇವಿಸಿದ್ದಾರೆ. ಆದರೆ, ಕೆಲವರು ತಿನ್ನಲು ಸಾಧ್ಯವಾಗದೆ ಎಸೆದರು. ಪೂರ್ಣಪ್ರಮಾಣ ಹಾಗೂ ಅರೆಬರೆ ಸೇವಿಸಿದವರಲ್ಲಿ ಹೆಚ್ಚು ಪ್ರಾಣಹಾನಿಯಾಗಿದೆ ಎನ್ನಲಾಗಿದೆ.

ತಮಿಳುನಾಡಿನಲ್ಲಿರುವ ಓಂಶಕ್ತಿ ದೇವಸ್ಥಾನಕ್ಕೆ ಅಯ್ಯಪ್ಪ ಭಕ್ತರ ಮಾದರಿಯಲ್ಲಿ ಪ್ರತಿವರ್ಷ ಚಾಮರಾಜನಗರದ ಭಕ್ತರು ಮಾಲೆ ಧರಿಸಿ ತೆರಳುತ್ತಾರೆ. ಹೀಗೆ ತೆರಳುವ ಮೊದಲು ಈ ದೇಗುಲಕ್ಕೆ ಬರುವುದು ವಾಡಿಕೆ. ಮೊದಲ ತಂಡದಲ್ಲಿ 30 ಜನ ಬಂದು ಸೇವಿಸಿದ್ದಾರೆ. 10.15ಕ್ಕೆ ಬಂದ 2ನೇ ತಂಡದ ಕೆಲವರಿಗೆ ಆಹಾರ ಸಿಕ್ಕಿಲ್ಲವೆಂದು ಬೇಸರಿಕೊಂಡಿದ್ದರು. ಆದರೆ, ಸಿಗದಿದ್ದರಿಂದ ಮುಂದಿನ ಅನಾಹುತ ತಪ್ಪಿದಂತಾಗಿದೆ.

ಕಂದನ ಜತೆಗಿರುವ ಭಾಗ್ಯವಿಲ್ಲ

ವಿಷಯುಕ್ತ ಪ್ರಸಾದ ಸೇವಿಸಿ ಮೃತಪಟ್ಟವರಲ್ಲಿ ನಾಲ್ವರು ಬಿದರಹಳ್ಳಿ ಗ್ರಾಮದವರಾಗಿದ್ದಾರೆ. ಶಾಂತರಾಜು ವಿವಾಹವಾಗಿ 15 ವರ್ಷವಾದರೂ ಮಕ್ಕಳಿರಲಿಲ್ಲ. 3 ತಿಂಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಈ ಖುಷಿಯಲ್ಲಿ ಓಂ ಶಕ್ತಿ ಮಾಲಾಧಾರಿಯಾಗಿ ಶನಿವಾರ ಯಾತ್ರೆ ಹೋಗಬೇಕಿತ್ತು. ಆದರೆ, ಜೀವವನ್ನೇ ತ್ಯಜಿಸಬೇಕಾಯಿತು. ಬಿದರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 1ನೇ ತರಗತಿಯ ಪ್ರೀತಮ್ ಹುಟ್ಟುಹಬ್ಬ ಶುಕ್ರವಾರವಿತ್ತು. ಬೆಳಗ್ಗೆ ತಾಯಿ ದೇವಿಗೆ ಪೂಜೆ ಸಲ್ಲಿಸಿ ಪ್ರಸಾದ ಕೊಡಿಸಿದ್ದಳು. ಅಸ್ವಸ್ಥಗೊಂಡ ಆತನನ್ನು ಆಸ್ಪತ್ರೆಗೆ ಒಯ್ದರೂ ಮೃತಪಟ್ಟಿದ್ದಾನೆ. ಇನ್ನು ಕುಟುಂಬಕ್ಕೆ ಆಧಾರವಾಗಿದ್ದ ಮೃತ ಗೋಪಿಯಮ್ಮ ಅವರ ಪತಿ ಅಂಗವಿಕಲ. ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಈಗ ಕುಟುಂಬಕ್ಕೆ ಆಧಾರವೇ ಇಲ್ಲದಂತಾಗಿದೆ.

ಒಂದು ಕಿ.ಮೀ. ಹುಡುಕಾಟ

ಪ್ರಸಾದ ಸೇವಿಸಿ 11 ಜನರ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ದೇವಾಲಯದ ಸುತ್ತಲಿನ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಿತು. ಆದರೆ, ಯಾವುದೇ ಬಾಟಲ್ ಅಥವಾ ಇತರ ವಿಷಕಾರಿ ವಸ್ತುಗಳ ಡಬ್ಬಗಳು ಪತ್ತೆಯಾಗಿಲ್ಲ. ಹುಡುಕಾಟದ ವೇಳೆ ಇನ್ನಷ್ಟು ಸತ್ತ ಕಾಗೆಗಳು ಪತ್ತೆಯಾಗಿವೆ. ಅರಣ್ಯ ಮತ್ತು ಪಶುಪಾಲನೆ ಇಲಾಖೆ ಅಧಿಕಾರಿಗಳು ಕಾಗೆಗಳ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ.

ತಕ್ಷಣ ಆಹಾರ ಪರೀಕ್ಷೆಗಿಲ್ಲ ವ್ಯವಸ್ಥೆ!

ಇನ್ನು ಮುಂದೆ ಸಾರ್ವಜನಿಕವಾಗಿ ವಿತರಣೆಯಾಗುವ ಆಹಾರವನ್ನು ಮೊದಲೇ ಪರೀಕ್ಷಿಸುವ ವ್ಯವಸ್ಥೆ ಜಾರಿಗೊಳ್ಳಬೇಕೆನ್ನುವ ಕೂಗು ಎಲ್ಲೆಡೆ ಕೇಳಿಬಂದಿದೆ. ಆದರೆ, ರಾಜ್ಯದಲ್ಲಿ ಸಿಎಂ ಸೇರಿ ಗಣ್ಯರ ಆಹಾರ ಪರೀಕ್ಷೆಗೇ ಆರೋಗ್ಯ ಇಲಾಖೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲ! ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ದೇಶದ ವಿವಿಧೆಡೆ ಒಟ್ಟು 129 ಪ್ರಯೋಗಾಲಯಗಳನ್ನು ದೃಢೀಕರಿಸಿದ್ದು, ಆ ಪಟ್ಟಿಯಲ್ಲಿ ರಾಜ್ಯದ 13 ಲ್ಯಾಬ್​ಗಳಿವೆ. ಪ್ರಾಧಿಕಾರದ ಅಧಿಕಾರಿಗಳು ವಿವಿಧೆಡೆ ಸಂಗ್ರಹಿಸುವ ಸಿದ್ಧ ಆಹಾರ ಮಾದರಿಗಳನ್ನು ಪರೀಕ್ಷೆಗಾಗಿ ಈ ಲ್ಯಾಬ್​ಗಳಿಗೆ ಕಳುಹಿಸಿಕೊಟ್ಟರೂ ವರದಿ ಕೈ ಸೇರಲು ವಾರದಿಂದ 10 ದಿನ ಬೇಕು. ತಕ್ಷಣ ಪರೀಕ್ಷಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡರೆ ಸಂಭಾವ್ಯ ಅನಾಹುತ ತಪ್ಪಿಸಬಹುದು ಎಂಬ ಅಭಿಪ್ರಾಯಗಳು ಬರುತ್ತಿವೆ.

ಕಾಗೆ ಉಳಿಸಿತು ಹಲವರ ಪ್ರಾಣ

ಒಂದು ವೇಳೆ ದೇವಸ್ಥಾನಕ್ಕೆ ಕಾಗೆಗಳು ಆಹಾರ ಸೇವಿಸಲು ಬಾರದೆ ಇದ್ದಿದ್ದರೆ ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚುತಿತ್ತು ಎನ್ನಲಾಗಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ ಬೆಳಗ್ಗೆ 8.50ಕ್ಕೆ ಪ್ರಸಾದ ವಿತರಣೆ ಪ್ರಾರಂಭವಾಯಿತು. ಮೊದಲ ಎರಡು ಪಂಕ್ತಿಯಲ್ಲಿ ಆಹಾರ ಸೇವಿಸಿದ ಜನರು ಬೆಳಗ್ಗೆ 10.15 ರವರೆಗೂ ಚೆನ್ನಾಗಿಯೇ ಇದ್ದರು. ಕೆಲವೊಬ್ಬರಿಗೆ ಮಾತ್ರ ವಾಂತಿ ಕಾಣಿಸಿಕೊಳ್ಳುತಿತ್ತು. ಆದರೆ, ಹೊರಗೆ ಬಿಸಾಡಿದ್ದ ಎಂಜಲು ಪದಾರ್ಥಗಳನ್ನು ಸೇವಿಸಿದ ಕಾಗೆಗಳು ಒದ್ದಾಡುತ್ತಾ ಪ್ರಾಣ ಬಿಡುತ್ತಿರುವುದನ್ನು ಕಂಡ ದೇವಸ್ಥಾನ ಆಡಳಿತ ಮಂಡಳಿಯವರು ತಕ್ಷಣ ಮೈಕ್ ಮೂಲಕ ಎಲ್ಲರೂ ಆಸ್ಪತ್ರೆಗೆ ದಾಖಲಾಗುವಂತೆ ಮನವಿ ಮಾಡಿಕೊಂಡರು. ಹೀಗಾಗಿ ಸಾಕಷ್ಟು ಭಕ್ತರು ಆಸ್ಪತ್ರೆಗೆ ತೆರಳಿ ಪ್ರಾಣ ಉಳಿಸಿಕೊಂಡರು.

11 ಜನರ ಅಂತ್ಯಸಂಸ್ಕಾರ

ಹನೂರು: ಅವಘಡದಲ್ಲಿ ಮೃತಪಟ್ಟಿದ್ದ ಮಹಿಳೆ, ಮಕ್ಕಳು, ವಯಸ್ಕರು ಸೇರಿ 11 ಶವಗಳನ್ನು ಶನಿವಾರ ಅವರ ಸ್ವಗ್ರಾಮಗಳಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಸುತ್ತಮುತ್ತಲ ಗ್ರಾಮಸ್ಥರು ಕೂಡ ಶೋಕತಪ್ತರಾಗಿದ್ದರು.

ಉನ್ನತ ಮಟ್ಟದ ತನಿಖೆ ಅಗತ್ಯ

ಮೈಸೂರು: ಸುಳ್ವಾಡಿ ಗ್ರಾಮದ ಕಿಚ್ಚುಗತ್ತಿ ಮಾರಮ್ಮ ದೇವಸ್ಥಾನದಲ್ಲಿ ವಿಷಪ್ರಸಾದ ಸೇವನೆ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವ ಅವಶ್ಯಕತೆ ಇದ್ದು, ಈ ಕುರಿತು ಸಿಎಂ ಜತೆ ಮಾತುಕತೆ ನಡೆಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ನಗರದ ಕೆ.ಆರ್.ಆಸ್ಪತ್ರೆಗೆ ಶನಿವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೊಂದಿಗೆ ಭೇಟಿ ನೀಡಿ ಅಸ್ವಸ್ಥಗೊಂಡಿರುವ ಭಕ್ತರ ಆರೋಗ್ಯ ವಿಚಾರಿಸಿದರು.

ತಲಾ 1 ಲಕ್ಷ ರೂ.: ಮೃತರ ಕುಟುಂಬಕ್ಕೆ ಕಾಂಗ್ರೆಸ್ ತಲಾ ಒಂದು ಲಕ್ಷ ರೂ. ಪರಿಹಾರ ಘೊಷಿಸಿದೆ. ಈ ದುರಂತ ನೋವಿನ ಸಂಗತಿ. ಸರ್ಕಾರ ಈಗಾಗಲೇ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೊಷಿಸಿದೆ. ಕಾಂಗ್ರೆಸ್​ನಿಂದ ಪ್ರತ್ಯೇಕವಾಗಿ ಪರಿಹಾರ ನೀಡುತ್ತಿದ್ದೇವೆ ಎಂದು ದಿನೇಶ್ ತಿಳಿಸಿದರು.

ದಿನೇಶ್​ಗೆ ಮುಜುಗರ

ಸುಳ್ವಾಡಿ ಗ್ರಾಮದ ಅವಘಡದಿಂದ ಆಸ್ಪತ್ರೆ ಸೇರಿರುವವರ ಆರೋಗ್ಯ ವಿಚಾರಿಸಲು ಮೈಸೂರಿಗೆ ತೆರಳುತ್ತಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್​ಗೆ ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸನ್ಮಾನ ಮಾಡುವ ಮೂಲಕ ಮುಜುಗರ ಉಂಟುಮಾಡಿದರು. ಸನ್ಮಾನ ಬೇಡ್ರಪ್ಪ, ನಾನು ಸಾವಿನ ಮನೆಗೆ ಹೋಗುತ್ತಿದ್ದೇನೆ ಎಂದು ದಿನೇಶ್ ಎಷ್ಟೇ ಹೇಳಿದರೂ ಕೇಳದ ಕಾರ್ಯಕರ್ತರು ಜೈಕಾರ ಹಾಕಿ ಸನ್ಮಾನಿಸಿದರು. ಇದು ಮುಜುಗರಕ್ಕೆ ಕಾರಣವಾಯಿತು.

ತಾಯಿ ಜೀವ ಉಳಿಸಿದರು

ಮಹದೇಶ್ವರಬೆಟ್ಟದ ತಮ್ಮಡಗೆರೆ ನಿವಾಸಿ ರೇವಮ್ಮ ಅವರ ಇಬ್ಬರು ಮಕ್ಕಳು ಒಗರು ಎನಿಸಿದರೂ ಪ್ರಸಾದ ತಿಂದರು. ಕೊನೆಗೆ ತಾಯಿ ಬಳಿ ಬಂದು, ‘ಪ್ರಸಾದ ತಿನ್ನಬೇಡ, ನಿನಗೆ ಪ್ರಸಾದ ತಿನ್ನಲು ಆಗೋದಿಲ್ಲ, ಅಷ್ಟೊಂದು ಒಗರಾಗಿದೆ’ ಎಂದು ಹೇಳಿ ಅಮ್ಮನ ಪ್ರಾಣ ಉಳಿಸಿದ್ದಾರೆ. ಅಷ್ಟರಲ್ಲಿ ಮಕ್ಕಳಿಗೆ ವಾಂತಿ ಕಾಣಿಸಿಕೊಂಡು, ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದು, ಗುಣಮುಖರಾಗುತ್ತಿದ್ದಾರೆ.

ನಾವು ವಿಷ ಹಾಕುವವರಲ್ಲ

ನಾವು ವಿಷ ಹಾಕುವ ಜನ ಅಲ್ಲ, ವಿಷ ಹಾಕಿದ್ರೆ ನಾನು ತಿನ್ನುತ್ತಿದ್ದೆನಾ? ನನ್ನ ಮಗಳನ್ನು ತಿನ್ನೋದಕ್ಕೆ ಬಿಡುತ್ತಿದ್ದೆನಾ?… ಇದು ಬಾಣಸಿಗ ಪುಟ್ಟಸ್ವಾಮಿ ಹೇಳಿಕೆ. ವಿಷ ಪ್ರಸಾದ ಸೇವಿಸಿ ಮೈಸೂರಿನ ನಗರದ ಕೆ.ಆರ್. ಆಸ್ಪತ್ರೆಯಲ್ಲಿರುವ ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ನಮ್ಮ ಮೇಲೆ ಯಾರೋ ಪೂಜಾರಿಗಳು ‘ನೀವೇ ವಿಷ ಹಾಕಿದ್ದೀರಾ’ ಅಂತಾ ಹೇಳಿದ್ದಾರೆ. ವಿಷ ಆಹಾರ ಸೇವಿಸಿ ನನ್ನ ಮಗಳು ಸತ್ತು ಹೋಗಿದ್ದಾಳೆ. ಎಲ್ಲರೂ ಬಂದು ನೀನೇ ಈ ರೀತಿ ಮಾಡಿದೆ ಎಂದು ಹೇಳುತ್ತಿದ್ದಾರೆ. ಆದರೆ, ನಾನು ಪ್ರಸಾದಕ್ಕೆ ವಿಷ ಹಾಕುವವನಲ್ಲ ಎಂದು ಸ್ಪಷ್ಟಪಡಿಸಿದರು.

ಮೊದಲಿನಿಂದಲೂ ಅಡುಗೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದೇನೆ. ಅಡುಗೆ ಮಾಡಿದ ನಂತರ ಸ್ವಲ್ಪ ವಾಸನೆ ಬರಲು ಪ್ರಾರಂಭವಾಯಿತು. ಅಡುಗೆಗೆ ಏನೋ ಪದಾರ್ಥ ಹೆಚ್ಚು ಕಡಿಮೆ ಆಗಿರಬೇಕೆಂದು ಅಂದುಕೊಂಡಿದ್ದೆ. ಆದರೆ, ನನಗೆ ವಿಷ ಹಾಕಿರುವ ವಿಚಾರ ತಿಳಿದಿಲ್ಲ. ನನ್ನ ಮೇಲೆ ಅನುಮಾನಪಡಬೇಡಿ ಎಂದರು.

ಪುತ್ರಿ ಸಾವು: ಅಡುಗೆ ತಯಾರಕರಾದ ಪುಟ್ಟಸ್ವಾಮಿ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಕೆ.ಆರ್.ಆಸ್ಪತ್ರೆಯಲ್ಲಿ ಸಾವು ಬದುಕಿನೊಡನೆ ಹೋರಾಡುತ್ತಿದ್ದರೆ, ಅವರ ಮಗಳು ಅನಿತಾ (12) ಶುಕ್ರವಾರ ಮೃತಪಟ್ಟಿದ್ದಾಳೆ.

ಪ್ರಸಾದಕ್ಕೇ ವಿಷ

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...