ಜಾಫರ್​ ಷರೀಫ್​ ನಿವಾಸಕ್ಕೆ ಭೇಟಿ ನೀಡಿದ ಪ್ರಣಬ್​ ಮುಖರ್ಜಿ: ಕುಟುಂಬದವರಿಗೆ ಸಾಂತ್ವನ

ಬೆಂಗಳೂರು: ಇತ್ತೀಚೆಗೆ ನಿಧನರಾದ ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್​ ಷರೀಫ್​ ನಿವಾಸಕ್ಕೆ ಭೇಟಿ ನೀಡಿದ ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಜಾಫರ್​ ಷರೀಫ್​ ನನಗೆ ತುಂಬ ಆತ್ಮೀಯರಾಗಿದ್ದರು. ಅವರು ತರ್ಜುಮೆ ಮಾಡಿಸಿದ ಡಾ. ಅಬ್ದುಲ್​ ಕಲಾಂ ಅವರ ಪುಸ್ತಕ ಲೋಕಾರ್ಪಣೆಗೆ ನಾನು ಬಂದಿದ್ದೆ. ದುರದೃಷ್ಟವಶಾತ್​ ಈಗ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವಂತಾಯಿತು ಎಂದು ಹೇಳಿದರು.

ಸುಮಾರು 10 ನಿಮಿಷಗಳ ಕಾಲ ಅಲ್ಲಿಯೇ ಇದ್ದ ಪ್ರಣಬ್​ ಮುಖರ್ಜಿ ಅವರು ಷರೀಫ್​ ಅವರ ಫೋಟೋಗೆ ಪುಷ್ಪನಮನ ಸಲ್ಲಿಸಿದರು. ರಾಜ್ಯಸಭಾ ಸದಸ್ಯ ರೆಹಮಾನ್ ಖಾನ್, ಸಚಿವರಾದ ಜಾರ್ಜ್‌, ಜಮೀರ್ ಅಹಮದ್ ಉಪಸ್ಥಿತರಿದ್ದರು.