ಟಿಪ್ಪು ಜಯಂತಿ ಉದ್ದೇಶವೇ ತಿಳಿಯುತ್ತಿಲ್ಲ, ಅದಕ್ಕೆ ನನ್ನ ಬೆಂಬಲವೂ ಇಲ್ಲ: ಪ್ರಮೋದಾ ದೇವಿ

ಬೆಳಗಾವಿ: ಟಿಪ್ಪುವಿನಂಥ ಹಲವು ರಾಜರು ನಮ್ಮಲ್ಲಿದ್ದರೂ, ಅವರೆಲ್ಲರನ್ನೂ ಬಿಟ್ಟು ಟಿಪ್ಪುವಿನ ಜನ್ಮ ಜಯಂತಿಯನ್ನೇ ಆಚರಿಸುತ್ತಿರುವ ಸರ್ಕಾರದ ಉದ್ದೇಶ ಗೊತ್ತಾಗುತ್ತಿಲ್ಲ. ಆಚರಣೆಗೆ ನನ್ನ ಬೆಂಬಲವೂ ಇಲ್ಲ ಎಂದು ಪ್ರಮೋದಾ ದೇವಿ ಅವರು ಹೇಳಿದ್ದಾರೆ.

ಯಾವ ಕಾರಣಕ್ಕೆ ಟಿಪ್ಪು ಒಬ್ಬರ ಜಯಂತಿ ಮಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಅವರು ನಮ್ಮ ಕುಟುಂಬಕ್ಕೆ ಬಹಳ ತೊಂದರೆ‌ ಕೊಟ್ಟಿದ್ದಾರೆ, ಅದರ ಬಗ್ಗೆ ಹೆಚ್ಚು ಹೇಳೊಕೆ ನನಗೆ ಇಷ್ಟವಿಲ್ಲ. ನಾನು ವೈಯಕ್ತಿಕವಾಗಿ ಟಿಪ್ಪು ಜಯಂತಿ ಆಚರಣೆಗೆ ಬೆಂಬಲಿಸುವುದಿಲ್ಲ ಎಂದೂ ಅವರು ಹೇಳಿದ್ದಾರೆ.

ಅಲ್ಲದೆ, ನಿಮಗೆ ಬೇಸರವಾಗುವುದಿದ್ದರೆ ಆಚರಣೆಯಿಂದ ದೂರವಿದ್ದು ಬಿಡಿ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಹೀಗಾಗಿ ನಾವು ಇದರಿಂದ ದೂರ ಉಳಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ.