More

  ‘ಲಾಫಿಂಗ್​ ಬುದ್ಧ’ನಾದ ಪ್ರಮೋದ್​ ಶೆಟ್ಟಿ; ಚಿತ್ರೀಕರಣ ಶುರು

  ಭದ್ರಾವತಿ: ಪ್ರಮೋದ್​ ಶೆಟ್ಟಿ ‘ಕಾಶಿ ಯಾತ್ರೆ’ ಎಂಬ ಚಿತ್ರದಲ್ಲಿ ಹೀರೋ ಆಗಿದ್ದು ಗೊತ್ತೇ ಇದೆ. ಈಗ ಅವರು ಸದ್ದಿಲ್ಲದೆ ಇನ್ನೊಂದು ಚಿತ್ರಕ್ಕೂ ನಾಯಕನಾಗಿದ್ದಾರೆ. ಅದೇ ‘ಲಾಫಿಂಗ್​ ಬುದ್ಧ’. ಈ ಚಿತ್ರದ ಮುಹೂರ್ತ ಇತ್ತೀಚೆಗೆ ಭದ್ರಾವತಿಯಲ್ಲಿ ಆಗಿದ್ದು, ಚಿತ್ರೀಕರಣ ಪ್ರಾರಂಭವಾಗಿದೆ.

  ಇದನ್ನೂ ಓದಿ: ಆಸ್ಕರ್​ನಲ್ಲಿ ಮಲಾಲಾ ಯೂಸುಫ್​ಝಾಯ್​ ಪ್ರತ್ಯಕ್ಷರಾಗಿದ್ದು ಯಾಕೆ?

  ‘ಲಾಫಿಂಗ್​ ಬುದ್ಧ’ ಚಿತ್ರದಲ್ಲಿ ಪ್ರಮೋದ್​ ಶೆಟ್ಟಿ ಪೊಲೀಸ್ ಪೇದೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆತ ತನ್ನ ಲವಲವಿಕೆಯಿಂದ ಸುತ್ತಲಿನ ಜನರಲ್ಲಿ ಹೇಗೆ ಸ್ಫೂರ್ತಿ ತುಂಬುತ್ತಾನೆ ಎಂಬುದು ಈ ಚಿತ್ರದ ಕಥೆಯಂತೆ ಈ ಹಿಂದೆ, ರಿಷಭ್​ ಶೆಟ್ಟಿ ನಿರ್ದೇಶನದ ‘ಹೀರೋ’ ಚಿತ್ರವನ್ನು ನಿರ್ದೇಶಿಸಿದ್ದ ಭರತ್​ ರಾಜ್​, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ.

  ಪ್ರಮೋದ್​ ಶೆಟ್ಟಿಗೆ ನಾಯಕಿಯಾಗಿ ತೇಜು ಬೆಳವಾಡಿ ಆಯ್ಕೆಯಾಗಿದ್ದರೆ. ಖ್ಯಾತ ನಟ ಪ್ರಕಾಶ್​ ಬೆಳವಾಡಿ ಅವರ ಮಗಳಾದ ತೇಜು ಬೆಳವಾಡಿ, ಇದಕ್ಕೂ ಮುನ್ನ ‘ಗಂಟುಮೂಟೆ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ಈಗ ಅವರು ‘ಲಾಫಿಂಗ್​ ಬುದ್ಧ’ ಚಿತ್ರದಲ್ಲಿ ಪ್ರಮೋದ್​ ಶೆಟ್ಟಿಗೆ ನಾಯಕಿಯಾಗಿದ್ದಾರೆ.

  ಇದನ್ನೂ ಓದಿ: ಆಸ್ಕರ್​ನಲ್ಲಿ ಮಲಾಲಾ ಯೂಸುಫ್​ಝಾಯ್​ ಪ್ರತ್ಯಕ್ಷರಾಗಿದ್ದು ಯಾಕೆ?

  ರಿಷಭ್ ಶೆಟ್ಟಿ, ತಮ್ಮ ರಿಷಭ್ ಶೆಟ್ಟಿ ಫಿಲಂಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವಿಷ್ಣುವಿಜಯ್​ ಸಂಗೀತ, ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ. ಭದ್ರಾವತಿಯಲ್ಲೇ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.

  ‘ಲಿಯೋ’ಗೆ ಸಂಜಯ್​ ದತ್​ ಎಂಟ್ರಿ; ಕಾಶ್ಮೀರದಲ್ಲಿ ಚಿತ್ರೀಕರಣ ಪ್ರಾರಂಭ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts