ಕೇಜ್ರಿವಾಲ್​ರನ್ನು ಭೇಟಿ ಮಾಡಿದ ಪ್ರಕಾಶ್​ ರೈ; ಮುಂದಿನ ರಾಜಕೀಯ ನಡೆ ಕುರಿತು ಚರ್ಚೆ

ನವದೆಹಲಿ: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಬಹುಭಾಷಾ ನಟ-ನಿರ್ದೇಶಕ ಪ್ರಕಾಶ್​ ರೈ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಪ್ರಕಾಶ್​ ರೈ ಗುರುವಾರ ದೆಹಲಿಯಲ್ಲಿ ಕೇಜ್ರಿವಾಲ್​ ಅವರನ್ನು ಭೇಟಿ ಮಾಡಿದರು. ನನ್ನ ರಾಜಕೀಯ ಪಯಣಕ್ಕೆ ಬೆಂಬಲ ಸೂಚಿಸಿ ಅಗತ್ಯ ನೆರವು ನೀಡುವುದಾಗಿ ತಿಳಿಸಿರುವ ಕೇಜ್ರಿವಾಲ್​ ಅವರಿಗೆ ಮೊದಲಿಗೆ ಧನ್ಯವಾದ ಅರ್ಪಿಸಿದೆ. ಆ ನಂತರ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಮತ್ತು ಯಾವೆಲ್ಲಾ ವಿಷಯಗಳ ಕುರಿತು ಹೆಚ್ಚಿನ ಗಮನ ಕೊಡಬೇಕು ಎಂದು ಚರ್ಚೆ ನಡೆಸಿದೆವು ಎಂದು ಪ್ರಕಾಶ್​ ರೈ ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಪ್ರಕಾಶ್​ ರೈ ರಾಜಕೀಯ ಪ್ರವೇಶವನ್ನು ಆಮ್​ ಆದ್ಮಿ ಪಕ್ಷದ ಅಧ್ಯಕ್ಷ ಕೇಜ್ರಿವಾಲ್​ ಸ್ವಾಗತಿಸಿದ್ದು, ಒಳ್ಳೆಯವರು ರಾಜಕೀಯಕ್ಕೆ ಬರಬೇಕು ಎಂದು ತಿಳಿಸಿದ್ದಾರೆ.

ದೆಹಲಿ ಉಪ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ನೇತೃತ್ವದಲ್ಲಿ ಕಳೆದ ಶುಕ್ರವಾರ ಬೆಂಗಳೂರಿನಲ್ಲಿ ನಡೆದಿದ್ದ ಆಪ್​ ಸಭೆಯಲ್ಲಿ ಪ್ರಕಾಶ್​ ರೈ ಪಾಲ್ಗೊಂಡಿದ್ದರು. ಸಭೆಯಲ್ಲಿ ಪ್ರಕಾಶ್​ ರೈಗೆ ಬೆಂಬಲ ನೀಡುವ ಕುರಿತು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಪ್ರಕಾಶ್​ ರೈ ಕಳೆದ ವಾರ ತಾವು ರಾಜಕೀಯಕ್ಕೆ ಪ್ರವೇಶಿಸುತ್ತಿರುವುದನ್ನು ಖಚಿತಪಡಿಸಿದ್ದರು. ಜತೆಗೆ ಚುನಾವಣೆಯಲ್ಲಿ ಜಯ ಸಾಧಿಸಿದರೆ ಸಂಸತ್ತಿನಲ್ಲೂ ‘ಜಸ್ಟ್​ ಆಸ್ಕಿಂಗ್​’ ಅಭಿಯಾನ ಮುಂದುವರಿಸಲಿದ್ದೇನೆ ಎಂದು ತಿಳಿಸಿದ್ದರು. (ಏಜೆನ್ಸೀಸ್​)

Met delhi CM @ArvindKejriwal thanked him and @AamAadmiParty for the support in my political journey. Discussed and…

Prakash Raj ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಜನವರಿ 10, 2019

One Reply to “ಕೇಜ್ರಿವಾಲ್​ರನ್ನು ಭೇಟಿ ಮಾಡಿದ ಪ್ರಕಾಶ್​ ರೈ; ಮುಂದಿನ ರಾಜಕೀಯ ನಡೆ ಕುರಿತು ಚರ್ಚೆ”

  1. A cheap man and will ensure his defeat here. A congress agent and supporter of Mulla Omar.

    Muthappa Rai

Comments are closed.