ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ಪ್ರಕಾಶ್​ ರೈ: ಯಾವ ಪಕ್ಷ, ಯಾವ ಕ್ಷೇತ್ರ ಗೊತ್ತಾ?

ಬೆಂಗಳೂರು: ದಕ್ಷಿಣ ಭಾರತದ ಹೆಸರಾಂತ ನಟ, ಕನ್ನಡಿಗ ಪ್ರಕಾಶ್​ ರೈ ಅವರು ರಾಜಕೀಯ ರಂಗ ಪ್ರವೇಶಿಲು ನಿರ್ಧರಿಸಿದ್ದಾರೆ. ಅದರಂತೆ ಅವರು ಈ ಬಾರಿಯ ಸಂಸತ್​ ಚುನಾವಣೆಗೆ ಸ್ಪರ್ಧೆ ಮಾಡಲು ತೀರ್ಮಾನ ಕೈಗೊಂಡಿದ್ದಾರೆ.

ಹೊಸ ವರ್ಷದ ದಿನ ತಮ್ಮ ಹೊಸ ನಿರ್ಧಾರವನ್ನು ಫೇಸ್​ಬುಕ್​ ಮೂಲಕ ಪ್ರಕಟಿಸಿರುವ ಅವರು ಹೀಗೆ ಬರೆದುಕೊಂಡಿದ್ದಾರೆ… ” ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಹೊಸ ಆರಂಭ… ಹೊಸ ಜವಾಬ್ದಾರಿ… ನಿಮ್ಮೆಲ್ಲರ ಸಹಕಾರದೊಂದಿಗೆ ನಾನು ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನ ಕೈಗೊಂಡಿದ್ದೇನೆ. ಈ ಬಾರಿ ಜನತಾ ಸರ್ಕಾರ. #JustAsking ಮತ್ತು ನಾಗರಿಕರ ಧ್ವನಿ ಸಂಸತ್​ನಲ್ಲೂ ಕೇಳಿಸಲಿದೆ,” ಎಂದು ಅವರು ಬರೆದುಕೊಂಡಿದ್ದಾರೆ.

ಇನ್ನು ಅವರು ಯಾವ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂಬುದರ ಬಗ್ಗೆಯೂ ಹೇಳಿದ್ದಾರೆ. ಚುನಾವಣೆಗೆ ತಾವು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ, ಕ್ಷೇತ್ರದ ಬಗ್ಗೆ ಅವರಿನ್ನೂ ಖಚಿತ ನಿರ್ಧಾರಕ್ಕೆ ಬಂದಂತಿಲ್ಲ. “ಕ್ಷೇತ್ರ ಯಾವುದು ಎಂಬುದನ್ನು ಮುಂಬರುವ ದಿನಗಳಲ್ಲಿ ತಿಳಿಸುತ್ತೇನೆ,” ಎಂದು ಅವರು ಬರೆದುಕೊಂಡಿದ್ದಾರೆ.

‪HAPPY NEW YEAR TO EVERYONE..a new beginning .. more responsibility.. with UR support I will be contesting in the coming…

Prakash Raj ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಡಿಸೆಂಬರ್ 31, 2018