ಬೆಂಗಳೂರು ಸೆಂಟ್ರಲ್​ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧೆ: ಟ್ವೀಟ್​ ಮೂಲಕ ಖಚಿತ ಪಡಿಸಿದ ಪ್ರಕಾಶ್​ ರೈ

ಬೆಂಗಳೂರು: ದಕ್ಷಿಣ ಭಾರತದ ಹೆಸರಾಂತ ನಟ, ಕನ್ನಡಿಗ ಪ್ರಕಾಶ್​ ರೈ ಮುಂಬರುವ ಲೋಕಸಭಾ ಚುನಾವಣೆಗೆ ಬೆಂಗಳೂರು ಸೆಂಟ್ರಲ್​ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.

ಈ ಹಿಂದೆ ಟ್ವೀಟ್​ ಮಾಡಿದ್ದ ಅವರು, ಲೋಕಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಯಾವ ಕ್ಷೇತ್ರವೆಂಬುದನ್ನು ಕೆಲವು ದಿನಗಳ ಬಳಿಕ ಹೇಳುತ್ತೇನೆ ಎಂದು ಹೇಳಿದ್ದರು.
ಈಗ ಮತ್ತೊಮ್ಮೆ ಈ ಬಗ್ಗೆ ಟ್ವೀಟ್​ ಮಾಡಿರುವ ಅವರು ಸ್ಪರ್ಧೆಯನ್ನು ಖಚಿತಗೊಳಿಸಿದ್ದಾರೆ. ಬೆಂಗಳೂರು ಸೆಂಟ್ರಲ್​ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ತಿಳಿಸಿದ್ದಾರೆ.

ಅಲ್ಲದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆಂದು ಹೇಳಿದಾಗ ನಿಮ್ಮೆಲ್ಲರ ಪ್ರೋತ್ಸಾಹ ನೋಡಿ ಖುಷಿಯಾಯಿತು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಾಹಿತಿಯನ್ನು ನಿಮ್ಮೊಂದಿಗೆ ಶೇರ್​ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

2 Replies to “ಬೆಂಗಳೂರು ಸೆಂಟ್ರಲ್​ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧೆ: ಟ್ವೀಟ್​ ಮೂಲಕ ಖಚಿತ ಪಡಿಸಿದ ಪ್ರಕಾಶ್​ ರೈ”

  1. One thing is clear u will not contest indepandantky.. You are pidi of raga. Otherwise u will be loosing deposit. U will be dobhis kuqtha. Na ghar ka na ghatka

  2. If the bengalure public really wise this type of Hindu opposite person should not elect. we are not proud of our culture, then other countries will mock.First media news, tv &extra should not entertain this type of rouges.

Comments are closed.