ಸೂಟ್​ಕೇಸ್ ಜತೆ ಬಂದವರಿಗೆ ಮಾತ್ರ JDSನಲ್ಲಿ ಮಣೆ: ಪ್ರಜ್ವಲ್​ ರೇವಣ್ಣ

ಮೈಸೂರು: ಮಾಜಿ ಪ್ರಧಾನಿ ಹೆಚ್​. ಡಿ ದೇವೆಗೌಡರ ಮೊಮ್ಮಗ ಹಾಗೂ ಹೆಚ್​.ಡಿ ರೇವಣ್ಣ ಅವರ ಮಗ ಪ್ರಜ್ವಲ್​ ರೇವಣ್ಣ ತಮ್ಮ ಪಕ್ಷದ ವಿರುದ್ಧವೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಹುಣಸೂರಿನಲ್ಲಿ ಸ್ಥಳೀಯ ಮುಖಂಡರು ಆಯೋಜಿಸಿದ್ದ ಸಭೆಯಲ್ಲಿ ಮಾತಿನಾಡಿದ ಅವರು, ‘ಸೂಟ್​ಕೇಸ್ ಜತೆ ಬಂದವರಿಗೆ ಮಾತ್ರ JDSನಲ್ಲಿ ಮಣೆ’ ಇದೆ ಹೊರತು ನಿಷ್ಠೆಯಿಂದ ದುಡಿದವರಿಗೆ ಜೆಡಿಎಸ್​ನಲ್ಲಿ ಮನ್ನಣೆ ಇಲ್ಲವೆಂದು ಹುಣಸೂರಿನಲ್ಲಿ JDS ಮುಖಂಡ ಪ್ರಜ್ವಲ್ ರೇವಣ್ಣ ತಮ್ಮ ಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ಪಕ್ಷ ಸಂಘಟನೆಗಾಗಿ ನಾನು ಹೋರಾಟ ಮಾಡುತ್ತಿದ್ದೇನೆ. ಈಗಲೂ ನಾನು ಹುಣಸೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಆದರೆ, ಪಕ್ಷದ ವರಿಷ್ಠರು ನನಗೆ ಆದ್ಯತೆ ನೀಡುತ್ತಿಲ್ಲ ಎಂದು ಪ್ರಜ್ವಲ್ ರೇವಣ್ಣ ತಮ್ಮ ಚಿಕ್ಕಪ್ಪ ಹೆಚ್​ಡಿ ಕುಮಾರಾಸ್ವಾಮಿ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *