ತಾತನ ಸೋಲಿನಿಂದ ನೊಂದು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ ಪ್ರಜ್ವಲ್​ ರೇವಣ್ಣ

ಹಾಸನ: ಜೆಡಿಎಸ್​ ವರಿಷ್ಠ ಎಚ್​.ಡಿ. ದೇವೇಗೌಡ ಅವರ ಸೋಲಿನಿಂದ ನನಗೆ ಬೇಸರವಾಗಿದೆ. ನಾನು ನನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಹಾಸನ ಕ್ಷೇತ್ರವನ್ನು ದೇವೇಗೌಡರಿಗೆ ಬಿಟ್ಟುಕೊಡಲು ನಿರ್ಧರಿಸಿದ್ದೇನೆ ಎಂದು ಸಂಸದ ಪ್ರಜ್ವಲ್​ ರೇವಣ್ಣ ತಿಳಿಸಿದ್ದಾರೆ.

ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಜ್ವಲ್​ ರೇವಣ್ಣ, ದೇವೇಗೌಡರು ರಾಜಕೀಯದಲ್ಲಿ ಆಸಕ್ತಿ ಕಳೆದುಕೊಳ್ಳಬಾರದು. ನನ್ನ ಈ ನಿರ್ಧಾರದಿಂದ ಜನತೆ ಬೇಸರ ಮಾಡಿಕೊಳ್ಳಬಾರದು. ನನ್ನ ಮನಸ್ಸಿನಲ್ಲಿದ್ದ ಹಾಗೆ ನಾನು ನಿರ್ಧಾರ ಮಾಡುತ್ತಿದ್ದೇನೆ. ಸಿಎಂ ಅವರನ್ನು ಭೇಟಿ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ದೇವೇಗೌಡರ ಮನವೊಲಿಸಿ ನಾನು ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿದರು.

ರಾತ್ರಿಯೇ ದೇವೇಗೌಡರಿಗೆ ಕರೆ ಮಾಡಿ ನನ್ನ ನಿರ್ಧಾರವನ್ನು ತಿಳಿಸಿದ್ದೇನೆ. ದೇವೇಗೌಡರನ್ನು ಹಾಸನದಲ್ಲಿ ಗೆಲ್ಲಿಸಿ ಅವರಿಗೆ ದೊಡ್ಡ ವಿಜಯೋತ್ಸವ ಕೊಡಲು ನಿರ್ಧರಿಸಿದ್ದೇನೆ. ಹೋರಾಟ ಮುಖ್ಯವೇ ಹೊರತು, ಗೆಲುವು ಮುಖ್ಯವಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಹಾಗೂ ರಾಜ್ಯದಲ್ಲಿ ಗೆದ್ದ ಎಲ್ಲರಿಗೂ ನಾನು ಶುಭ ಕೋರುತ್ತೇನೆ ಎಂದು ಪ್ರಜ್ವಲ್​ ತಿಳಿಸಿದರು.

ತುಮಕೂರಿನಿಂದ ಸ್ಪರ್ಧಿಸಿದ್ದ ಎಚ್​.ಡಿ. ದೇವೇಗೌಡರು 13,339 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಜಿ.ಎಸ್​. ಬಸವರಾಜು ವಿರುದ್ಧ ಸೋಲನುಭವಿಸಿದ್ದರು. ದೇವೇಗೌಡರು 5,82,788 ಮತ ಪಡೆದಿದ್ದರೆ, ಬಸವರಾಜು ಅವರು 5,96,127 ಮತ ಪಡೆದಿದ್ದರು.

ದೇವೇಗೌಡರು ಸ್ಪರ್ಧಿಸುತ್ತಿದ್ದ ಹಾಸನ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಪ್ರಜ್ವಲ್​ ರೇವಣ್ಣ ಬಿಜೆಪಿ ಅಭ್ಯರ್ಥಿ ಎ. ಮಂಜು ವಿರುದ್ಧ 1,41,324 ಮತಗಳ ಅಂತರದಿಂದ ಭರ್ಜರಿಯಾಗಿ ಜಯಗಳಿಸಿದ್ದರು. ಪ್ರಜ್ವಲ್​ 6,76,606 ಮತ ಪಡೆದಿದ್ದರೆ, ಎ. ಮಂಜು 5,35,282 ಮತ ಪಡೆದಿದ್ದರು.

ಕುಟುಂಬದ ಭವಿಷ್ಯಕ್ಕಾಗಿ ಮಾಜಿಯಾದ ಗೌಡರು: ದುಬಾರಿಯಾಯಿತು ಮಮಕಾರ

4 Replies to “ತಾತನ ಸೋಲಿನಿಂದ ನೊಂದು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ ಪ್ರಜ್ವಲ್​ ರೇವಣ್ಣ”

  1. Dont leave oppurtunity Prajaval, u will never get this chance, ur Sonriser dont Sacrifie, if u leave this, even ur Grandfather also never win this by election, JDS seat will lose (Mp seat (0)

  2. I don’t think Sree Devegowdaji will agree for this.But anyhow this appears to be a good and wise decision from Mr Prajwal

  3. These people are making joke of the democracy. Just for their family members, they are insulting the voters. Shame on these people and their family business… people should throw them out…

Leave a Reply

Your email address will not be published. Required fields are marked *