ಪ್ರಜ್ವಲ್ ರೇವಣ್ಣ ಅಫಿಡವಿಟ್​ಗೆ ಪ್ರಜಾಪ್ರತಿನಿಧಿ ಸಂಕಷ್ಟ?

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನಾಮಪತ್ರದ ಜತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಆಸ್ತಿ ವಿವರ ಮುಚ್ಚಿಟ್ಟಿದ್ದಾರೆ ಎಂಬ ದೂರಿನ ಕುರಿತು ಜಿಲ್ಲಾ ಚುನಾವಣಾಧಿಕಾರಿ ಸಲ್ಲಿಸಿದ್ದ ವರದಿಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ, ಅಭ್ಯರ್ಥಿ ಆಸ್ತಿ ವಿವರ ಬಚ್ಚಿಟ್ಟಿದ್ದಾರೆ ಎಂದು ವಿಚಾರಣೆ ವೇಳೆ ಅನಿಸಿದ್ದರೆ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಕ್ರಮ ಜರುಗಿಸಬಹá-ದು ಎಂದಿದೆ.

ಪ್ರಜ್ವಲ್ ಹೊಳೆನರಸೀಪುರದ ಚನ್ನಾಂಬಿಕಾ ಕನ್ವೆನ್ಷನ್ ಹಾಲ್ ಮಾಲೀಕರಾಗಿದ್ದರೂ ಅದನ್ನು ಕೃಷಿಯೇತರ ಭೂಮಿ ಪಟ್ಟಿಯಲ್ಲಿ ನಿವೇಶನವೆಂದು ನಮೂದಿಸಿದ್ದು, ಅಲ್ಲಿ ಕಲ್ಯಾಣ ಮಂಟಪವಿದೆ. ಆಸ್ತಿ ಬಗ್ಗೆ ಸುಳ್ಳು ಮಾಹಿತಿ ಒದಗಿಸಿದ್ದಾರೆ ಎಂದು ಜಿಪಂ ಕೆಡಿಪಿ ಮಾಜಿ ಸದಸ್ಯ ದೇವರಾಜೇಗೌಡ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿ ಪ್ರಜ್ವಲ್ ಪ್ರತಿನಿಧಿಯಿಂದ ಹೇಳಿಕೆ ಪಡೆದಿದ್ದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಏ.29ರಂದು ಮುಖ್ಯ ಚುನಾವಣಾ ಆಯುಕ್ತರಿಗೆ ವರದಿ ಸಲ್ಲಿಸಿದ್ದರು.

ಇದಕ್ಕೆ ಮೇ 14ರಂದು ಪತ್ರದ ಮೂಲಕ ಪ್ರತಿಕ್ರಿಯಿಸಿರುವ ಸಹಾಯಕ ಮುಖ್ಯ ಚುನಾವಣಾಧಿಕಾರಿ ಎಚ್.ಎಂ. ರಾಘವೇಂದ್ರ, ಸುಳ್ಳು ಪ್ರಮಾಣಪತ್ರ ಸಲ್ಲಿಸುವವರಿಗೆ ದಂಡ ವಿಧಿಸಬೇಕೆಂದು 1951ರ ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ 125ಎ ಸೂಚಿಸುತ್ತದೆ. ಹೀಗಾಗಿ ಜಿಲ್ಲಾ ಚುನಾವಣಾ ಅಧಿಕಾರಿ ವಿಚಾರಣೆ ವೇಳೆ ಅಭ್ಯರ್ಥಿ ಮಾಹಿತಿ ಮುಚ್ಚಿಟ್ಟಿದ್ದಾರೆ, ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಕಂಡುಬಂದರೆ ಕ್ರಮ ಜರುಗಿಸಬಹುದೆಂದು ಹೇಳಿದ್ದಾರೆ.

ಮಾಹಿತಿ ಬಚ್ಚಿಟ್ಟಿದ್ದಾರೆಯೇ?: ಒಂದೆಡೆ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು ಪ್ರಜ್ವಲ್ ಆಸ್ತಿ ವಿವರ ಸಂಬಂಧ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ ಎನ್ನುತ್ತಿದ್ದರೆ, ಇನ್ನೊಂದೆಡೆ ದೇವರಾಜೇಗೌಡ ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಆಯೋಗವೇ ಕ್ರಮ ಕೈಗೊಳ್ಳಲಿದೆ ಎನ್ನುತ್ತಿದ್ದಾರೆ. ಇದರಿಂದ ಈ ವಿಷಯಕ್ಕೆ ಹೆಚ್ಚು ಮಾನ್ಯತೆ ದೊರಕಿದೆ.

ಪ್ರಜ್ವಲ್ ವಿರá-ದ್ಧ ದೇವರಾಜೇಗೌಡ ಸಲ್ಲಿಸಿರುವ ದೂರಿನ ಅಂಶ ಹಾಗೂ ಪ್ರಜ್ವಲ್ ಪ್ರಮಾಣಪತ್ರ ಪರಿಶೀಲಿಸಿದರೆ ಸಾಮಾನ್ಯರಿಗೆ ಗೊಂದಲ ಉಂಟಾಗುತ್ತದೆ. ಪ್ರಜ್ವಲ್ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೊಳೆನರಸೀಪುರದ ಚನ್ನಾಂಬಿಕಾ ಕನ್ವೆನ್ಷನ್ ಹಾಲ್ ಮಾಲೀಕತ್ವ ಹೊಂದಿರುವ ಬಗ್ಗೆ ವಾಣಿಜ್ಯ ಕಟ್ಟಡಗಳ ಆಸ್ತಿ ಪಟ್ಟಿಯಲ್ಲಿ ಮಾಹಿತಿ ನೀಡಿಲ್ಲ. ಆ ಜಾಗ ಖಾಲಿ ನಿವೇಶನವೆಂದು ತಪ್ಪು ಮಾಹಿತಿ ನೀಡಿದ್ದಾರೆ ಎನ್ನುವುದು ದೂರುದಾರರ ವಾದ. ಆದರೆ, ಹೊಳೆನರಸೀಪುರ ಪುರಸಭೆಯ ಖಾತಾ ಸಂ. 959 ಹಾಗೂ 956ರಲ್ಲಿ ಸಹೋದರ ಸೂರಜ್ ಜತೆ ಜಂಟಿ ಮಾಲೀಕತ್ವದಲ್ಲಿ ನಿವೇಶನ ಹೊಂದಿರುವುದಾಗಿ ಮಾಹಿತಿ ನೀಡಿರುವ ಪ್ರಜ್ವಲ್, ತಮ್ಮ ಹೂಡಿಕೆ ಕಂಡಿಕೆಯಲ್ಲಿ ಚನ್ನಾಂಬಿಕಾ ಕನ್ವೆನ್ಷನ್ ಹಾಲ್​ನಲ್ಲಿ 14.66 ಲಕ್ಷ ರೂ. ಹೂಡಿಕೆ ಮಾಡಿರುವುದಾಗಿ ನಮೂದಿಸಿದ್ದಾರೆ. ದೂರುದಾರರು ಕಲ್ಯಾಣ ಮಂಟಪದ ಆಸ್ತಿ ವಿವರ ಬಚ್ಚಿಟ್ಟಿದ್ದಾರೆ ಎಂದು ಆರೋಪಿಸುತ್ತಿದ್ದರೆ, ತಂದೆ ಎಚ್.ಡಿ.ರೇವಣ್ಣ ಅವರಿಂದ ದಾನವಾಗಿ ಬಂದಿರುವ ನಿವೇಶನದಲ್ಲಿನ ಕಲ್ಯಾಣ ಮಂಟಪದಲ್ಲಿ 14 ಲಕ್ಷ ರೂ. ಹೂಡಿರá-ವುದಾಗಿ ಪ್ರಜ್ವಲ್ ಪ್ರಮಾಣಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

ಆಯೋಗಕ್ಕೆ ಡಿಸಿ ಪತ್ರ: ಅಫಿಡವಿಟ್ ಗೊಂದಲ ಸಂಬಂಧ ಯಾವ ಕ್ರಮ ತೆಗೆದುಕೊಳ್ಳಬಹುದು ಎಂದು ಚುನಾವಣಾ ಆಯೋಗಕ್ಕೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಅನರ್ಹತೆಯೋ? ದಂಡವೋ?

ಆರೋಪ ಸಾಬೀತಾದರೆ ಪ್ರಜ್ವಲ್ ಸಂಸದರಾಗಿ ಚುನಾಯಿತರಾದರೂ ಅವರ ಸದಸ್ಯತ್ವ ಅನರ್ಹಗೊಳ್ಳಲಿದೆ ಎಂಬ ಆತಂಕ ಬೆಂಬಲಿಗರಲ್ಲಿದೆ. ಆದರೆ, ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ ದಂಡ ಇಲ್ಲವೇ 6 ತಿಂಗಳವರೆಗೆ ಸೆರೆವಾಸ ಅಥವಾ ಎರಡನ್ನೂ ಶಿಕ್ಷೆಯಾಗಿ ವಿಧಿಸಬಹುದೇ ಹೊರತು ಸದಸ್ಯತ್ವ ಅನರ್ಹಗೊಳಿಸುವ ಬಗ್ಗೆ ಎಲ್ಲಿಯೂ ಪ್ರಸ್ತಾಪವಿಲ್ಲ.

ಪ್ರಕರಣ ವಿಚಾರಣೆ ಹಂತದಲ್ಲಿ ಇರು ವುದರಿಂದ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇನೆ ಅಥವಾ ಇಲ್ಲ ಇತ್ಯಾದಿ ಯಾವುದೇ ಮಾಹಿತಿಯನ್ನು ನಾನು ಹೇಳಲು ಆಗುವುದಿಲ್ಲ.
| ಪ್ರಿಯಾಂಕ ಮೇರಿ ಫ್ರಾನ್ಸಿಸ್

Leave a Reply

Your email address will not be published. Required fields are marked *