ಇದು ಹೊಸ ಮಾಫಿಯಾ; ಎರಡು ವರ್ಷದ ಬಳಿಕ ಹೊಸ ಹೇರ್ ಸ್ಟೈಲ್

ಎರಡು ವರ್ಷಗಳೇ ಆಗಿತ್ತು ಪ್ರಜ್ವಲ್ ಕೂದಲಿಗೆ ಕತ್ತರಿ ಹಾಕಿಸಿ. ‘ವೀರಂ’ ಚಿತ್ರಕ್ಕಾಗಿ ಇಷ್ಟುದ್ದ ಕೂದಲು ಬಿಟ್ಟಿದ್ದ ಪ್ರಜ್ವಲ್, ಚಿತ್ರೀಕರಣ ಬಹುತೇಕ ಮುಗಿಯುತ್ತಿದ್ದಂತೆಯೇ ಕಟಿಂಗ್ ಮಾಡಿಸಿದ್ದಾರೆ. ಹೊಸ ಹೇರ್​ಸ್ಟೈಲ್​ನಲ್ಲಿ ‘ಮಾಫಿಯಾ’ ಎಂಬ ಚಿತ್ರ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ಪ್ರಜ್ವಲ್, ಪೊಲೀಸ್ ಅಧಿಕಾರಿಯ ಪಾತ್ರವನ್ನು ಮಾಡುತ್ತಿರುವುದರಿಂದ ಅವರ ಹೊಸ ಹೇರ್​ಸ್ಟೈಲ್ ಹೇಗಿರಬಹುದು ಎಂಬುದು ನಿಮ್ಮ ಊಹೆಗೆ ಬಿಟ್ಟಿದ್ದು. ಅಂದಹಾಗೆ, ಗುರುವಾರ ಬೆಳಗ್ಗೆ ‘ಮಾಫಿಯಾ’ ಚಿತ್ರದ ಮುಹೂರ್ತ ನಡೆಯಿತು. ಚಿತ್ರತಂಡಕ್ಕೆ ಶುಭ ಹಾರೈಸುವುದಕ್ಕೆ ಪ್ರಿಯಾಂಕಾ ಉಪೇಂದ್ರ, ‘ದುನಿಯಾ’ ವಿಜಯ್’, ‘ಸಲಗ’ … Continue reading ಇದು ಹೊಸ ಮಾಫಿಯಾ; ಎರಡು ವರ್ಷದ ಬಳಿಕ ಹೊಸ ಹೇರ್ ಸ್ಟೈಲ್