More

  ಪ್ರಜ್ವಲ್ ಕುರಿತಾದ ಸುದ್ದಿಗೆ ನಾಲ್ಕು ದಿನ ಕಾಯಿರಿ

  ಕೊಟ್ಟೂರು: ಸಂಸದ ಪ್ರಜ್ವಲ್ ರೇವಣ್ಣ ಕುರಿತಂತೆ ನಾಲ್ಕು ದಿನ ಬಿಟ್ಟು ಮಾಧ್ಯಮಗಳಲ್ಲಿ ಏನು ಬರುತ್ತದೆ ಎಂಬುದನ್ನು ನೀವೇ ನೋಡುತ್ತೀರಿ. ಪ್ರಕರಣದ ಕುರಿತು ಈ ತನಕ ಟಿವಿ-ಪತ್ರಿಕೆಯಲ್ಲಿ ಓದಿದ್ದೀರಿ. ಇದೆಲ್ಲಕ್ಕಿಂತಲೂ ಭಿನ್ನವಾದದನ್ನು ನಾಲ್ಕು ದಿನಗಳ ನಂತರ ನೋಡುತ್ತೀರಿ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿರುವುದಕ್ಕೆ ಪರಿಶಿಷ್ಟ ವರ್ಗ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣ ತಾಜಾ ಉದಾಹರಣೆ ಎಂದು ಬಿಜೆಪಿ ಮಾಜಿ ಎಂಎಲ್ಸಿ ಅರುಣ್ ಶಹಪೂರ್ ಹೇಳಿದರು.

  ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಎಷ್ಟು ಮುಖ್ಯವೋ ಸರ್ಕಾರಿ ಶಾಲಾ ಕಾಲೇಜ್‌ಗಳು ಅಷ್ಟೇ ಬೇಕು. ಅಮರನಾಥ್ ಪಾಟೀಲ್ ಗೆದ್ದರೆ ಖಂಡಿತ ಇಲ್ಲಿ ಡಿಗ್ರಿ ಕಾಲೇಜ್ ಸ್ಥಾಪನೆಗೆ ಹೋರಾಟ ಮಾಡುತ್ತಾರೆ. ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದರಿಂದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿ ನಿರ್ಭಯವಾಗಿ ಪರೀಕ್ಷೆ ಬರೆಯದ ಕಾರಣ ಫಲಿತಾಂಶ ಕಡಿಮೆಯಾಗಿದೆ.

  ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಸಚಿವರ ತಪ್ಪು ನಿರ್ಧಾರ, ಭ್ರಷ್ಟಾಚಾರದಿಂದಾಗಿ ಶಿಕ್ಷಣ ಕ್ಷೇತ್ರ ಪ್ರಗತಿಗೆ ಹಿನ್ನಡೆಯಾಗುತ್ತಿದೆ ಎಂದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಸ್ಥಳೀಯ ಘಟಕದ ಅಧ್ಯಕ್ಷ ಭರನಗೌಡ ಪಾಟೇಲ್, ಪಪಂ ಸದಸ್ಯ ಕೆ.ಎಸ್.ಈಶ್ವರಗೌಡ, ಹಗರಿಬೊಮ್ಮನಹಳ್ಳಿ ಕೊಟ್ರಪ್ಪ ಇತರರಿದ್ದರು.

  See also  ಕೊಟ್ಟೂರೇಶ್ವರ ಮಹಾರಾಜ್ ಕೀ ಜೈ, ಅದ್ದೂರಿಯಿಂದ ಜರುಗಿದ ಸ್ವಾಮಿ ಜಾತ್ರೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts