More

  ಪ್ರಾಚೀನ ಜ್ಞಾನ: ಗಾಯತ್ರಿಯೇ ಸೂರ್ಯಮಂತ್ರ!

  ಪ್ರಾಚೀನ ಜ್ಞಾನ: ಗಾಯತ್ರಿಯೇ ಸೂರ್ಯಮಂತ್ರ!|ಅನಂತ ವೈದ್ಯ, ಯಲ್ಲಾಪುರ

  ಚಂದ್ರವಂಶದ ಜಹ್ನುರಾಜನ ಸಂತತಿಯಲ್ಲಿ ಜನಿಸಿದ ಕುಶಿಕ ರಾಜನ ಮೊಮ್ಮಗನೇ ವಿಶ್ವರಥ. ಆತನ ಹೆಂಡತಿಯ ಹೆಸರು ಹೈಮಾವತಿ. ವಿಶ್ವರಥ ಒಮ್ಮೆ ತನ್ನ ಬೃಹತ್​ ಸೈನ್ಯದೊಂದಿಗೆ ಬೇಟೆಯಾಡಲು ಹೋದಾಗ, ವಶಿಷ್ಠರ ಆಶ್ರಮವನ್ನು ಪ್ರವೇಶಿಸಿದ. ಆದರಾತಿಥ್ಯವನ್ನು ಸ್ವೀಕರಿಸಿ ಹೋಗಲು ವಶಿಷ್ಠರು ಹೇಳಿದರು. ವಿಶ್ವರಥ ನಿರಾಕರಿಸಿದ. ಕೊನೆಗೆ ವಶಿಷ್ಠರ ಒತ್ತಾಯಕ್ಕೆ ಮಣಿದ, ಅವನ ಬೃಹತ್​ ಸೈನ್ಯಕ್ಕೆ ನಂದಿನಿಯ ಪ್ರಭಾವದಿಂದ ಮೃಷ್ಟಾನ್ನ ಭೋಜನವನ್ನು ವಶಿಷ್ಠರು ನೀಡಿದರು.

   ಇದನ್ನು ತಿಳಿದ ವಿಶ್ವರಥ ಲೋಕದಲ್ಲಿರುವ ಮಹಾನ್​ ರತ್ನಗಳೆಲ್ಲ ರಾಜನಿಗೆ ಸೇರಬೇಕು, ನಂದಿನಿಯನ್ನು ಕೊಡಿ ಎಂದು ಕೇಳಿದ. ವಶಿಷ್ಠರು “ನಂದಿನಿ ಬಂದರೆ ತೆಗೆದುಕೊಂಡು ಹೋಗು’ ಎಂದರು. ಊಟ ಮಾಡಿದ ಸ್ಥಳದಲ್ಲಿಯೇ ಬಹುದೊಡ್ಡ ಯುದ್ಧ ನಡೆಯಿತು. ವಿಶ್ವರಥನ ಸೈನ್ಯ ನಂದಿನಿಯ ಮುಂದೆ ಸೋತು ಹೋಯಿತು. ವಿಶ್ವರಥನ ಶಸ್ತ್ರಾಸ್ತ್ರಗಳು  ನಿಷ್ಪ್ರಯೋಜಕವಾದವು .ಕೊನೆಗೆ ಒಂದು ಬ್ರಹ್ಮದಂಡವು ತನ್ನೆಲ್ಲ ತ್ರಿಯತ್ವವನ್ನು ಮಣ್ಣು ಮುಕ್ಕಿಸಿತು ಎಂದು ತ್ರಿಯತ್ವವನ್ನು ಬಿಟ್ಟು ತಾಪಸಿಗನಾದ!

  ಅನೇಕ ಆಸೆ- ಆಮಿಷಗಳ ಮಧ್ಯೆಯೂ ಛಲವನ್ನು ಬಿಡಲಿಲ್ಲ. ಅಪ್ಸರೆ ಮೇನಕೆಯೊಡನೆ ಸಂಸಾರ ಮಾಡಿ ಶಕುಂತಲೆಯನ್ನು ಪಡೆದ. ಹುಟ್ಟಿದ ಶಿಶುವನ್ನು ಅನಾಥವಾಗಿ ಬಿಟ್ಟ. ಯಯಾತಿಯ ಮಗಳು ಮಾಧವಿಯಿಂದ ಅಷ್ಟಕನನ್ನು ಪಡೆದ. ಸರಸ್ವತಿ ನದಿಯನ್ನು ವಸಿಷ್ಠರ ಮಕ್ಕಳ ರಕ್ತದ ನದಿಯಾಗಿಸಿದ. ಹಸಿವೆಗಾಗಿ ತತ್ತರಿಸಿದ. ಚಪಲ, ಚಂಚಲನಾಗಿದ್ದರೂ ಹಟದಿಂದ ಗಾಯತ್ರಿ ಮಂತ್ರವನ್ನು ಕಂಡು ಹಿಡಿದ.!

  ಗಾಯತ್ರಿಯನ್ನು ಪಂಚಮುಖಿ ಸಿದೇವತೆಯೆಂದು ಪೂಜಿಸುವರು. ಅದರಲ್ಲಿ ಒಂದು ಮುಖ ನೀಲಿ ಬಣ್ಣದಿಂದ ಕೂಡಿದೆ. ಅದು ಶೂದ್ರತೆಯ ಸಂಕೇತ! ಅಂದರೆ ಮಂತ್ರಸಾಧನಾ ಸಿದ್ಧಿಗೆ ಹುಟ್ಟಿನಿಂದ ಬರೆದುಕೊಳ್ಳುವ ಜಾತಿ ಪ್ರಮಾಣ ಬೇಕಿಲ್ಲ. ಸಂಸ್ಕಾರದಿಂದ ಬ್ರಾಹ್ಮಣ್ಯ ಪಡೆಯಬಹುದು. ಅದನ್ನೇ ಉಪನಯನ= ಎರಡನೆಯ ಕಣ್ಣು ಎಂದು ಕರೆಯುವರು. ಯಾರೂ ಆರಾಧಿಸಬಹುದಾದ ಸೂರ್ಯಮಂತ್ರವಿದು. ಮಂತ್ರದಲ್ಲಿ “ನಮ್ಮ’ ಎಂದಿದೆಯೇ ವಿನಃ “ನನ್ನ’ ಎಂದಿಲ್ಲ!

  ಗಾಯತ್ರಿ ಸಿಸ್ವರೂಪಳಲ್ಲ, ಅದೊಂದು ಛಂದಸ್ಸು. ಬುದ್ಧಿಯನ್ನು ಪ್ರಚೋದಿಸಲು ಸೂರ್ಯನಲ್ಲಿ ಕೇಳಿಕೊಳ್ಳುವ ಮಂತ್ರ. ಅಂತಹ ಗಾಯತ್ರಿ ಮಂತ್ರವನ್ನು ಕಂಡು ಹಿಡಿದ ವಿಶ್ವರಥ ವಿಶ್ವಾಮಿತ್ರನಾಗಿ ಲೋಕಮಿತ್ರನಾದ! ಸೂರ್ಯಮಂತ್ರವಾದ ಇದನ್ನು ಗಾಯತ್ರಿ ಮಂತ್ರವೆನ್ನುವುದು ರೂಢಿಯಾಗಿದೆ! ಸೂರ್ಯ ದೇವನ ಆರಾಧನೆಯಿಂದ ಬದುಕಿನಲ್ಲಿ ಸಾಕಷ್ಟು ಬದಲಾವಣೆ ಹಾಗೂ ಧನಾತ್ಮಕ ರೀತಿಯಲ್ಲಿ ಯಶಸ್ಸು ದೊರೆಯುವುದು. ಏಕಾಗ್ರತೆ, ನೆನಪಿನ ಶಕ್ತಿ ಹೆಚ್ಚಾಗುವುದು. ಇಷ್ಟಾರ್ಥ ಲಭಿಸುವುದು.

  ವಿಶ್ವಾಮಿತ್ರ ಋಷಿಃ, ದೇವೀ ಗಾಯತ್ರೀ ಛಂದಃ, ಸವಿತಾ ದೇವತಾ ಎಂದು ಪ್ರಾರಂಭವಾಗುವುದು.

  ಓಂ ಭೂರ್ಭುವಸ್ವಃ ತತ್ಸವಿತುರ್​ ವರೇಣ್ಯಂ ಭಗೋರ್ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್​
  ಓಂ=ಬ್ರಹ್ಮತೇಜ. ಭೂಃ=ಭೂಮಿ, ಭುವಃ=ಅಂತರಿ, ಸ್ವಃಸುವ=ಆಕಾಶ, ತತ್​=ಆ, ವರೇಣ್ಯಂ=ಪೂಜಾರ್ಹವಾದ, ಭೂರ್ಭುವಸ್ಸುವಃ = ಭೂಲೋಕ& ಭುವಲೋರ್ಕ& ಸುವಲೋರ್ಕಗಳು. ಹಾಗೆಯೇ ಋಗ್​- ಯಜುಃ – ಸಾಮ-
  ಅಥರ್ವ ವೇದಗಳಲ್ಲಿಯೂ ಶ್ರೇಷ್ಠವಾದ,
  ತತ್ಸವಿತುರ್ವರೇಣ್ಯಂ= ಶ್ರೇಷ್ಠ ಕಿರಣಗಳುಳ್ಳ,
  ಪ್ರಕಾಶಮಾನವಾದ ಸವಿತೃದೇವರ,
  ಭಗೋರ್ ದೇವಸ್ಯ ಧೀಮಹಿ= ತೇಜಸ್ಸನ್ನು ಮನಸ್ಸಿನಲ್ಲೆ ಧ್ಯಾನಿಸುವೆ.

  ಧಿಯೋಯೋನಃ ಪ್ರಚೋದಯಾತ್​ = ನಮ್ಮ ಧೀ ಶಕ್ತಿ, ಬುದ್ಧಿಶಕ್ತಿ ಯನ್ನು ಉತ್ತೇಜಿಸಲಿ. ಶ್ರೇಷ್ಠವಾದ ತೇಜಸ್ಸನ್ನು ನಮಗೆ ನೀಡಲಿ.

  ಅರುಣನ ವಧೆ: ಅರುಣಾಸುರನು ದೇವ&ಮಾನವ& ಪ್ರಾಣಿಗಳಿಂದ ಸಾವು ಬರದಂತೆ ಬ್ರಹ್ಮನಿಂದ ವರವನ್ನು ಪಡೆದನು. ಆತ ಗಾಯತ್ರಿಯ ಆರಾಧಕ. ಆ ಬಲದಿಂದ ಉಪಟಳವನ್ನು ಕೊಡಲು ಪ್ರಾರಂಭಿಸುತ್ತಾನೆ. ಆದರೆ ಅಹಂನಿಂದ ಗಾಯತ್ರಿ ಮಂತ್ರವನ್ನು ಮರೆಯುತ್ತಾನೆ. ಅವನು ದುಷ್ಟನಾದ. ದೇವತೆಗಳ ಬೇಡಿಕೆಯಿಂದ ವಜ್ರದುಂಬಿಯ ಆಕಾರದಿಂದ ವಧಿಸುತ್ತಾಳೆ.
  ಗಾಯತ್ರಿ ದೇವಾಲಯ: ಗಾಯತ್ರಿ ದೇವಾಲಯವು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಡಸಗ್ರಾಮದಲ್ಲಿದೆ. ಹಾವೇರಿಯಿಂದ 50 ಕಿ.ಮೀ. ದೂರದಲ್ಲಿದೆ. ಬಿಳಿಬಣ್ಣದ ಈ ದೇವಾಲಯ ಶಾಂತಿ ಆನಂದವನ್ನು ನೀಡುವುದು. ದಕ್ಷಿಣ ಕರ್ನಾಟಕದ ಏಕೈಕ ಪುರಾತನ ದೇವಾಲಯವಿದು. ಬೆಂಗಳೂರಿನ ಯಶವಂತಪುರದಲ್ಲಿರುವ ಗಾಯತ್ರಿ ದೇವಾಲಯ ಶಾಸೊಕ್ತವಾಗಿದೆ. ಕಬ್ಬೆಪಾಳ್ಯ ಮಾಗಡಿ ಗುಡ್ಡದ ಗಾಯತ್ರಿ, ಮುಳಬಾಗಿಲಿನ ವೇದಮಾತೆ, ಗದಗದ ಸರಸ್ವತಿ, ಗಾಯತ್ರಿ, ಶಾರದಾ ದೇವಾಲಯಗಳಿವೆ.

  ಮಂತ್ರದ ಶಕ್ತಿ: ಮೊದಲನೇ ಮಹಾಯುದ್ಧದಲ್ಲಿ ಜರ್ಮನರು ಬಳಸಿದ್ದ ಶಬ್ದದಿಂದ ನಿಮಿಷಕ್ಕೆ ಸಾವಿರಾರು ಜನರನ್ನು ಕೊಲ್ಲುತ್ತಿದ್ದ ಮೈಕ್ರೋ ವೇವ್​ ಯಂತ್ರಕ್ಕಿಂತ ಸೆಕೆಂಡಿಗೆ 105 ತರಂಗಗಳು ಈ ಮಂತ್ರದಿಂದ ಹಲವು ಪಟ್ಟು ಹೆಚ್ಚಾಗಿದೆಯೆಂದು ವಿಾನಿಗಳ ಸಂಶೋಧನೆಯ ಫಲ. ಆದುದರಿಂದಲೇ ಲೋಕದ ಹಿತಕ್ಕಾಗಿ, ಗಾಯತ್ರಿಯ ಆರಾಧನೆ, ಯಗಳನ್ನು ಸರ್ಕಾರವೇ ಮಾಡಿಸುತ್ತಿದೆ.

  (ಲೇಖಕರು ಕನ್ನಡ ಹಾಗೂ ಸಂಸತ ವಿದ್ವಾಂಸರು; ಯಕ್ಷಗಾನ ಅರ್ಥಧಾರಿ)
  ([email protected])

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts