ಮುಂಬೈ: ಪ್ರಭಾಸ್(Prabhas )ನಟನೆಯ ಕಣ್ಣಪ್ಪ ಚಿತ್ರದ ಪೋಟೊವೊಂದು ಸೋರಿಕೆಯಾಗಿದ್ದು, ಸೋರಿಕೆ ಮಾಡಿದವರನ್ನು ಹಿಡಿದುಕೊಟ್ಟವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಚಿತ್ರತಂಡ ಘೋಷಿಸಿದೆ.
ಕಣ್ಣಪ್ಪ ಚಿತ್ರದಲ್ಲಿ ಪ್ರಭಾಸ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಎಂಟು ವರ್ಷಗಳಿಂದ ಚಿತ್ರ ನಿರ್ಮಾಣ ಸೇರಿದಂತೆ ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶದಿಂದ ಕಷ್ಟಪಡುತ್ತಿದ್ದೇವೆ. ಎರಡು ವರ್ಷಗಳಿಂದ ಕಣ್ಣಪ್ಪ ಸಿನಿಮಾಕ್ಕಾಗಿ ನಮ್ಮ ತಂಡ ಹಗಲು ರಾತ್ರಿ ಎನ್ನದೇ ದುಡಿಯುತ್ತಿದ್ದಾರೆ. ಆದರೆ, ನಮ್ಮ ಅನುಮತಿ ಇಲ್ಲದೆ ಚಿತ್ರ ಪೋಟೋ ತುಣುಕೊಂದು ಕದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದು ನಮಗೆ ತೀವ್ರ ನೋವು ಉಂಟು ಮಾಡಿದೆ ಎಂದು ನಿರ್ಮಾಪಕರು ಹೇಳಿದ್ದಾರೆ.
ಇದನ್ನೂ ಓದಿ:ಚಾಮರಾಜನಗರ ಆಕ್ಸಿಜನ್ ದುರಂತ; ತನಿಖೆಗೆ ನ್ಯಾ.ಕುನ್ಹಾ ಸಮಿತಿಗೆ ಸೂಚನೆ|Chamarajanagar Oxygen Tragedy
” ಈ ತುಣುಕು ಹೇಗೆ ಸೋರಿಕೆಯಾಗಿದೆ ಎಂಬುವುದನ್ನು ಬಹಿರಂಗ ಪಡಿಸಲು ಬದ್ಧರಿದ್ದೇವೆ. ಸೋರಿಕೆ ಮಾಡಿದವರನ್ನು ಹಿಡಿಯಲು ಪೊಲೀಸ್ರಿಗೆ ದೂರು ನೀಡಲಾಗಿದೆ. ಚಿತ್ರಣ ತುಣುಕು ಯಾರು ಹಂಚಿಕೊಳ್ಳಬೇಡಿ ಎಂದು ಒತ್ತಾಯಿಸುತ್ತಿದ್ದವೆ. ಅಲ್ಲದೆ, ಹಂಚಿಕೊಳ್ಳುವುದರಿಂದ ನೀವು ಹೊಣೆಯಾಗಿತ್ತಿರ. ಹೀಗಾಗಿ, ಇಂತಹ ಕೆಲಸಕ್ಕೆ ಕೈ ಹಾಬೇಡಿ” ಈ ಸೋರಿಕೆ ಮೂಲ ಪತ್ತೆ ಹಚ್ಚಲು 5 ಲಕ್ಷ ರೂ ಬಹುಮಾನ ಘೋಷಿಸಲಾಗಿದೆ ಎಂದು ಹೇಳಿದ್ದಾರೆ.
ಕಣ್ಣಪ್ಪ ಫ್ಯಾಟಂಸಿ ಚಿತ್ರವಾಗಿದೆ. ಅಕ್ಷಯ್ ಕುಮಾರ್. ಮೊಹನ್ ಲಾಲ್ ಮತ್ತು ಪ್ರಭಾಸ್ ಸೇರಿದಂತೆ ದೊಡ್ಡ ತಾರಾಬಣವಿದೆ. (ಏಜೆನ್ಸೀಸ್)