ಇಬ್ಬರು ಸ್ಟಾರ್​ ನಿರ್ದೇಶಕರ ಚಿತ್ರಕ್ಕೆ ಪ್ರಭಾಸ್​ ನಾಯಕ! ‘ಬಾಹುಬಲಿ’ ಅರಸಿ ಬರುತ್ತಿವೆ ಬಿಗ್​ ಪ್ರಾಜೆಕ್ಟ್​ | Prabhas

blank

ಆಂಧ್ರಪ್ರದೇಶ: ಪ್ಯಾನ್​ ಇಂಡಿಯಾ ಸ್ಟಾರ್​, ನಟ ಪ್ರಭಾಸ್​ ಸದ್ಯ ಟಾಲಿವುಡ್​ ಅಂಗಳದಲ್ಲಿ ಸಖತ್​ ಸದ್ದು ಮಾಡುತ್ತಿದ್ದು, ಸಾಲು ಸಾಲು ಸಿನಿಮಾಗಳ ಚಿತ್ರೀಕರಣದಲ್ಲಿ ಬಿಸಿಯಾಗಿದ್ದಾರೆ. ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಬಹುನಿರೀಕ್ಷಿತ ಸಿನಿಮಾಗಳ ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿರುವ ಪ್ರಭಾಸ್ (Prabhas),​ ಸದ್ಯ ಮತ್ತೆರೆಡು ಬಿಗ್ ಬಜೆಟ್​ನ ಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ.

ಇದನ್ನೂ ಓದಿ: 123 ವರ್ಷ ಬಳಿಕ ಅಕ್ಟೋಬರ್​ನಲ್ಲಿ ಬೆಚ್ಚಗಿನ ವಾತಾವರಣ:ದೇಶದ ಕೆಲ ರಾಜ್ಯದಲ್ಲಿ ಅಧಿಕ ಉಷ್ಣಾಂಶ

ಪ್ರಸ್ತುತ ‘ಕಣ್ಣಪ್ಪ’, ‘ದಿ ರಾಜಾ ಸಾಬ್’, ‘ಫೌಜಿ’, ‘ಸ್ಪಿರಿಟ್’ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ರೆಬೆಲ್ ಸ್ಟಾರ್, ಸಿನಿಮಾ ಜಗತ್ತಿನ ವಿಸ್ತಾರವನ್ನು ಪ್ರೇಕ್ಷಕರಿಗೆ ಪರಿಚಯಿಸಲು ಹೊರಟಿರುವ ಸ್ಟಾರ್​ ನಿರ್ದೇಶಕರಾದ ಲಿಯೋ ಖ್ಯಾತಿಯ ಲೋಕೇಶ್​ ಕಂಗಾರಾಜ್​ ಮತ್ತು ಪ್ರಶಾಂತ್​ ವರ್ಮ ಅವರ ಮುಂಬರುವ ದೊಡ್ಡ ಬಜೆಟ್​ನ ಸಿನಿಮಾಗೆ ನಾಯಕರಾಗಿ ಆಯ್ಕೆಯಾಗಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ತಮ್ಮದೇ ಹೆಸರು ಸ್ಥಾಪಿಸಿಕೊಂಡಿರುವ ಈ ಇಬ್ಬರು ನಿರ್ದೇಶಕರೊಂದಿಗೆ ಪ್ರಭಾಸ್​ ಕೈಜೋಡಿಸುತ್ತಿರುವ ವಿಷಯ ಇದೀಗ ಅವರ ಅಭಿಮಾನಿಗಳಲ್ಲಿ ಅತೀವ ಸಂತಸ ಮೂಡಿಸಿದೆ.

ಇದರೊಟ್ಟಿಗೆ ಬಾಲಿವುಡ್​ನ ಹೆಸರಾಂತ ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಅವರ ಮುಂಬರುವ ಸಿನಿಮಾದಲ್ಲಿ ಪ್ರಭಾಸ್​ ಒಂದು ವಿಶೇಷ ಹಾಗೂ ಬಹುಮುಖ್ಯ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ ಎಂಬ ಸುದ್ದಿಗಳು ಸದ್ಯ ಬಾಲಿವುಡ್​ ಅಂಗಳದಲ್ಲಿ ವ್ಯಾಪಕವಾಗಿ ಸದ್ದು ಮಾಡುತ್ತಿದೆ. ಇದೇನಾದರೂ ನಿಜವಾದರೆ, ಪ್ರಭಾಸ್​ ಕೀರ್ತಿ ಮತ್ತಷ್ಟು ಹೆಚ್ಚಲಿದ್ದು, ಜಾಗತಿಕ ಮಟ್ಟದಲ್ಲಿ ದೊಡ್ಡದಾಗಿ ಸೌಂಡ್ ಮಾಡುವುದು ಬಹುತೇಕ ಖಚಿತ ಎಂದೇ ಹೇಳಬಹುದು,(ಏಜೆನ್ಸೀಸ್).

ಪೆಟ್ರೋಲ್​ ಹಾಕಿಸಿಕೊಳ್ಳುವವರು ಈ ಮಿಸ್ಟೇಕ್ಸ್​ ಎಂದಿಗೂ ಮಾಡ್ಬೇಡಿ! ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ | Petrol

Share This Article

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…

ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips

ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…