ಅನುಷ್ಕಾ ಶೆಟ್ಟಿಯೊಂದಿಗಿನ ಪ್ರೀತಿ ಬಗ್ಗೆ ಅಂತೂ ಮೌನ ಮುರಿದ ನಟ ಪ್ರಭಾಸ್​; ತಮ್ಮಿಬ್ಬರ ನಡುವಿನ ಸಂಬಂಧದ ಬಗ್ಗೆ ಹೇಳಿದ್ದೇನು ಗೊತ್ತಾ?

ಹೈದರಾಬಾದ್‌: ಟಾಲಿವುಡ್​ ನಟ ಪ್ರಭಾಸ್​ ರಿಲೇಶನ್​ಶಿಪ್​, ಮದುವೆ ಮತ್ತಿತರ ವಿಚಾರಗಳು ಪದೇಪದೆ ಸುದ್ದಿಯಾಗುತ್ತಲೇ ಇರುತ್ತವೆ. ಅದೆಷ್ಟೋ ರೂಮರ್​ಗಳು ಹಬ್ಬಿದ್ದರೂ ಈವರೆಗೆ ಪ್ರಭಾಸ್​ ಯಾವುದೇ ಸ್ಪಷ್ಟ ಪ್ರತಿಕ್ರಿಯೆಯನ್ನೂ ನೀಡಿರಲಿಲ್ಲ.

ಪ್ರಭಾಸ್​ ಅವರು ನಟಿ ಅನುಷ್ಕಾ ಶೆಟ್ಟಿಯವರ ಜತೆ ಪ್ರೀತಿಯಲ್ಲಿದ್ದಾರೆ. ಅವರಿಬ್ಬರೂ ಮದುವೆಯಾಗುತ್ತಾರೆ ಎಂಬುದೊಂದು ಗಾಳಿ ಸುದ್ದಿ ಕೂಡ ಕೆಲವು ವರ್ಷಗಳಿಂದ ಹರಿದಾಡುತ್ತಿದೆ. ಇದುವರೆಗೂ ಈ ಬಗ್ಗೆ ತುಟಿ ಬಿಚ್ಚಿರದಿದ್ದ ಪ್ರಭಾಸ್​ ಈಗ ಮಾತಾಡಿದ್ದಾರೆ.

ಅನುಷ್ಕಾ ಶೆಟ್ಟಿಯವರೊಂದಿಗಿನ ಪ್ರೀತಿಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಭಾಸ್​, ಇದೊಂದು ರೂಮರ್​ ಅಷ್ಟೇ ಎಂದು ಹೇಳಿದ್ದಾರೆ.

ಅನುಷ್ಕಾ ನನಗೆ ಸ್ನೇಹಿತೆ ಮಾತ್ರ. ನಮ್ಮಿಬ್ಬರ ಮಧ್ಯೆ ಪ್ರೀತಿಯಿದ್ದು, ರಿಲೇಶನ್​ ಶಿಪ್​ನಲ್ಲಿದ್ದರೆ ಅದನ್ನು ಇಷ್ಟುವರ್ಷ ಮುಚ್ಚಿಡಲು ಹೇಗೆ ಸಾಧ್ಯವಾಗುತ್ತಿತ್ತು. ಯಾವಾಗಲೋ ಪಬ್ಲಿಕ್​ ಆಗುತ್ತಿತ್ತು. ಬಾಹುಬಲಿ ಸಿನಿಮಾ ಶೂಟಿಂಗ್​ ಮುಗಿಸಿದಾಗಿನಿಂದಲೂ ಅಂದರೆ ಕಳೆದ ಎರಡು ವರ್ಷಗಳಿಂದಲೂ ಈತರಹದ ಸುದ್ದಿಯೊಂದು ಹರಿದಾಡುತ್ತಲೇ ಇದೆ. ಆದರೆ ನಿಜಕ್ಕೂ ನಮ್ಮಿಬ್ಬರ ನಡುವೆ ಯಾವುದೇ ಸಂಬಂಧವಿಲ್ಲ. ಹಾಗೊಮ್ಮೆ ಇದ್ದಿದ್ದರೆ ಇಷ್ಟು ದಿನಗಳಲ್ಲಿ ಯಾವಾಗಲೋ ಹೊರಬೀಳುತ್ತಿತ್ತು. ಸಾರ್ವಜನಿಕವಾಗಿ ಒಮ್ಮೆಯಾದರೂ ನಾವು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದೆವು ಎಂದು ಪ್ರಭಾಸ್​ ಹೇಳಿದ್ದಾರೆ.

ಹಿಂದೊಮ್ಮೆ ನಡೆದ ಸಂದರ್ಶನವೊಂದರಲ್ಲಿ ತಾವು ಲವ್​ ಮ್ಯಾರೇಜ್​ ಮಾಡಿಕೊಳ್ಳುವ ಬಗ್ಗೆ ಪ್ರಭಾಸ್​ ಸುಳಿವು ನೀಡಿದ್ದರು. ಹಾಗೇ ಪ್ರಭಾಸ್​ ಶೀಘ್ರವೇ ಮದುವೆಯಾಗಲಿದ್ದಾರೆ ಎಂಬುದನ್ನು ಇತ್ತೀಚೆಗೆ ಅವರ ಚಿಕ್ಕಪ್ಪ ಕೃಷ್ಣನ್​ ರಾಜು ಸಂದರ್ಶನವೊಂದರಲ್ಲಿ ತಿಳಿಸಿದ್ದರು.

Leave a Reply

Your email address will not be published. Required fields are marked *