More

    ‘ಕಲ್ಕಿ 2898 ಎಡಿ’ ರನ್​ಟೈಮ್​ ಶಾಕ್​! ಇಷ್ಟೊತ್ತು ಯಾರು ಸಿನಿಮಾ ನೋಡ್ತಾರೆ ಸ್ವಾಮಿ?

    ಹೈದರಾಬಾದ್​: ಈ ಹಿಂದಿನಿಂದಲೂ ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿರುವ ಟಾಲಿವುಡ್​ನ​ ರೆಬೆಲ್ ಸ್ಟಾರ್​ ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ ‘ಕಲ್ಕಿ 2898 ಎಡಿ’ ಸಿನಿಮಾದ ಚಿತ್ರೀಕರಣ ಇದೀಗ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಇದೇ ಜೂನ್​ 27ರಂದು ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಇದರ ಮಧ್ಯೆ ಇತ್ತೀಚೆಗಷ್ಟೇ ಚಿತ್ರತಂಡ ಬುಜ್ಜಿ ಕಾರನ್ನು ಪರಿಚಯಿಸಿದ ರೀತಿ ಹಾಗೂ ರಿಲೀಸ್​ ಮಾಡಿದ ಟ್ರೇಲರ್​ ನೋಡಿ ಚಿತ್ರರಸಿಕರು​ ಫಿದಾ ಆಗಿದ್ದಾರೆ. ಆದರೆ, ಇದೀಗ ಚಿತ್ರದ ರನ್​​ಟೈಮ್​ ಅವಧಿ ಕೇಳಿ ದಂಗಾಗಿದ್ದು, ಇಷ್ಟೊತ್ತು ಕುಳಿತು ಯಾರು ಸಿನಿಮಾ ನೋಡ್ತಾರೆ ಎಂದು ನೆಟ್ಟಿಗರು ಅಭಿಪ್ರಾಯಿಸಿದ್ದಾರೆ.

    ಇದನ್ನೂ ಓದಿ: VIDEO | ಈ ಸ್ಟೈಲ್ ನೋಡಿದ ನಂತ್ರ ನಿಮಗೆ ಚಿತ್ರ ಎನ್ನಿಸಬಹುದು ಆದ್ರೂ ಒಮ್ಮೆ ಈ ವಿಡಿಯೋ ನೋಡಿ…

    ಬಹುನಿರೀಕ್ಷಿತ ಸಿನಿಮಾ ಬಹುತೇಕ ಚಿತ್ರಮಂದಿರಗಳಲ್ಲಿ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಇದೇ ಜೂ. 27ರಂದು ತೆರೆಕಾಣುತ್ತಿದ್ದು, ಈ ವಿಷಯ ಸದ್ಯ ಪ್ರಭಾಸ್​ ಫ್ಯಾನ್ಸ್​ಗಳ ಕಾತರವನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನು ಈ ಮಧ್ಯೆ ನಾಯಕ ನಟ ಪ್ರಭಾಸ್​ ಮತ್ತು ನಾಯಕಿ ದೀಪಿಕಾ ಪಡುಕೋಣೆ ಲುಕ್​ಗಳನ್ನು ನೋಡಿದ ಸಿನಿಪ್ರೇಕ್ಷಕರು ಫಿದಾ ಆಗಿದ್ದು, ಸೈನ್​-ಫಿಕ್ಷನ್​ ಚಿತ್ರವನ್ನು ಚಿತ್ರಮಂದಿರದಲ್ಲೇ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ವರದಿಗಳ ಪ್ರಕಾರ, ಚಿತ್ರದ ತಯಾರಕರು ಸಿನಿಮಾದ ರನ್​ಟೈಮ್ ಅವಧಿಯನ್ನು ಬಿಡುಗಡೆಗೊಳಿಸಿದ್ದು, 3 ಗಂಟೆ 56 ನಿಮಿಷ ಎಂದು ತಿಳಿಸಲಾಗಿದೆ.

    ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾದ ರನ್​ಟೈಮ್ ಅಧಿಕೃತ ಎಂದು ಹೇಳಲಾಗಿದ್ದು, ಸದ್ಯ ಮಾಹಿತಿ ತಿಳಿದ ಸಿನಿಪ್ರಿಯರು ಭಾರೀ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ಹೇಗೆ ಸಾಧ್ಯ? 2 ಗಂಟೆ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡುವುದು ಕಷ್ಟಸಾಧ್ಯ ಎಂದು ಕೆಲವರು ಅಭಿಪ್ರಾಯಿಸಿದರೆ, ಇನ್ನೂ ಕೆಲವರು ಚಿತ್ರದ ಕಥಾಹಂದರ, ದೃಶ್ಯಗಳು 3 ಗಂಟೆಗೂ ಹೆಚ್ಚು ಅವಧಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬಹುದು ಎಂದು ತಮ್ಮ ತಮ್ಮ ಅನಿಸಿಕೆಯನ್ನು ಕಮೆಂಟ್​ ಮಾಡಿ ತಿಳಿಸಿದ್ದಾರೆ. ಸಿನಿಮಾ ತೆರೆಕಂಡ ಬಳಿಕ ಇದೆಲ್ಲವೂ ಯಾವ ರೀತಿ ಪರಿಣಾಮ ಬೀರಲಿದೆ? ಚಿತ್ರ ಬಾಕ್ಸ್​ ಆಫೀಸ್​ ಕಮಾಲ್ ಮಾಡಲಿದ್ಯಾ? ಎಂಬುದನ್ನು ಕಾದು ನೋಡಬೇಕಿದೆ.

    See also  ಬಿಸಿಲಿಗೆ ಕಪ್ಪಾದ ಕಾಲು ಪಳ ಪಳ ಅಂತಾ ಹೊಳೆಯ ಬೇಕಾ? ಈ ಮನೆ ಮದ್ದುಗಳನ್ನು ಬಳಸಿ

    ಇದನ್ನೂ ಓದಿ: ಗುಡುಗು, ಮಿಂಚು ಸಹಿತ ಮಳೆ.. ಎರಡನೇ ದಿನವೂ ವಿಮಾನ ಸೇವೆ ವ್ಯತ್ಯಯ!


    ಪ್ರಭಾಸ್​ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾನಿ ಸೇರಿದಂತೆ ಮುಂತಾದವರ ತಾರಾಗಣವಿದೆ. ವೈಜಯಂತಿ ಮೂವೀಸ್ ಅಡಿಯಲ್ಲಿ ಅಶ್ವಿನಿ ದತ್ ಚಿತ್ರವನ್ನು ನಿರ್ಮಿಸಿದ್ದು, ಸಂತೋಷ್ ನಾರಾಯಣನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts