ಆಗ್ರಾ: ಒಂದೆಡೆ ಸರ್ಕಾರ ದೇಶಾದ್ಯಂತ ಹಡಿರುವ ಕರೊನಾ ಸೋಂಕು ತಡೆಗಟ್ಟುವ ಜತೆಗೆ ಆರ್ಥಿಕ ಚಟುವಟಿಕೆಯ ಪುನರಾರಂಭಕ್ಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇನ್ನೊಂದೆಡೆ ಕೋವಿಡ್ 19ನಂಥ ಮಹಾಮಾರಿಯ ಚಿಕಿತ್ಸೆಯಲ್ಲಿ ಬಳಸಿದ ವೈಯಕ್ತಿಕ ರಕ್ಷಾ ಕವಚಗಳ (ಪಿಪಿಇ) ಸುರಕ್ಷಿತ ಹಾಗೂ ವೈಜ್ಞಾನಿಕ ವಿಲೇವಾರಿಯಲ್ಲಿ ಸಾಕಷ್ಟು ನ್ಯೂನತೆಗಳು ಕಂಡಬರಲಾರಂಭಿಸಿವೆ. ಇದರಿಂದಾಗಿ ದೇಶದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುವ ಬದಲು ಹೆಚ್ಚಾಗುವ ಭೀತಿ ಎದುರಾಗಿದೆ.
ಆಗ್ರಾದ ಕಂಟೋನ್ಮೆಂಟ್ ಪ್ರದೇಶದ ಸುತ್ತಮುತ್ತಲ ನಿವಾಸಿಗಳು ಹತ್ತಿರದಲ್ಲಿರುವ ಕಸದ ತೊಟ್ಟಿಯಲ್ಲಿ ಬಿಸಾಡಿರುವ ಪಿಪಿಇ ಕಿಟ್ಗಳನ್ನು ತೆಗೆದುಕೊಂಡು, ಒಣಗಿದ ಸೌದೆ ಸಾಗಿಸಲು ಬಳಸುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ನಿಯಮಿತ ರೈಲು ಸಂಚಾರ ಜೂನ್ 30ವರೆಗೂ ಆರಂಭವಾಗಲ್ಲ
ಆಗ್ರಾ ಕಂಟೋನ್ಮೆಂಟ್ ಪ್ರದೇಶದಲ್ಲಿ ಸ್ಮಶಾನವಿದೆ. ಇದರ ಬಳಿ ಒಂದು ಕಸದ ತೊಟ್ಟಿ ಇದ್ದು, ಅದರಲ್ಲಿ ಪಿಪಿಇಗಳನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಆ ಕಸದ ತೊಟ್ಟಿಯಲ್ಲಿದ್ದ ಪಿಪಿಇಯನ್ನು ತೆಗೆದುಕೊಂಡಿರುವ ಇಬ್ಬರು ಬಾಲಕರು ಅದರ ಮೇಲೆ ಒಣಗಿದ ಸೌದೆ ಇರಿಸಿ, ಎಳೆದುಕೊಂಡು ಹೋಗುತ್ತಿರುವುದು ವಿಡಿಯೋ ದೃಶ್ಯದಲ್ಲಿ ಕಾಣಬಹುದಾಗಿದೆ.
ಈ ರುದ್ರಭೂಮಿಯಿಂದ ಒಂದು ಕಿ.ಮೀ. ಅಂತರದಲ್ಲಿ ರೈಲ್ವೆ ಆಸ್ಪತ್ರೆ ಇದೆ. ಈ ಆಸ್ಪತ್ರೆ ಇದೀಗ ಕೋವಿಡ್ 19 ಐಸೋಲೇಷನ್ ಕೇಂದ್ರವಾಗಿ ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರೊನಾ ಸೋಂಕಿತರ ಚಿಕಿತ್ಸೆಯಲ್ಲಿ ಬಳಸಲಾಗಿದ್ದ ಪಿಪಿಇಯನ್ನು ಈ ಕಸದ ತೊಟ್ಟಿಯಲ್ಲಿ ಅವೈಜ್ಞಾನಿಕವಾಗಿ ವಿಲೇವಾರಿ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಕರೊನಾ ಯಾವಾಗ ನಿಯಂತ್ರಣಕ್ಕೆ ಬರಬಹುದೆಂದು ಊಹಿಸೋಕೆ ಸಾಧ್ಯವೇ ಇಲ್ಲ ಎಂದ ಡಬ್ಲ್ಯುಎಚ್ಒ
ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಗ್ರಾದ ಮುಖ್ಯ ವೈದ್ಯಾಧಿಕಾರಿ (ಸಿಎಂಒ) ಡಾ. ಆರ್.ಸಿ. ಪಾಂಡೆ, ವೈರಲ್ ಆಗಿರುವ ವಿಡಿಯೋ ತುಣುಕನ್ನು ತಾವು ನೋಡಿರುವುದಾಗಿಯೂ, ಈ ಪಿಪಿಇ ಕಿಟ್ ಸರ್ಕಾರಿ ಆಸ್ಪತ್ರೆಗಳಲ್ಲಿ ಬಳಸಲು ಖರೀದಿಸಿರುವುದು ಅಲ್ಲವೆಂದೂ ಸ್ಪಷ್ಟಪಡಿಸಿದ್ದಾರೆ.
ಪಿಪಿಇನ ಬಣ್ಣ ನೋಡಿದರೆ ಇದು ಸರ್ಕಾರಿ ಆಸ್ಪತ್ರೆಗಳಲ್ಲಿ ಬಳಸಲು ಖರೀದಿಸಲಾಗಿರುವ ಪಿಪಿಇಯಂತೆ ತೋರುತ್ತಿಲ್ಲ. ಬಹುಶಃ ಖಾಸಗಿ ಆಸ್ಪತ್ರೆಯವರು ತಮ್ಮಲ್ಲಿನ ಬಳಕೆಗೆ ಇದನ್ನು ಖರೀದಿಸಿದ್ದು, ಬಳಕೆಯಾದ ನಂತರದಲ್ಲಿ ಆಗ್ರಾ ಕಂಟೋನ್ಮೆಂಟ್ ಬಳಿ ರುದ್ರಭೂಮಿಯ ಕಸದ ತೊಟ್ಟಿಯಲ್ಲಿ ವಿಲೇವಾರಿ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: 77 ಸಾವಿರ ದಾಟಿದ ಕರೊನಾ ಸೋಂಕಿತರ ಸಂಖ್ಯೆ
ಅಲ್ಲದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಬಳಸಲಾಗುವ ಪಿಪಿಇಗಳ ಸುರಕ್ಷಿತ ಹಾಗೂ ವೈಜ್ಞಾನಿಕ ವಿಲೇವಾರಿಗಾಗಿ ಕ್ರಮ ಕೈಗೊಳ್ಳಲಾಗಿದೆ. ಅವನ್ನು ಬಳಸಿದ ಬಳಿಕ ಡಿಸ್ಇನ್ಫೆಕ್ಟ್ಗೊಳಿಸಿ, ಪ್ರತ್ಯೇಕ ಕಂಟೇನರ್ನಲ್ಲಿ ಸಂಗ್ರಹಿಸಲಾಗುತ್ತದೆ. ಬಳಿಕ ಅವನ್ನು ವಿಲೇವಾರಿ ಕೇಂದ್ರಕ್ಕೆ ರವಾನಿಸಲಾಗುತ್ತದೆ. ವಿಲೇವಾರಿ ಕೇಂದ್ರದಲ್ಲಿ ಅವನ್ನು ವಿದ್ಯುತ್ ಕುಲುಮೆಗೆ (ಫರ್ನೇಸ್) ಹಾಕಿ ಸುಡಲಾಗುತ್ತದೆ ಎಂದು ವಿವರಿಸಿದ್ದಾರೆ.
ಅಮಿತಾಭ್ ಬಚ್ಚನ್ ನಟನೆಯ ಗುಲಾಬೋ ಸಿತಾಬೋ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಗೆ ಸಿದ್ಧತೆ